ತೂಕ ಕಡಿಮೆಯಾಗಬೇಕು ಅಂತ ಹೀಗೆಲ್ಲಾ ಮಾಡೋದು ಸಿಕ್ಕಾಪಟ್ಟೆ ಡೇಂಜರಸ್!

First Published Feb 6, 2023, 6:20 PM IST

ತೂಕ ನಷ್ಟವು ಲಾಂಗ್ ಜರ್ನಿ. ಆದರೆ ಕೆಲವರು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ತಪ್ಪು ಮತ್ತು ಅನಾರೋಗ್ಯಕರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ತೂಕ ಇಳಿಯಬಹುದು, ಆದ್ರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 

ಅಧಿಕ ತೂಕ ಹೊಂದಿರುವ ಜನರು ಸಾಧ್ಯವಾದಷ್ಟು ಬೇಗ ತೂಕ ಇಳಿಸಿಕೊಳ್ಳಲು(Weightloss) ಬಯಸುತ್ತಾರೆ. ಅವರು ತಿಂಗಳಲ್ಲಿ ಎಂಟರಿಂದ ಹತ್ತು ಕಿಲೋಗಳಷ್ಟು ತೂಕವನ್ನು ಕಳೆದುಕೊಳ್ಳುವ ಆಸೆ ಹೊಂದಿರುತ್ತಾರೆ. ಈ ವೇಗದ ತೂಕ ಇಳಿಸುವ ಪ್ರಯಾಣದಲ್ಲಿ, ನಾವು ಅಂತಹ ಅನೇಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ, ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಆದ್ದರಿಂದ, ಈ ವಿಧಾನಗಳನ್ನು ಪಾಲಿಸೋದು ಸರಿಯಲ್ಲ ಎನ್ನಲಾಗುತ್ತೆ.

ಸ್ವಲ್ಪ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಿಲ್ಲ ಎಂದಲ್ಲ. ಆದರೆ ನೀವು ಅಳವಡಿಸಿಕೊಂಡ ವಿಧಾನವೂ ಆರೋಗ್ಯಕರವಾಗಿರೋದು ಮುಖ್ಯ. ಊಟ ಬಿಟ್ಟುಬಿಡುವ ಮೂಲಕ ಅಥವಾ ಅತಿಯಾಗಿ ವ್ಯಾಯಾಮ(Exercise) ಮಾಡುವ ಮೂಲಕ ತೂಕ ಕಳೆದುಕೊಳ್ಳಬಹುದು. ಆದರೆ ಕಳೆದುಹೋದ ಈ ತೂಕವು ಮರಳಿ ಬರುತ್ತೆ. ಇದು ಮಾತ್ರವಲ್ಲ, ಈ ವಿಧಾನಗಳು ನಿಮ್ಮ ದೇಹಕ್ಕೆ ಹಾನಿ ಮಾಡುತ್ತವೆ. ಇಲ್ಲಿ ತೂಕ ನಷ್ಟದ ಕೆಲವು ಕೆಟ್ಟ ವಿಧಾನಗಳ ಬಗ್ಗೆ ತಿಳಿದು, ,ಸಾಧ್ಯವಾದಷ್ಟು ಇದನ್ನು ಮಾಡೋದನ್ನು ಅವಾಯ್ಡ್ ಮಾಡಿ.  

ಕೆಲವು ಆಹಾರ ಸಂಪೂರ್ಣವಾಗಿ ಅವಾಯ್ಡ್(Avoid) ಮಾಡೋದು
ತೂಕ ಇಳಿಸಬೇಕು ಅಂದ್ರೆ,, ಕೆಲವು ಆಹಾರಗಳನ್ನು ತಪ್ಪಿಸೋದು ಒಳ್ಳೆಯದು. ಆದರೆ ನಿಮ್ಮ ಆಹಾರದಿಂದ ಕೆಲವೊಂದು ಆಹಾರಗಳನ್ನು ಅವಾಯ್ಡ್ ಮಾಡೋದು ಒಳ್ಳೆದಲ್ಲ. ಎಲ್ಲಾ ಆಹಾರ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ ಎಂಬುದನ್ನು  ನೆನಪಿನಲ್ಲಿಡಬೇಕು. ನಿಮ್ಮ ಆಹಾರದಿಂದ ಕೆಲವು ಆಹಾರವನ್ನು ನೀವು ಹೊರಗಿಡಬೇಕಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ, ಬದಲಿಗೆ ಅವುಗಳನ್ನು ಬ್ಯಾಲೆನ್ಸ್ ಮಾಡುವ ಅಗತ್ಯವಿದೆ. 

ಕೇವಲ ತೂಕ ಇಳಿಸುವ ಶೇಕ್ (Shake) ಸೇವಿಸೋದು
ತೂಕ ಇಳಿಸುವ ಸಮಯದಲ್ಲಿ ಪ್ರೋಟೀನ್ ಶೇಕ್ ಅಥವಾ ವೈಟ್ ಲಾಸ್ ಶೇಕ್  ಸೇವಿಸಲಾಗುತ್ತೆ. ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಪ್ರೋಟೀನ್ ಶೇಕ್  ಉತ್ತಮವಾಗಿರಬಹುದು, ಇಡೀ ದಿನ  ಶಕ್ತಿ ನೀಡುತ್ತೆ ಆದರೆ ಅವುಗಳನ್ನೇ ಅವಲಂಬಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಮೂರು ಮುಖ್ಯ ಊಟಗಳಲ್ಲಿ  ಈ ಶೇಕ್ ಗಳನ್ನು ಸೇವಿಸಿದ್ರೆ, ದೇಹವು ಇತರ ಅನೇಕ ಅಗತ್ಯ ಪೋಷಕಾಂಶಗಳನ್ನು ಪಡೆಯೋದಿಲ್ಲ. ಹಾಗಾಗಿ, ನೀವು ಈ ಶೇಕ್ ಗಳನ್ನು ದೀರ್ಘಕಾಲದವರೆಗೆ ಸೇವಿಸಿದ್ರೆ ಮತ್ತು ನಂತರ ಸೋಲಿಡ್  ಆಹಾರ ತೆಗೆದುಕೊಳ್ಳಲು ಪ್ರಾರಂಭಿಸಿದ್ರೆ, ಅದು ಕಳೆದುಹೋದ ತೂಕವನ್ನು ಮರಳಿ ತರುತ್ತೆ.

ಹೆಚ್ಚು ಸಮಯ ಜಿಮ್ (Gym) ಮಾಡೋದು
ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡೋದು ಮುಖ್ಯ. ಆದರೆ, ಕೆಲವರು ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಜಿಮ್ ನಲ್ಲಿ ಕಳೆಯಲು ಪ್ರಾರಂಭಿಸುತ್ತಾರೆ. ಇದು ಹೆಚ್ಚುವರಿ ತೂಕ ಮತ್ತು ಕ್ಯಾಲೊರಿಗಳನ್ನು ಬೇಗನೆ ಸುಡಲು ಹೆಲ್ಪ್ ಮಾಡಿಕೊಡುತ್ತೆ  ಎಂದು ಅವರು ಭಾವಿಸುತ್ತಾರೆ. ಆದರೆ, ಅತಿಯಾದ ವ್ಯಾಯಾಮವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಇದು ನಿಮ್ಮನ್ನು ದುರ್ಬಲ ಮತ್ತು ದಣಿವನ್ನು ಉಂಟುಮಾಡುತ್ತೆ.

ತೂಕ ಇಳಿಸಿಕೊಳ್ಳಲು ಅನಾರೋಗ್ಯಕರ ಮಾರ್ಗ ತಿಳಿಯಿರಿ
ಇದು ನಾವು ಮಾಡುವ ಸಾಮಾನ್ಯ ವಿಷಯ. ತೂಕ ನಷ್ಟದ ಸಮಯದಲ್ಲಿ, ನಾವು ನಮ್ಮ ಆಹಾರದ(Food) ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತೇವೆ. ಆದರೆ ಇದನ್ನು ಮಾಡಿದಾಗ, ಅದು ನಿಮ್ಮ ಆಹಾರದ ಕಡುಬಯಕೆಯನ್ನು ಇನ್ನಷ್ಟು ಹೆಚ್ಚಿಸುತ್ತೆ. ಈ ಕಾರಣದಿಂದಾಗಿ ತೂಕ ಇಳಿಸಿಕೊಳ್ಳಲು ತುಂಬಾ ಕಷ್ಟ. ನಿಮಗೆ, ತೂಕ ಇಳಿಸುವ ಜರ್ನಿ ಹೊರೆಯಂತೆ ಆಗುತ್ತೆ ಮತ್ತು ನಂತರ ನೀವು ಅತಿಯಾಗಿ ತಿನ್ನಲು ಪ್ರಾರಂಭಿಸುತ್ತೀರಿ. ಹಾಗಾಗಿ, ತೂಕ ಇಳಿಸುವ ಸಮಯದಲ್ಲಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಚೀಟ್ ಮೀಲ್ಸ್ ತೆಗೆದುಕೊಳ್ಳಲು ಪ್ರಯತ್ನಿಸಿ. ಇದು ತೂಕ ಇಳಿಸಿಕೊಳ್ಳಲು ನಿಮಗೆ ಪ್ರೇರಣೆ ನೀಡುತ್ತೆ .

ತೂಕ ಇಳಿಸುವ ಸಮಯದಲ್ಲಿ ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದನ್ನು ತಪ್ಪಿಸಬೇಕು. ಬದಲಾಗಿ, ತೂಕ ಇಳಿಸಿಕೊಳ್ಳಲು ನೀವು ಆರೋಗ್ಯಕರ(Healthy) ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಇದನ್ನ ಮಾಡಿದ್ರೆ ಮಾತ್ರ ನೀವು ಆರಾಮವಾಗಿ ತೂಕ ಇಳಿಕೆ ಮಾಡಬಹುದು ಬೇಕಾದರೆ ಟ್ರೈ ಮಾಡಿ ನೋಡಿ.

click me!