ಬಾಲಕನ ಸಾವಿಗೆ ಕಾರಣ ಫುಡ್ ಪಾಯ್ಸನ್ ಅಲ್ಲ, ಹಾವು ಕಚ್ಚಿ ಸತ್ತಿರೋದು: ಪೊಲೀಸರ ವರದಿ ತಳ್ಳಿ ಹಾಕಿದ ವೈದ್ಯರು

Published : Apr 20, 2026, 01:05 PM IST

8 ವರ್ಷದ ಬಾಲಕನ ಸಾವಿಗೆ ವಿಷಕಾರಿ ಕಟ್ಟಾವು ಹಾವು ಕಡಿತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಫುಡ್ ಪಾಯ್ಸನಿಂಗ್ ಎಂದು ಶಂಕಿಸಲಾಗಿದ್ದ ಈ ಪ್ರಕರಣದಲ್ಲಿ, ಮಕ್ಕಳ ಮಲಗುವ ಕೋಣೆಯಲ್ಲೇ ಹಾವು ಪತ್ತೆಯಾಗಿದೆ. ಮೃತ ಬಾಲಕನ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ.

PREV
15
8 ವರ್ಷದ ಬಾಲಕ ಸಾವು

ಕೇರಳಂನ ತ್ರಿಶೂರ್‌ನ ಕೊಡಾಲಿಯಲ್ಲಿ ಹಾವು ಕಚ್ಚಿ 8 ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಈಗ ಒಂದು ಮಹತ್ವದ ತಿರುವು ಸಿಕ್ಕಿದೆ. ಮಗುವಿನ ಸಾವಿಗೆ ವಿಷಕಾರಿ ಕಟ್ಟಾವು ಹಾವಿನ (Common Krait) ಕಡಿತವೇ ಕಾರಣ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪೋಸ್ಟ್‌ಮಾರ್ಟಂನಲ್ಲಿ ಈ ಸತ್ಯಾಂಶ ಹೊರಬಿದ್ದಿದೆ. ಈ ಮೂಲಕ, ಫುಡ್ ಪಾಯ್ಸನಿಂಗ್‌ನಿಂದ ಮಗು ಸತ್ತಿರಬಹುದು ಎಂಬ ಪೊಲೀಸರ ಆರಂಭಿಕ ವರದಿಯನ್ನು ಫೋರೆನ್ಸಿಕ್ ಸರ್ಜನ್ ತಳ್ಳಿಹಾಕಿದ್ದಾರೆ.

25
ಇಂದು ಅಂತ್ಯಕ್ರಿಯೆ

ಮೃತ ಬಾಲಕ ಆಲ್ಜೋನ ಅಂತ್ಯಕ್ರಿಯೆ ಇಂದು ಸಂಜೆ 3 ಗಂಟೆಗೆ ತ್ರಿಶೂರ್‌ನ ಕೊಡುಂಗಪಳ್ಳಿಯಲ್ಲಿ ನಡೆಯಲಿದೆ. ಹಾವು ಕಡಿತದಿಂದ ಗಂಭೀರವಾಗಿ ಅಸ್ವಸ್ಥನಾಗಿರುವ ಆಲ್ಜೋನ 10 ವರ್ಷದ ಸಫೋದರ ಅನೋಜ್, ಐಸಿಯುನಲ್ಲಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. 

ಭಾನುವಾರ ಬೆಳಗ್ಗೆ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಪೋಷಕರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ಥಳೀಯರು ಅನುಮಾನಗೊಂಡು ಮನೆಯಲ್ಲಿ ಹುಡುಕಾಡಿದಾಗ, ಮಕ್ಕಳ ಮಲಗುವ ಕೋಣೆಯಲ್ಲೇ ಕಟ್ಟಾವು ಹಾವು ಪತ್ತೆಯಾಗಿತ್ತು. (ಸಾಂದರ್ಭಿಕ ಚಿತ್ರ)

35
ಆರಂಭದಲ್ಲಿ ಫುಡ್ ಪಾಯ್ಸನ್ ಶಂಕೆ

ಘಟನೆ ನಡೆದ ರಾತ್ರಿ, ಮಕ್ಕಳಿಬ್ಬರೂ ತಾಯಿಯ ಜೊತೆ ಮಲಗಿದ್ದರು. ಬೆಳಗಿನ ಜಾವ ಸುಮಾರ 2 ಗಂಟೆ ಸುಮಾರಿಗೆ ಇಬ್ಬರಿಗೂ ಹೊಟ್ಟೆನೋವು ಮತ್ತು ಸುಸ್ತು ಕಾಣಿಸಿಕೊಂಡಿದೆ. ರಾತ್ರಿ ತಿಂದ ಊಟ ಸರಿ ಹೋಗಿಲ್ಲವೇನೋ ಅಂತ ಪೋಷಕರು ಮೊದಲು ಅಂದುಕೊಂಡಿದ್ದರು. (ಸಾಂದರ್ಭಿಕ ಚಿತ್ರ)

45
ಹಾವು ಕಡಿತ

ನಂತರ ಮಕ್ಕಳ ಬಾಯಲ್ಲಿ ನೊರೆ ಬರಲು ಶುರುವಾದಾಗ, ಆತಂಕಗೊಂಡ ಪೋಷಕರು ಬೆಳಗ್ಗೆ 5 ಗಂಟೆಗೆ ಇಬ್ಬರನ್ನು ಚಾಲಕುಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಹಾವು ಕಡಿತದ ಬಗ್ಗೆ ಖಚಿತಪಡಿಸಿದ್ದಾರೆ. ಆದರೆ ಆಸ್ಪತ್ರೆ ತಲುಪಿದ ಕೆಲವೇ ನಿಮಿಷಗಳಲ್ಲಿ ಆಲ್ಜೋ ಪ್ರಾಣ ಬಿಟ್ಟಿದ್ದ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಢಂ ಎಂದ ಟೈರ್, ಸುಂಯ್ ಅಂತ ಜಾರಿದ ಬೈಕ್; ಅಪ್ಪ-ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟ ಮಗಳು

55
ರಬ್ಬರ್ ಮರಗಳ ತೋಟದಲ್ಲಿರುವ ಮನೆ

ಆಲ್ಜೋ ಮನೆ ರಬ್ಬರ್ ಮರಗಳ ತೋಟದ ಮಧ್ಯದಲ್ಲಿದೆ. ಈ ಪ್ರದೇಶದಲ್ಲಿ ಕಟ್ಟಾವು ಹಾವುಗಳು ಹೆಚ್ಚಾಗಿ ಕಾಣಸಿಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಮನೆಯ ಪಕ್ಕದಲ್ಲೇ ಇಟ್ಟಿದ್ದ ಸೌದೆ ರಾಶಿ ಮತ್ತು ಗೋಡೆ ಹಬ್ಬಿದ್ದ ಬಳ್ಳಿಗಳ ಮೂಲಕ ಹಾವು ಮನೆಯೊಳಗೆ ಬಂದಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹೊಡೆದು ಕೊಂದಿದ್ದ ಹಾವನ್ನು ಅರಣ್ಯ ಇಲಾಖೆಯವರು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: Bidar: ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ ಪತ್ತೆಯಾದ ಶವ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories