Ghost Town: ವಿಸ್ಮಯ, ನಿಗೂಢವಾಗಿರುವ ಈ ಸ್ಥಳಕ್ಕೆ ಪ್ರವಾಸ ಹೋಗಬೇಕಾ? ಇದೇ ಬೆಸ್ಟ್ ಟೈಂ! ಯಾಕೆ ಗೊತ್ತಾ?

Published : Oct 22, 2026, 12:55 PM IST

ಒಂದು ಕಾಲದಲ್ಲಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಈ ಪಟ್ಟಣ, ಅಂದು ನಡೆದ ಒಂದು ದುರಂತದಿಂದ ರಾತ್ರೋರಾತ್ರಿಯೇ ಸ್ಮಶಾನವಾಯ್ತು, ಅಪಾರ ಪ್ರಮಾಣದ ಜನರು ಸತ್ತರು, ಅಷ್ಟೇ ಕಣ್ಮರೆಯಾದರು. ಭಾರತದ ಕೊನೆಯ ನೆಲವಿದು. ಈ ಸ್ಥಳಕ್ಕೆ ಪ್ರವಾಸ ಮಾಡಲು ಕಾರಣಗಳು ಇಲ್ಲಿವೆ.

PREV
16
Dhanushkodi: ಭಾರತದ ಕೊನೆಯ ನೆಲ ಇದು!

ತಮಿಳುನಾಡಿನ ರಾಮೇಶ್ವರಂ ಬಳಿ ಇರುವ ಧನುಷ್ಕೋಡಿ(Dhanushkodi)ಯನ್ನು 'India's Last Land' ಎಂದು ಕರೆಯಲಾಗುತ್ತದೆ. ಒಂದು ಕಡೆ ಬಂಗಾಳ ಕೊಲ್ಲಿ ಮತ್ತೊಂದು ಕಡೆ ಹಿಂದೂ ಮಹಾಸಾಗರಗಳ ನಡುವೆ ನೆಲೆಗೊಂಡಿರುವ ಈ ಸ್ಥಳವು, 1964ರ ಚಂಡಮಾರುತ(catastrophic cyclone)ದಿಂದ ಉಳಿದುಕೊಂಡಿರುವ ಅವಶೇಷಗಳ ಜೊತೆಗೆ ಅತ್ಯಂತ ಸುಂದರ, ನೈಸರ್ಗಿಕ ಸೊಬಗಿನಿಂದ ಕೂಡಿದ ಈ ಸ್ಥಳವು ಪ್ರವಾಸಿಗರನ್ನು ಸೆಳೆಯುತ್ತಿದೆ.

ಇಂದು ಜನರಿಲ್ಲದೆ ಸ್ಮಶಾನ ಮೌನ ಆವರಿಸಿರಿವು ಈ ಪ್ರದೇಶದಲ್ಲಿ ಹಿಂದೆ ಜನಜಂಗುಳಿಯಿಂದ ಕೂಡಿದ್ದ ಒಂದು ಪಟ್ಟಣವಾಗಿತ್ತು. ಆದರೆ ಅಂದು ನಡೆದ ನೈಸರ್ಗಿಕ ದುರಂತ ಘಟನೆಯಿಂದಾಗಿ ಇಂದು ಜನವಸತಿ ಇಲ್ಲವಾದರೂ ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಒಂದು ವಿಶಿಷ್ಟ ತಾಣವಾಗಿ ಮಾರ್ಪಟ್ಟಿದೆ.

26
ಒಂದೇ ರಾತ್ರಿಯಲ್ಲಿ ನಿರ್ನಾಮವಾಯ್ತು ಧನುಷ್ಕೋಟಿ ಪಟ್ಟಣ.

ಧನುಷ್ಕೋಡಿ ಎಂದು ಕೇಳಿದೊಡನೆಯೇ ಕಣ್ಮುಂದೆ ಬರುವುದು ಸಮುದ್ರದ ಮಧ್ಯೆ ಹಾದುಹೋಗಿರುವ ರಸ್ತೆ, ವಿಶಾಲವಾದ ನೀಲಿ ಜಲರಾಶಿ, ಪಾಳುಬಿದ್ದು, ಇಂದಿಗೂ ಹಿಂದಿನ ಘಟನೆಗಳ ಕಥೆ ಹೇಳುವ ಕಟ್ಟಡಗಳ ದೃಶ್ಯಗಳು ಕಣ್ಣಮುಂದೆ ಬರುತ್ತವೆ. ಆದರೆ ಈ ಸೌಂದರ್ಯದ ಹಿಂದೆ ಎದೆನಡುಗಿಸುವಂತಹ ಮನಕಲಕುವ ಇತಿಹಾಸವೊಂದಿದೆ.

1964 ಡಿಸೆಂಬರ್ ನಲ್ಲಿ ಅಂದು ಏನಾಯ್ತು?

1964ರ ಡಿಸೆಂಬರ್‌ನಲ್ಲಿ ಈ ಪ್ರದೇಶಕ್ಕೆ ಭೀಕರ ಚಂಡಮಾರುತವೊಂದು ಅಪ್ಪಳಿಸಿತು. ಅದೆಷ್ಟು ಪ್ರಬಲವಾಗಿತ್ತೆಂದರೆ ಆ ರಕ್ಕಸ ಗಾಳಿಯ ವೇಗಕ್ಕೆ ಸಮುದ್ರದ ಅಲೆಗಳು ಭಯಂಕರ ಎತ್ತರಕ್ಕೆ ಎದ್ದು ಪಟ್ಟಣಕ್ಕೆ ಇಡೀ ಪಟ್ಟಣವನ್ನೇ ರಾತ್ರೋರಾತ್ರಿ ಹೊಸಕಿ ಹಾಕಿತು. ಇದ್ಯಾವುದರ ಅಪಾಯದ ಸೂಚನೆ ಇಲ್ಲದೆ ಮಲಗಿದ್ದ ಸಾವಿರಾರು ಜನರು, ಮನೆಗಳು, ರೈಲು ನಿಲ್ದಾಣ, ಚರ್ಚ್ ಸೇರಿದಂತೆ ಅನೇಕ ಕಟ್ಟಡಗಳು ನಾಶವಾದವು. ಈ ದುರಂತದಲ್ಲಿ ಅಪಾರ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡರು. ಒಂದು ಕಾಲದಲ್ಲಿ ಆರ್ಥಿಕ ಚಟುವಟಿಕೆ, ಜನಸಂಚಾರದಿಂದ ತುಂಬಿದ್ದ ಧನುಷ್ಕೋಡಿಯ ದುರಂತದ ಬಳಿಕ ಜನರೇ ಇಲ್ಲದ ಘೋಸ್ಟ್ ಟೌನ್ ಆಯ್ತು. ಅದೇ ಕಾರಣಕ್ಕೆ ಇಂದಿಗೂ ಈ ಸ್ಥಳವನ್ನು ಭೂತಗಳ ಪಟ್ಟಣ ಎಂದೇ ಕರೆಯಲಾಗುತ್ತಿದೆ.

36
ಎರಡು ಸಮುದ್ರಗಳ ಅದ್ಭುತ ಪ್ರಯಣ!

ಧನುಷ್ಕೋಡಿಗೆ ಅನೇಕ ಪ್ರವಾಸಿಗರನ್ನು ಆಕರ್ಷಿಸಲು ಮುಖ್ಯ ಕಾರಣವೆಂದರೆ ಎರಡು ಕಡೆಯ ಸಮುದ್ರ, ಮಧ್ಯಭಾಗದಲ್ಲಿ ಸಾಗುವ ರಸ್ತೆ. ರಾಮೇಶ್ವರದಿಂದ ಈ ಪ್ರದೇಶದ ಕಡೆಗೆ ಪ್ರಯಾಣಿಸುವಾಗ, ರಸ್ತೆಯ ಎರಡೂ ಬದಿಗಳಲ್ಲಿ ನೀಲಿ ಸಮುದ್ರ ನೋಡಬಹುದು. ನೀವು ಇನ್ನೂ ಮುಂದೆ ಸಾಗಿದಂತಲ್ಲ ಸುತ್ತಲಿನ ಭೂಮಿ ಚಿಕ್ಕದಾಗುತ್ತಾ ಹೋಗುತ್ತದೆ. ಮೊದಲಸಲ ಪ್ರವಾಸಕ್ಕೆ ಹೋಗಿದ್ದರೆ ಒಂದು ಸಣ್ಣ ನಡುಕ ಹುಟ್ಟುತ್ತದೆ. ಅಲ್ಲಿನ ಜಲರಾಶಿ, ನೈಸರ್ಗಿಕವೇ ಹಾಗಿದೆ. ಎಲ್ಲೆಡೆ ಸಮುದ್ರವೇ ವಿಸ್ತರಿಸಿಕೊಂಡಿರುವಂತಹ ಅನುಭವ ಉಂಟಾಗುತ್ತದೆ.

46
ಧನುಷ್ಕೋಟಿಯ ತುತ್ತತುದಿ ಅರಿಚಲ್ ಮುನ್ನೈ

ಧನುಷ್ಕೋಡಿಯ ತುತ್ತತುದಿಯಲ್ಲಿರುವ 'ಅರಿಚಲ್ ಮುನೈ' ಒಂದು ಪ್ರಮುಖ ಆಕರ್ಷಣೆ. ಇಲ್ಲಿ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳು ಸಂಧಿಸುವುದನ್ನು ಕಾಣಬಹುದು. ಈ ಎರಡು ಜಲರಾಶಿಗಳಲ್ಲಿ ನೀರಿನ ಬಣ್ಣ ಮತ್ತು ಅಲೆಗಳ ಸ್ವರೂಪವು ವಿಭಿನ್ನವಾಗಿರುವುದು ಪ್ರವಾಸಿಗರಿಗೆ ವಿಶೇಷ ಕುತೂಹಲವನ್ನು ಉಂಟುಮಾಡುತ್ತದೆ.

56
ರಾಮ ಸೇತುವೆಗೆ ಸಂಬಂಧಿಸಿದ ನಂಬಿಕೆಗಳು

ಧನುಷ್ಕೋಡಿಯು ಐತಿಹಾಸಿಕ ಮಹತ್ವ, ಆಧ್ಯಾತ್ಮಿಕ ಗುರುತು ಎರಡನ್ನೂ ಹೊಂದಿದೆ. ಶ್ರೀರಾಮನು ವಾನರ ಸೇನೆಯ ಸಹಾಯದಿಂದ ಲಂಕೆಯನ್ನು ತಲುಪಲು ನಿರ್ಮಿಸಿದ ಸೇತುವೆಯೇ 'ರಾಮ ಸೇತು' ಎಂದು ನಂಬಲಾಗಿದೆ. ಭಾರತದ ಪಂಬನ್ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪದವರೆಗೆ ಸುಣ್ಣದ ಕಲ್ಲುಗಳ ರಚನೆಗಳು, ಮರಳಿನ ದಿಬ್ಬಗಳು ಮತ್ತು ಹವಳದ ಬಂಡೆಗಳ ಸರಪಳಿಯೊಂದು ವಿಸ್ತರಿಸಿದೆ. ಇದನ್ನು 'ಆಡಮ್ಸ್ ಬ್ರಿಡ್ಜ್' (Adam's Bridge) ಎಂದೂ ಕರೆಯಲಾಗುತ್ತದೆ.

66
ಅಲ್ಲಿಗೆ ಹೋಗುವುದು ಹೇಗೆ? ಯಾವ ತಿಂಗಳು ಉತ್ತಮ?

ರಾಮೇಶ್ವರದಿಂದ ಧನುಷ್ಕೋಡಿಗೆ ನೀವು ರಸ್ತೆ ಮಾರ್ಗದ ಮೂಲಕ ತಲುಪಬಹುದು. ಇಲ್ಲಿ ನೀವು ಅರಿಚಲ್ ಮುನೈ, ಧನುಷ್ಕೋಡಿ ಕಡಲತೀರ, ಹಳೆಯ ಚರ್ಚ್‌ನ ಅವಶೇಷಗಳು ಮತ್ತು ಹಿಂದೆ ಇದ್ದ ಪಟ್ಟಣದ ಕುರುಹುಗಳನ್ನು ನೋಡಬಹುದು. ಸಾಮಾನ್ಯವಾಗಿ, ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಅವಧಿಯಲ್ಲಿ ಹವಾಮಾನವು ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ. ನಿಮ್ಮ ಪ್ರವಾಸದ ಬಗ್ಗೆ ಪ್ಲಾನ್ ಮಾಡುವ ಮೊದಲು ಅಲ್ಲಿನ ಹವಾಮಾನ, ರಸ್ತೆ ಸ್ಥಿತಿಗತಿ ಮತ್ತು ಪ್ರವಾಸಿಗರಿಗೆ ಪ್ರವೇಶವಿರುವ ಸಮಯದ ಬಗ್ಗೆ ಪರಿಶೀಲಿಸಿಕೊಳ್ಳುವುದು ಸೂಕ್ತ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories