Gold Reserves: ಅತಿ ಹೆಚ್ಚು ಚಿನ್ನ ಸಂಗ್ರಹ ಮಾಡಿಕೊಂಡಿರುವ ಟಾಪ್ 10 ದೇಶಗಳು, ಭಾರತದ ಸ್ಥಾನವೆಷ್ಟು?

Published : Oct 18, 2026, 10:36 PM IST

ಜಗತ್ತಿನ ಹಲವು ದೇಶಗಳು ತಮ್ಮ ಚಿನ್ನದ ನಿಕ್ಷೇಪವನ್ನು ಹೆಚ್ಚಿಸಿಕೊಳ್ಳುತ್ತಿವೆ. ಜಾಗತಿಕ ಗೋಲ್ಡ್ ರಿಸರ್ವ್ ಪಟ್ಟಿಯಲ್ಲಿ ಚೀನಾ 5ನೇ ಸ್ಥಾನಕ್ಕೇರಿದೆ. ಹಾಗಾದರೆ ಭಾರತದ ಬಳಿ ಎಷ್ಟು ಚಿನ್ನವಿದೆ? ಎಷ್ಟನೇ ಸ್ಥಾನದಲ್ಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

PREV
15
ಗೋಲ್ಡ್ ರಿಸರ್ವ್ ಟಾಪ್ ದೇಶಗಳ ಲಿಸ್ಟ್ ನೋಡಿದ್ರೆ ಶಾಕ್ ಆಗ್ತೀರಾ

ಜಾಗತಿಕ ಆರ್ಥಿಕತೆಯಲ್ಲಿ ಚಿನ್ನ ಎಷ್ಟು ಮುಖ್ಯ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಕಷ್ಟಕಾಲದಲ್ಲಿ ದೇಶದ ಆರ್ಥಿಕತೆಯನ್ನು ಕಾಪಾಡುವುದೇ ಈ ಚಿನ್ನದ ನಿಕ್ಷೇಪ. ಹೊಸ ಗ್ಲೋಬಲ್ ಡೇಟಾ ಪ್ರಕಾರ, ಅತಿ ಹೆಚ್ಚು ಚಿನ್ನ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಚೀನಾ ಭಾರಿ ಮುನ್ನಡೆ ಸಾಧಿಸಿದೆ. ರಷ್ಯಾವನ್ನು ಹಿಂದಿಕ್ಕಿ ಜಗತ್ತಿನ 5ನೇ ಅತಿದೊಡ್ಡ ಗೋಲ್ಡ್ ರಿಸರ್ವ್ ಹೊಂದಿರುವ ದೇಶವಾಗಿ ಚೀನಾ ಹೊರಹೊಮ್ಮಿದೆ. ಸದ್ಯ ಚೀನಾಕ್ಕಿಂತ ಮುಂದೆ ಅಮೆರಿಕ, ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಮಾತ್ರ ಇವೆ.

ಪ್ರಮುಖ ಫೈನಾನ್ಷಿಯಲ್ ಪ್ಲಾಟ್‌ಫಾರ್ಮ್ 'ದಿ ಕೋಬೆಸ್ಸಿ ಲೆಟರ್' ಬಿಡುಗಡೆ ಮಾಡಿದ ವರದಿ ಪ್ರಕಾರ, ಚೀನಾ ಬಳಿ ಈಗ ಬರೋಬ್ಬರಿ 2,410 ಟನ್ ಚಿನ್ನದ ನಿಕ್ಷೇಪವಿದೆ. ಟಾಪ್-3 ಪಟ್ಟಿಗೆ ಸೇರಲು ಚೀನಾ ಈಗ ಬಹಳ ಹತ್ತಿರದಲ್ಲಿದೆ. ಫ್ರಾನ್ಸ್ ಬಳಿ 2,437 ಟನ್ ಹಾಗೂ ಇಟಲಿ ಬಳಿ 2,452 ಟನ್ ಚಿನ್ನವಿದೆ.

ಅಂದರೆ, ಚೀನಾ ಈಗ ಫ್ರಾನ್ಸ್‌ಗಿಂತ ಕೇವಲ 27 ಟನ್ ಮತ್ತು ಇಟಲಿಗಿಂತ 42 ಟನ್ ಮಾತ್ರ ಹಿಂದಿದೆ. ಇನ್ನು ಈ ಪಟ್ಟಿಯಲ್ಲಿ ಭಾರತ 881 ಟನ್ ಚಿನ್ನದೊಂದಿಗೆ 8ನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಚೀನಾ ಬಳಿ ಸುಮಾರು 3 ಪಟ್ಟು ಹೆಚ್ಚು ಚಿನ್ನ ಇರುವುದು ಗಮನಾರ್ಹ.

25
ಈ ವರ್ಷದ ಅಂತ್ಯಕ್ಕೆ ಟಾಪ್-3 ಸೇರುತ್ತಾ ಚೀನಾ?

ಚೀನಾದ ಸೆಂಟ್ರಲ್ ಬ್ಯಾಂಕ್ ಆಗಿರುವ 'ಪೀಪಲ್ಸ್ ಬ್ಯಾಂಕ್ ಆಫ್ ಚೀನಾ' ಸತತವಾಗಿ ಚಿನ್ನವನ್ನು ಖರೀದಿಸುತ್ತಲೇ ಇದೆ. ಇದೇ ವೇಗದಲ್ಲಿ ಖರೀದಿ ಮುಂದುವರಿದರೆ, ಈ ವರ್ಷದ ಅಂತ್ಯದ ವೇಳೆಗೆ ಚೀನಾ.. ಫ್ರಾನ್ಸ್ ಮತ್ತು ಇಟಲಿಯನ್ನು ಹಿಂದಿಕ್ಕಿ ಜಗತ್ತಿನ 3ನೇ ಅತಿದೊಡ್ಡ ಚಿನ್ನದ ನಿಕ್ಷೇಪ ಹೊಂದಿರುವ ದೇಶವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

35
ಸತತ 23 ತಿಂಗಳುಗಳಿಂದ ಭಾರಿ ಖರೀದಿ

ಚೀನಾ ಕಳೆದ 23 ತಿಂಗಳುಗಳಿಂದ ಒಂದು ತಿಂಗಳೂ ಗ್ಯಾಪ್ ಕೊಡದೆ ನಿರಂತರವಾಗಿ ಚಿನ್ನ ಖರೀದಿಸುತ್ತಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ಚೀನಾ ಬ್ಯಾಂಕ್ ಬರೋಬ್ಬರಿ 23 ಟನ್‌ಗೂ ಹೆಚ್ಚು ಚಿನ್ನವನ್ನು ಖರೀದಿಸಿದೆ. ಕಳೆದ ಒಂದು ವರ್ಷದಲ್ಲಿ ಚೀನಾ ಒಂದೇ ತಿಂಗಳಲ್ಲಿ ಮಾಡಿದ ಅತಿದೊಡ್ಡ ಖರೀದಿ ಇದಾಗಿದೆ. ಇದಕ್ಕೂ ಮುನ್ನ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲೂ ತಲಾ 20 ಟನ್‌ಗೂ ಹೆಚ್ಚು ಚಿನ್ನವನ್ನು ತನ್ನ ಖಜಾನೆಗೆ ಸೇರಿಸಿಕೊಂಡಿತ್ತು. ಈ ವರ್ಷ ಸೆಪ್ಟೆಂಬರ್ ವರೆಗೆ ನೋಡಿದರೆ ಚೀನಾ ಒಟ್ಟು 103 ಟನ್‌ಗೂ ಹೆಚ್ಚು ಹೊಸ ಚಿನ್ನವನ್ನು ಖರೀದಿಸಿದೆ.

45
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ

ಒಂದೆಡೆ ದೇಶಗಳು ತಮ್ಮ ಚಿನ್ನದ ನಿಕ್ಷೇಪವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಗ್ಲೋಬಲ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ಬ್ಲೂಮ್‌ಬರ್ಗ್ ಡೇಟಾ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಪ್ರತಿ ಔನ್ಸ್‌ಗೆ 4,207 ಡಾಲರ್ ತಲುಪಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ 61.12 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ಚಿನ್ನದ ಬೆಲೆ ಹೀಗೆ ದಿಢೀರ್ ಏರಿಕೆಯಾಗಲು ಎರಡು ಪ್ರಮುಖ ಕಾರಣಗಳಿವೆ..

1. ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಹಣದುಬ್ಬರದ ಮೇಲಿನ ಆತಂಕ ಕೊಂಚ ಕಡಿಮೆಯಾಗಿದೆ.

2. ಅಮೆರಿಕನ್ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ಏರಿಕೆಯನ್ನು ನಿಲ್ಲಿಸಲಿದೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಹೀಗಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿ ಮತ್ತೆ ಚಿನ್ನದ ಮೇಲೆ ಭಾರಿ ಹೂಡಿಕೆ ಮಾಡುತ್ತಿದ್ದಾರೆ.

55
ಜಗತ್ತಿನ ಟಾಪ್ 10 ಗೋಲ್ಡ್ ರಿಸರ್ವ್ ದೇಶಗಳಿವು

'ದಿ ಕೋಬೆಸ್ಸಿ ಲೆಟರ್' ಡೇಟಾ ಪ್ರಕಾರ.. ಚಿನ್ನದ ನಿಕ್ಷೇಪಗಳ (ಟನ್‌ಗಳಲ್ಲಿ) ಟಾಪ್ 10 ಲಿಸ್ಟ್ ಇಲ್ಲಿದೆ:

1. ಅಮೆರಿಕ - 8,133

2. ಜರ್ಮನಿ - 3,351

3. ಇಟಲಿ - 2,452

4. ಫ್ರಾನ್ಸ್ - 2,437

5. ಚೀನಾ - 2,410

6. ರಷ್ಯಾ - 2,305

7. ಸ್ವಿಟ್ಜರ್ಲೆಂಡ್ - 1,040

8. ಭಾರತ - 881

9. ಜಪಾನ್ - 846

10. ನೆದರ್ಲ್ಯಾಂಡ್ಸ್ - 613

ಗಮನಿಸಿ: ಈ ಲಿಸ್ಟ್‌ನಲ್ಲಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ನಿಕ್ಷೇಪಗಳನ್ನು ಸೇರಿಸಿಲ್ಲ. ಐಎಂಎಫ್ ಬಳಿ ಸುಮಾರು 2,814 ಟನ್ ಚಿನ್ನವಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories