ತೂಕ ಇಳಿಸಿಕೊಂಡು, ಯಂಗ್ ಆಗಿ ಕಾಣಲು ಈ ವಿಶೇಷ ನೀಲಿ ಚಹಾ ಬೆಸ್ಟ್

First Published | Feb 5, 2023, 2:52 PM IST

ತೂಕ ಹೆಚ್ಚಾಗೋದು ಮತ್ತು, ವಯಸ್ಸಾಗುವಿಕೆಯ ಲಕ್ಷಣ ಗೋಚರಿಸೋದು ಹೆಚ್ಚಾಗಿ ಎಲ್ಲರು ಎದುರಿಸುವಂತಹ ಸಮಸ್ಯೆಯಾಗಿದೆ. ತೂಕ ನಷ್ಟ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವ ಮಾರ್ಗಗಳನ್ನು ನೀವು ಹುಡುಕುತ್ತಿದ್ದರೆ, ಆಹಾರದಲ್ಲಿ ನೀಲಿ ಚಹಾವನ್ನು ಸೇರಿಸಿ. ಇದರಿಂದ, ನೀವು ಸಾಕಷ್ಟು ಪ್ರಯೋಜನ ಪಡೆಯುತ್ತೀರಿ.

ಶಂಖ ಪುಷ್ಪ (butterfly pea) ಹೂವುಗಳ ಬಗ್ಗೆ ನೀವು ಕೇಳಿರಬಹುದು. ಇತ್ತೀಚಿನ ವರ್ಷಗಳಲ್ಲಿ, ಈ ಸಸ್ಯವನ್ನು ಅದರ ಉತ್ಕರ್ಷಣ ನಿರೋಧಕ ಮತ್ತು ಆರೋಗ್ಯಕರ ಗುಣಲಕ್ಷಣಗಳಿಗಾಗಿ ಅಧ್ಯಯನ ಮಾಡಲಾಗಿದೆ. ವಿಶೇಷವಾಗಿ, ಶಂಖ ಪುಷ್ಪ ಹೂವು ತೂಕ ನಷ್ಟವನ್ನು ಉತ್ತೇಜಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ, ಜೊತೆಗೆ ಚರ್ಮ ಮತ್ತು ಕೂದಲನ್ನು ಸುಂದರಗೊಳಿಸುತ್ತದೆ.
 

ಈ ಹೂವಿನಿಂದ ತಯಾರಿಸಿದ ನೀಲಿ ಚಹಾದ ಪ್ರಯೋಜನಗಳು: ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ, ತೂಕ ಮತ್ತು ಸುಕ್ಕುಗಳನ್ನು (weight loss and anti ageing) ವೇಗವಾಗಿ ಕಡಿಮೆ ಮಾಡುವುದರ ಜೊತೆಗೆ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ ಇದರ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ.

Tap to resize

ಶಂಖ ಪುಷ್ಪ ಹೂವು ಎಂದರೇನು?: ಕ್ಲಿಟೋರಿಯಾ ಟರ್ನೇಷಿಯಾ ಎಂಬ ವೈಜ್ಞಾನಿಕ ಹೆಸರಿನಿಂದಲೂ ಕರೆಯಲ್ಪಡುವ ಶಂಖ ಪುಷ್ಪ ಏಷ್ಯಾದ ಸ್ಥಳೀಯ ಸಸ್ಯವಾಗಿದೆ. ಅದರ ಬ್ರೈಟ್ ನೀಲಿ (bright blue color) ಹೂವುಗಳಿಂದ ನೀವು ಅದನ್ನು ಗುರುತಿಸಬಹುದು. ಇದು ಆಂಥೋಸಯಾನಿನ್ಗಳಲ್ಲಿ ಸಮೃದ್ಧವಾಗಿದೆ, ಇದು ಅದರ ವಿಶಿಷ್ಟ ಬಣ್ಣಕ್ಕೆ ಕಾರಣವಾದ ಉತ್ಕರ್ಷಣ ನಿರೋಧಕ ಸಂಯುಕ್ತಗಳಾಗಿವೆ. 

ಶಂಖ ಪುಷ್ಪವನ್ನು ಬಿಸಿ ನೀರಿನಲ್ಲಿ ನೆನೆಸಿ ತಯಾರಿಸಿದ ಗಿಡಮೂಲಿಕೆ ಕಷಾಯವನ್ನು (herbal tea) ನೀಲಿ ಚಹಾ ಎಂದು ಕರೆಯಲಾಗುತ್ತದೆ. ಇದರ ಆರೋಗ್ಯ ಪ್ರಯೋಜನಗಳು ಅದರಲ್ಲಿರುವ ಆಂಥೋಸಯಾನಿನ್ ಅಂಶದಿಂದಾಗಿ ಉಂಟಾಗುತ್ತದೆ. ಇದು ಅತ್ಯಂತ ಆರೋಗ್ಯಕರ ಪಾನೀಯವಾಗಿದ್ದು, ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
 

ಕೆಫೀನ್ ಮುಕ್ತ: ಸಾಮಾನ್ಯವಾಗಿ ನಾವು ಸೇವಿಸುವ ಆಹಾರಗಳು ಕೆಫೆನ್ ನಿಂದ (caffein) ಸಮೃದ್ಧವಾಗಿರುತ್ತದೆ. ಕೆಫೆನ್ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲಾಗಿ ನೀವು ಶಂಖ ಪುಷ್ಪ ಚಹಾ ಮಾಡಿ ಸೇವಿಸಬಹುದು. ಈ ಚಹಾ ಕೆಫೀನ್ ಮುಕ್ತವಾಗಿದೆ. ಅದು ಅದರ ಅತ್ಯುತ್ತಮ ಪ್ರಯೋಜನವಾಗಿದೆ. 
 

ತೂಕ ಇಳಿಸಿಕೊಳ್ಳಲು ಸಹಾಯಕ: ಇದಕ್ಕೆ ಮಾನವ ಪರೀಕ್ಷೆಯ ಅಗತ್ಯವಿದ್ದರೂ, ವಿವಿಧ ಪ್ರಾಣಿ ಅಧ್ಯಯನಗಳು ಮತ್ತು ಟೆಸ್ಟ್ ಟ್ಯೂಬ್ ಅಧ್ಯಯನಗಳು ಈ ಹೂವು ತೂಕ ಇಳಿಸುವ ಗುಣಗಳನ್ನು ಹೊಂದಿದೆ ಎಂದು ಹೇಳಿದೆ. ಈ ಸಸ್ಯದಲ್ಲಿರುವ ಘಟಕಗಳು ಕೊಬ್ಬಿನ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ. ಇದು ಕೊಬ್ಬಿನ ಯಕೃತ್ತಿನ ಕಾಯಿಲೆಯಿಂದ ರಕ್ಷಿಸುತ್ತದೆ, ತೂಕ ನಷ್ಟಕ್ಕೆ (weight loss) ಸಹಾಯ ಮಾಡುತ್ತದೆ.  

ನಿರ್ವಿಷಗೊಳಿಸುವ ಏಜೆಂಟ್ಗಳು: ಈ ಪಾನೀಯವು ಉತ್ಕರ್ಷಣ ನಿರೋಧಕಗಳು ಎಂದು ಕರೆಯಲ್ಪಡುವ ಫೈಟೊಕೆಮಿಕಲ್ಗಳನ್ನು ಹೊಂದಿರುತ್ತದೆ ಮತ್ತು ಅದರ ಉತ್ತಮ ನಿರ್ವಿಷಗೊಳಿಸುವ ಶಕ್ತಿ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಸಾಮರ್ಥ್ಯದಿಂದಾಗಿ ಉತ್ತಮ ಆರೋಗ್ಯವನ್ನು ನೀಡುತ್ತೆ.. 

ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ: ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮ ಸ್ನೇಹಿ ಮತ್ತು ಉತ್ತಮ ಹೈಡ್ರೇಟಿಂಗ್ ಏಜೆಂಟ್ ಆಗಿದೆ ಮತ್ತು ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು (anti ageing) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಚಹಾದಲ್ಲಿರುವ ಫ್ಲೇವನಾಯ್ಡ್ಗಳು ಕಾಲಜನ್ ಹೆಚ್ಚಿಸುತ್ತವೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತವೆ, ಇದರಿಂದಾಗಿ ಆಂಟಿ-ಗ್ಲೈಕೇಶನ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ.
 

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತೆ: ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುತ್ತೆ, ಇದು ಕೂದಲಿನ ಬೆಳವಣಿಗೆಯನ್ನು (hair growth) ಬಲಪಡಿಸುವ ಗುಣಗಳನ್ನು ನೀಡುತ್ತದೆ. ನೀಲಿ ಚಹಾದಲ್ಲಿರುವ ಆಂಥೋಸಯಾನಿನ್ ನೆತ್ತಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ.

ರೋಗ ನಿರೋಧಕ ಶಕ್ತಿ ವರ್ಧಕ: ಈ ನೀಲಿ ಚಹಾದಲ್ಲಿರುವ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಜೀವಕೋಶ-ಹಾನಿಕಾರಕ ಗುಣಲಕ್ಷಣಗಳನ್ನು ಹೊಂದಿರುವ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮತ್ತು ಈ ಕಾರ್ಯದಿಂದ, ಈ ಪಾನೀಯವು ಅತ್ಯುತ್ತಮ ರೋಗನಿರೋಧಕ ವರ್ಧಕ ಪಾನೀಯವಾಗುತ್ತದೆ, ಇದು ಹೃದಯ ಸಂಬಂಧಿತ ಕಾಯಿಲೆಗಳು (heart problem), ಚಯಾಪಚಯ ಸಿಂಡ್ರೋಮ್, ಹೈಪರ್ ಕೊಲೆಸ್ಟರಾಲೆಮಿಯಾ ಮುಂತಾದ ಅನೇಕ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮೂಡ್ ಅಪ್ಲಿಫ್ಟರ್ (Mood Uplifter): ಈ ಚಹಾದಲ್ಲಿರುವ ಉತ್ಕರ್ಷಣ ನಿರೋಧಕ ಸಂಗ್ರಹಗಳು ಮೂಡ್ ಚೆನ್ನಾಗಿರುವಂತೆ ಮಾಡಲು ಸಹಾಯ ಮಾಡುತ್ತೆ ಮತ್ತು ಆತಂಕ ಮತ್ತು ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನ್ಯಾಚುರಲ್ ಹೂವು ಸಿಗದೇ ಇದ್ದರೆ ನೀವು ಮಾರ್ಕೆಟ್ ನಿಂದಲೂ ಬ್ಲೂ ಟೀ ಖರೀದಿಸಬಹುದು.

Latest Videos

click me!