Climate Change Crisis Heat Waves Melting Himalayas Drought: ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಹೀಟ್ ವೇವ್‌ನಿಂದ ಭೂಮಿಯ ಮೇಲಾಗುತ್ತಿರುವ ಗಂಭೀರ ಪರಿಣಾಮಗಳು ಹಾಗೂ ಭವಿಷ್ಯದ ಅಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿ.
ಕಳೆದೆರಡು ದಶಕಗಳಿಂದ ದಿನೇದಿನೇ ಭೂಮಿಯಲ್ಲಿ ವಿಚಿತ್ರ ಬೆಳವಣಿಗೆಗಳು ನಡೆಯಲಾರಂಭಿಸಿವೆ. ಒಂದು ಕಡೆ ವಿವಿಧ ರೀತಿಯಿಂದ ವಾಯು, ಜಲ, ನೆಲ, ಮಾಲಿನ್ಯದಿಂದ ಭೂಮಿಯ ಪರಿಸರವು ತೀವ್ರ ಬಿಸಿಯಾಗುತ್ತಿದೆ. ಅಲ್ಲದೆ ಇದು ಪ್ರತಿವರ್ಷವೂ ಹೆಚ್ಚುತ್ತಲೇ ಸಾಗಿದೆ. ಇನ್ನೊಂದೆಡೆ ನೇಪಾಳ, ಅಸ್ಸಾಂನಲ್ಲಿ ಸಂಭವಿಸಿದ ಭಾರೀ ಸ್ಫೋಟ ಪ್ರವಾಹವನ್ನು ನಾವು ಇತ್ತೀಚಿಗೆ ನೋಡಲಾರಂಭಿಸಿದ್ದೇವೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಹಿಂದಿನಿಂದಲೂ ಹಿಮಾಲಯ ಕರುಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳು ಈಗ ಇನ್ನೂ ಗಂಭೀರ ರೂಪಗಳಲ್ಲಿ ಮುನ್ನೆಲೆಗೆ ಬರುತ್ತಿವೆ.
25
ಭೂಮಿಯ ಹವಾಮಾನ ಬದಲಾಗುತ್ತಿರುವ ವೇಗ ಹೇಗಿದೆ ಗೊತ್ತಾ?
ಇದು ನಿನ್ನೆ ಮೊನ್ನೆಯಿಂದ ಸಂಭವಿಸುತ್ತಿರುತ್ತಿರುವುದು ಅಲ್ಲ, ಜುಲೈ 6, 2008 ರಿಂದ ಭೂಮಿಯ ಮೇಲೆ ಪ್ರತಿದಿನ ಕನಿಷ್ಠ ಒಂದು ಶಾಖದ ಬಿರುಗಾಳಿ ರೂಪುಗೊಳ್ಳುತ್ತಿದೆ ಎಂದು ಹೇಳಲಾಗಿದೆ. ಈ ಸರಣಿಯು 18 ವರ್ಷಗಳಿಂದಲೂ ನಡೆಯುತ್ತಿದ್ದು, ಇನ್ನೂ ಮುಗಿದಿಲ್ಲ. ಭೂಮಿಯ ಹವಾಮಾನ ಬದಲಾಗುತ್ತಿರುವ ರೀತಿ ವೇಗ ನೋಡಿದರೆ ಮುಂದಿನ ದಿನಗಳು ಮನುಷ್ಯರು ಬದುಕುವುದು ಸವಾಲಾಗಿ ಪರಿಣಮಿಸಲಿದೆ.
35
ಏನಿದು ಹೀಟ್ ವೇವ್?
ಏನಿದು ಹೀಟ್ ವೇವ್?
ಈ ಬಾರಿ ಭಾರತದಾದ್ಯಂತ ಒಟ್ಟಾರೆ ಮುಂಗಾರು ಮಳೆಯೇ ಕುಸಿದು, ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ, ಮಳೆಗಾಲದಲ್ಲಿ ಬೇಸಿಗೆಯಂತಹ ಬಿಸಿಲು , ಉಷ್ಣ ಬಿರುಗಾಳಿ, ಇದು ಕೇವಲ ನಗರದಲ್ಲಿನ ತಾಪಮಾನ ಏರಿಕೆಯಲ್ಲ, ಜಾಗತಿಕವಾಗಿಯೂ ಭೂಮಿ ತೀವ್ರಗತಿಯಲ್ಲಿ ಬಿಸಿಯಾಗುತ್ತಿದೆ. ಸಮುದ್ರಗಳೇ ಕುದಿಯುತ್ತಿವೆ. ಹಿಮಾಲಯದ ಮಂಜುಗಡ್ಡೆಯೂ ತೀವ್ರವಾಗಿ ಕರುಗುತ್ತಿವೆ.
ಉಷ್ಣಾಂಶ ಹೆಚ್ಚಳ, ಹೀಟ್ ವೇವ್, ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ರಾತ್ರಿಯ ತಾಪಮಾನವು ಕಡಿಮೆಯಾಗುವುದಿಲ್ಲ. ಇದರರ್ಥ ದೇಹ ಹಗಲಿನ ಶಾಖದಿಂದ ಚೇತರಿಸಿಕೊಳ್ಳಲು ಕೂಡ ಅವಕಾಶ ಇಲ್ಲದಂತಾಗಿದೆ. ಹಗಲು ರಾತ್ರಿ ಶಾಖದ ಬಿಸಿಗೆ ಹೃದಯದ ಸಮಸ್ಯೆಗಳ ಅಪಾಯ ಹೆಚ್ಚುತ್ತಿದೆ. ಪಳೆಯುಳಿಕೆ ಇಂಧನಗಳ ಹೆಚ್ಚಿದ ಬಳಕೆ, ಕಲ್ಲಿದ್ದಲು ಮತ್ತು ತೈಲದ ದಹನ, ಅರಣ್ಯನಾಶ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯಿಂದಾಗಿ ಭೂಮಿಯ ಉಷ್ಣತೆಯು ಇನ್ನಷ್ಟು ಹೆಚ್ಚುತ್ತಿರುವ ಬಗ್ಗೆ ಹವಾಮಾನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಂತಹ ಮಹಾನಗರ ಬೆಳೆದಂತೆಲ್ಲ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುವುದು ಮರಗಳಿದ್ದ ಜಾಗದಲ್ಲಿ ಬೃಹತ್ ಕಾಂಕ್ರಿಟ್ ಕಟ್ಟಡಗಳು, ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ರಾತ್ರಿ ಕೂಡ ಶಾಖದ ಪರಿಣಾಮ ಹೆಚ್ಚಾಗಿ ಕಂಡುಬರುತ್ತೆ. ಇದರಿಂದ ಹಿರಿಯ ನಾಗರಿಕರು, ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ.
ದಿನೇದಿನೆ ಹೆಚ್ಚುತ್ತಿರುವ ಶಾಖದ ಪರಿಣಾಮದಿಂದಾಗಿ ಮಳೆಯ ಕೊರತೆಯಾಗುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಮಳೆ ಬಾರದೆ ಕೃಷಿ ಬೆಳೆಗಳಿಗೆ ನೀರಿಲ್ಲದೆ ರೈತರ ಫಸಲು ಒಣಗಿ ಹಾಳಾಗುತ್ತಿವೆ. ಇದರ ಪರಿಣಾಮ ಆಹಾರದ ಕೊರತೆ ಬೆಲೆಗಳು ಏರಿಕೆಯಾಗುತ್ತಿದೆ. ಇತ್ತ ಕೃಷಿ ನಾಶದಿಂದ ಆಹಾರದ ಕೊರತೆ, ಕುಡಿದು ಬದುಕೋಣವೆಂದರೆ ಜಲಮೂಲಗಳೇ ಖಾಲಿ. ಹೀಗಾದಾಗ ಬದುಕು ಅಸಹನೀಯವೆನಿಸುತ್ತಿದೆ.
55
ತಾಪಮಾನ ಏರಿಕೆ ಮಂಜುಗಡ್ಡೆ ಕರಗುತ್ತಿದೆ.
ಕಳೆದೆರಡು ದಶಕಗಳಿಂದ ಭೂಮಿ ತೀವ್ರವಾಗಿ ಬದಲಾಗುತ್ತಿದ್ದರೂ ಎಚ್ಚೆತ್ತುಕೊಳ್ಳದಿದ್ದರೆ, ಏರುತ್ತಿರುವ ತಾಪಮಾನವನ್ನು ತಡೆಗಟ್ಟಲು ಮುಂದಾಗದಿದ್ದರೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡದಿದ್ದರೆ, ಮರಗಳನ್ನು ಬೆಳೆಸದಿದ್ದರೆ, ನವೀಕರಿಸಬಹುದಾದ ಶಕ್ತಿಯನ್ನು ಬಳಸದಿದ್ದರೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡದಿದ್ದರೆ ಇನ್ನು ಕೆಲವು ವರ್ಷಗಳಲ್ಲಿ ಬದುಕುವದು ಕಷ್ಟವಾದೀತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ