ಜ್ಯೋತಿ ಮಲ್ಹೋತ್ರಾ, ಪಾಕ್ ಸಂಪರ್ಕ
ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಳನ್ನ ಪಾಕಿಸ್ತಾನಕ್ಕೆ ಗೂಢಚರ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಹರಿಯಾಣ ನಿವಾಸಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಜ್ಯೋತಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲಕ್ಷಾಂತರ ಅನುಯಾಯಿಗಳಿದ್ದಾರೆ ಮತ್ತು ಅವರು ತಮ್ಮ ಪ್ರಯಾಣದ ವ್ಲಾಗ್‌ಗಳ ಮೂಲಕ ಪಾಕಿಸ್ತಾನದ ಚಿತ್ರಣವನ್ನು ಮೃದು ಮತ್ತು ಸಕಾರಾತ್ಮಕವಾಗಿ ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಷ್ಯ ಆಘಾತಕಾರಿಯಾಗಿದೆ.