World malaria day: ಮಲೇರಿಯಾ ರೋಗವನ್ನು ತಪ್ಪಿಸಲು ನೀವೇನು ಮಾಡ್ಬೇಕು?

First Published | Apr 25, 2023, 4:35 PM IST

ಪ್ರತಿ ವರ್ಷ ಏಪ್ರಿಲ್ 25ರಂದು ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶ. ಮಲೇರಿಯಾಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

ಭಾರತದಲ್ಲಿ ಪ್ರತಿ ವರ್ಷ, ಶಾಖ ಹೆಚ್ಚಾದಂತೆ ಸೊಳ್ಳೆ ಭಯ ಪ್ರಾರಂಭವಾಗುತ್ತದೆ. ಈ ಸೊಳ್ಳೆಗಳು ಡೆಂಗ್ಯೂ, ಜಿಕಾ ವೈರಸ್, ಚಿಕುನ್ ಗುನ್ಯಾ ಮತ್ತು ಮಲೇರಿಯಾ(Malaria) ಸೇರಿ ವಿವಿಧ ರೋಗಗಳಿಗೆ ಕಾರಣವಾಗುತ್ತವೆ. ಈ ಮಾರಣಾಂತಿಕ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಏಪ್ರಿಲ್ 25 ರಂದು ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ.
 

ಮಲೇರಿಯಾ ಎಂದರೇನು?
ಮಲೇರಿಯಾ ಒಂದು ರೀತಿಯ ಪರಾವಲಂಬಿ ಪ್ಲಾಸ್ಮೋಡಿಯಂನಿಂದ ಉಂಟಾಗುವ ರೋಗ. ಇದು ಹೆಣ್ಣು ಅನಾಫಿಲಿಸ್ ಸೊಳ್ಳೆಯ (female Anopheles mosquito) ಕಡಿತದಿಂದ ಹರಡುತ್ತದೆ. ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಒಬ್ಬ ವ್ಯಕ್ತಿಯನ್ನು ಕಚ್ಚಿದಾಗ, ಸೋಂಕು ಹರಡುವ ಮೂಲಕ ಮಲೇರಿಯಾವನ್ನು ಪಡೆಯುತ್ತಾನೆ. ನಿರ್ಲಕ್ಷ್ಯ ಅಥವಾ ಸರಿಯಾದ ಚಿಕಿತ್ಸೆಯ ಕೊರತೆಯಿದ್ದರೆ ಮಲೇರಿಯಾ ಮಾರಣಾಂತಿಕವಾಗಬಹುದು.

Tap to resize

ಮಲೇರಿಯಾ ಹೇಗೆ ಹರಡುತ್ತದೆ?
ಅನಾಫಿಲಿಸ್ ಸೊಳ್ಳೆಯ (mosquito biting) ಕಡಿತದಿಂದಾಗಿ, ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ನಿಮ್ಮ ರಕ್ತವನ್ನು ತಲುಪುತ್ತದೆ ಮತ್ತು ದೇಹದ ಕೆಂಪು ರಕ್ತ ಕಣಗಳನ್ನು ನಾಶಪಡಿಸಲು ಪ್ರಾರಂಭಿಸುತ್ತದೆ. ಈ ಸೊಳ್ಳೆ ಹೆಚ್ಚಾಗಿ ತೇವ ಮತ್ತು ನೀರಿನ ಸ್ಥಳಗಳಲ್ಲಿ ಕಂಡುಬರುತ್ತದೆ. ಆದ್ದರಿಂದ, ಸೊಳ್ಳೆಗಳನ್ನು ತಡೆಗಟ್ಟಲು, ಮನೆಯ ಸುತ್ತಲೂ ಸ್ವಚ್ಛಗೊಳಿಸಬೇಕು ಮತ್ತು ನೀರು ಸಂಗ್ರಹವಾಗಲು ಅವಕಾಶ ನೀಡಬಾರದು.

ಮಲೇರಿಯಾವನ್ನು ಹೇಗೆ ತಪ್ಪಿಸಬಹುದು?
ರೋಗವನ್ನು ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ ಅನ್ನೋದನ್ನು ನೀವು ಕೇಳಿರಬಹುದು. ಮಲೇರಿಯಾದಲ್ಲಿ ನೀವು ಇದನ್ನು ಪಾಲಿಸಲೇಬೇಕು. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಬಾಗಿಲುಗಳು ಮತ್ತು ಕಿಟಕಿಗಳಲ್ಲಿ ಕಬ್ಬಿಣದ ಬಲೆಗಳನ್ನು ಅಳವಡಿಸಿ.

ಸೊಳ್ಳೆ ಕಡಿತವನ್ನು ತಪ್ಪಿಸಲು, ಪೂರ್ಣ ಪ್ಯಾಂಟ್ ಮತ್ತು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ ಇದರಿಂದ ದೇಹವು ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ. ದೇಹವು ಸಂಪೂರ್ಣವಾಗಿ ಕವರ್ ಆಗಿದ್ದರೆ, ಸೊಳ್ಳೆಯಿಂದ ಕಚ್ಚಿಸಿಕೊಳ್ಳುವ ಸಾಧ್ಯತೆ ತುಂಬಾನೆ ಕಡಿಮೆ ಇರುತ್ತೆ. 

ಸೊಳ್ಳೆಗಳು ಯಾವಾಗಲೂ ಮನೆಯ ಬಾಗಿಲುಗಳು ಮತ್ತು ಕಿಟಕಿಗಳಲ್ಲಿ, ಪರದೆಗಳ ಬಳಿ ಮತ್ತು ಮೂಲೆಗಳಲ್ಲಿ ಅಡಗಿರುತ್ತವೆ. ಈ ಸ್ಥಳಗಳಲ್ಲಿ ಸೊಳ್ಳೆ ನಿವಾರಕ ಸ್ಪ್ರೇ ಹಾಕಿ. ಅಲ್ಲದೇ ಕಸ ಅಥವಾ ಕೊಳಕು ಇರುವ ಸ್ಥಳಕ್ಕೆ ಹೋಗಬೇಡಿ. ಅಂತಹ ಸ್ಥಳಗಳಲ್ಲಿ, ಸೊಳ್ಳೆಗಳು ಹೆಚ್ಚಾಗಿರುತ್ತೆ.  

ಯಾವಾಗಲೂ ಮನೆಯ ಸುತ್ತಲೂ ಶುಚಿತ್ವವನ್ನು (clean your surrounding) ಕಾಪಾಡಿ ಮತ್ತು ನೀರು ಸಂಗ್ರಹವಾಗಲು ಬಿಡಬೇಡಿ. ಸೊಳ್ಳೆಗಳು ನೀರಿನಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ, ಆದ್ದರಿಂದ ಕೂಲರ್ ಟ್ಯಾಂಕ್, ಸುತ್ತಮುತ್ತಲಿನ ಗುಂಡಿಗಳು ಅಥವಾ ಅಂತಹ ಯಾವುದೇ ಸ್ಥಳದಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ.

ಮಾನ್ಸೂನ್ ಅಥವಾ ಬೇಸಿಗೆಯಲ್ಲಿ ನಿಮ್ಮನ್ನು ಚೆನ್ನಾಗಿ ಹೈಡ್ರೇಟ್ (hydrate your body) ಆಗಿರಿಸಿಕೊಳ್ಳುವ ಮೂಲಕ ನೀವು ಮಲೇರಿಯಾವನ್ನು ಸೋಲಿಸಬಹುದು. ಈ ದಿನಗಳಲ್ಲಿ, ದೇಹವು ಬೆಚ್ಚಗಿರುತ್ತದೆ, ಇದಕ್ಕಾಗಿ, ದಿನವಿಡೀ ಸಾಕಷ್ಟು ನೀರು ಕುಡಿಯುವುದರ ಜೊತೆಗೆ, ನೀವು ಎಳನೀರು, ಜ್ಯೂಸ್ ಇತ್ಯಾದಿಗಳನ್ನು ಸಹ ಕುಡಿಯಬಹುದು.

Latest Videos

click me!