ಸೋಶಿಯಲ್ ಮೀಡಿಯಾ ನೋಡ್ಕೊಂಡು ಹೋಗಿ ಕೂದಲು ಕಸಿ ಮಾಡಿಸಿಕೊಂಡ ಇಬ್ಬರು ಇಂಜಿನಿಯರ್‌ ಸಾವು

Published : May 16, 2025, 04:43 PM IST

ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ ಎಂದು ಖಾಸಗಿ ಕ್ಲಿನಿಕ್‌ನಲ್ಲಿ ಕೂದಲು ಕಸಿ ಮಾಡಿಸಿಕೊಂಡ ಇಬ್ಬರು ಇಂಜಿನಿಯರಿಂಗ್ ಯುವಕರು ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

PREV
14
ಸೋಶಿಯಲ್ ಮೀಡಿಯಾ ನೋಡ್ಕೊಂಡು ಹೋಗಿ ಕೂದಲು ಕಸಿ ಮಾಡಿಸಿಕೊಂಡ ಇಬ್ಬರು ಇಂಜಿನಿಯರ್‌ ಸಾವು
ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶದ ಇಬ್ಬರು ಯುವಕರು ಕೂದಲಿನ ಕಸಿಗಾಗಿ ಕಾನ್ಪುರರ ಖಾಸಗಿ ಕ್ಲಿನಿಕ್‌ಗೆ ಹೋದರು. ಆದರೆ ಅದು ಅವರ ಜೀವನದ ಕೊನೆಯ ತಪ್ಪು ಎಂದು ಅವರಿಗೆ ತಿಳಿದಿರಲಿಲ್ಲ. ಕೂದಲು ಕಸಿ ಮಾಡಿದ ನಂತರ ನೋವು, ಊತ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೊನೆಗೆ ಅವರು ಉರಿ, ಉರಿ ಎನ್ನುತ್ತಲೇ ಸಾವನ್ನಪ್ಪಿದ್ದಾರೆ. ಈಗ ಎರಡು ಕುಟುಂಬಗಳು ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿವೆ.

24

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಕುಟುಂಬಸ್ಥರ ಆಕ್ರೋಶ
ಮೊದಲ ಪ್ರಕರಣ:
ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದ ವಿಡಿಯೋ ನೋಡಿಕೊಂಡು ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿಕೊಂಡು ಉತ್ತರ ಪ್ರದೇಶದ ಇಂಜಿನಿಯರ್ ಮಯಾಂಕ್ ಕಟಾರಿಯಾ ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿದ್ದಾರೆ. 2023 ನವೆಂಬರ್ 18 ರಂದು ಕೂದಲು ಕಸಿ ಮಾಡಿಸಿಕೊಂಡರು. ಶಸ್ತ್ರಚಿಕಿತ್ಸೆಯ ಕೆಲವು ಗಂಟೆಗಳ ನಂತರ, ಮಯಾಂಕ್‌ಗೆ ತೀವ್ರ ನೋವು ಮತ್ತು ಊತ ಕಾಣಿಸಿಕೊಂಡಿತು. ಪರಿಸ್ಥಿತಿ ಹದಗೆಟ್ಟು ಮರುದಿನ ಅಂದರೆ ನವೆಂಬರ್ 19 ರಂದು ನಿಧನರಾದರು.

34

ಭಾರತದಲ್ಲಿ ಅಪಾಯಕಾರಿ ಕೂದಲು ಕಸಿ:

ಎರಡನೇ ಪ್ರಕರಣ: ಅದೇ ಕ್ಲಿನಿಕ್‌ನಲ್ಲಿ ವಿನೀತ್ ದುಬೆ ಎಂಬ ಇನ್ನೊಬ್ಬ ಇಂಜಿನಿಯರ್ ಮಾರ್ಚ್ 14 ರಂದು ಕೂದಲು ಕಸಿ ಮಾಡಿಸಿಕೊಂಡರು. ಆದರೆ ಸ್ವಲ್ಪ ಸಮಯದ ನಂತರ ಅವರು ಸಹ ಸಾವನ್ನಪ್ಪಿದರು. ವಿನೀತ್ ಪತ್ನಿ ಜಯಾ ದುಬೆ ಈ ಬಗ್ಗೆ ಕಾನ್ಪುರ ಪೊಲೀಸರಿಗೆ ದೂರು ನೀಡಿದರು.

44

ಪರವಾನಗಿ ಹಾಗೂ ಅನುಭವವಿಲ್ಲದೆ ಕ್ಲಿನಿಕ್ ನಡೆಸುತ್ತಿದ್ದಾರೆ. ಬಾಧಿತ ಕುಟುಂಬಗಳು ವೈದ್ಯ ಅನುಷ್ಕಾ ತಿವಾರಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲು ಸೂಕ್ತ ಪರವಾನಗಿ ಅಥವಾ ಅನುಭವವಿಲ್ಲ, ಕ್ಲಿನಿಕ್‌ನಲ್ಲಿ ತುರ್ತು ಸೌಲಭ್ಯಗಳಿಲ್ಲ ಎಂದು ಆರೋಪಿಸಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories