ಬಾತ್ ರೂಮ್ ಕಮೋಡ್ ಅಥವಾ ವಾಶ್ ಬೇಸಿನ್ ಬಣ್ಣ ಏಕೆ ಬಿಳಿಯಾಗಿರುತ್ತೆ?

Published : Apr 25, 2023, 04:21 PM IST

ಸ್ವಚ್ಛ ಬಣ್ಣದ ಬಗ್ಗೆ ಮಾತನಾಡುವುದಾದರೆ, ಮೊದಲ ಹೆಸರು ಬಿಳಿ ಬಣ್ಣದಿಂದ ಬರುತ್ತೆ. ಬಿಳಿ ಬಣ್ಣವು ಇತರ ಬಣ್ಣಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಬಿಳಿ ಬಣ್ಣಕ್ಕೆ ಸಣ್ಣ ಕೊಳಕು ಹಚ್ಚಿದರೆ ಸಾಕು, ಅದು ತಕ್ಷಣ ಗೋಚರಿಸುತ್ತೆ. ಆದರೆ ಬಾತ್ ರೂಮ್ ನಲ್ಲಿ ಹೆಚ್ಚಾಗಿ ಬಿಳಿ ಬಣ್ಣ ಬಳಸೋದು ಯಾಕೆ ಗೊತ್ತಾ?  

PREV
17
ಬಾತ್ ರೂಮ್ ಕಮೋಡ್ ಅಥವಾ ವಾಶ್ ಬೇಸಿನ್ ಬಣ್ಣ ಏಕೆ ಬಿಳಿಯಾಗಿರುತ್ತೆ?

ಬಿಳಿ ಬಣ್ಣ (White colour) ಶಾಂತಿಯ ಸಂಕೇತ ಹೌದು, ಜೊತೆಗೆ ಸ್ವಚ್ಚತೆಯ ಸಂಕೇತವೂ ಆಗಿದೆ. ಹೆಚ್ಚಾಗಿ ಮನೆಗಳಲ್ಲಿ, ಅದರಲ್ಲೂ ಬಾತ್ ರೂಮ್ ಟಾಯ್ಲೆಟ್ ಗಳಲ್ಲಿ ಬಿಳಿ ಬಣ್ಣದ ಟೈಲ್ಸ್, ಕಮೊಡ್ ತಯಾರಿಯಲ್ಲಿ ಸಹ ಬಿಳಿ ಬಣ್ಣ ಬಳಸಲಾಗುತ್ತೆ. ಬಾತ್ ರೂಮಲ್ಲಿ ಕಮೋಡ್ ಅಥವಾ ವಾಶ್ ಬೇಸಿನ್ ಬಣ್ಣವನ್ನು ಏಕೆ ಬಿಳಿಯಾಗಿ ಇಡಲಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

27

ಬಾತ್ ರೂಮ್ ನಲ್ಲಿ(Bathroom) ಬಿಳಿ ಬಣ್ಣವನ್ನು ಏಕೆ ಬಳಸಲಾಗುತ್ತೆ?
ಬಾತ್ ರೂಮ್  ಎಷ್ಟೇ ಸ್ವಚ್ಛವಾಗಿದ್ದರೂ, ಅದು ಕೊಳಕಾಗುವ ಸ್ಥಳವಾಗಿದೆ. ಆದ್ದರಿಂದ, ಅನೇಕ ಜನರ ಮನಸ್ಸಿಗೆ ಬರುವ ಪ್ರಶ್ನೆಯೆಂದರೆ ಸ್ನಾನಗೃಹದಲ್ಲಿ ಬಿಳಿ ಬಣ್ಣವನ್ನು ಏಕೆ ಬಳಸಲಾಗುತ್ತೆ ಎಂದು? 

37

ವೈಟ್ ಕಮೋಡ್(Commode) ಅಥವಾ ವಾಶ್ ಬೇಸಿನನ್ನು ಮನೆಯಿಂದ ಹೋಟೆಲ್‌ವರೆಗೆ ಎಲ್ಲೆಡೆ ಬಳಸಲಾಗುತ್ತೆ ಎಂದು ನಮಗೆ ತಿಳಿದಿದೆ. ಆದರೆ ಬಿಳಿ ಬಣ್ಣವೇ ಯಾಕೆ? ಬನ್ನಿ ವೈಟ್ ಕಮೋಡ್, ವಾಶ್ ಬೇಸಿನ್ ಇದರ ಹಿಂದಿನ ವಿಜ್ಞಾನದ ಬಗ್ಗೆ ಇಲ್ಲಿ ನಾವು ತಿಳಿಯೋಣ.
 

47

ವೈಜ್ಞಾನಿಕ ಕಾರಣಗಳ ಬಗ್ಗೆ ಹೇಳುವುದಾದರೆ, ಕಮೋಡ್ ಮತ್ತು ವಾಶ್ ಬೇಸಿನನ್ನು ಸೆರಾಮಿಕ್ ನಿಂದ(Ceramic) ತಯಾರಿಸಲಾಗುತ್ತೆ. ಸೆರಾಮಿಕ್ ಬಣ್ಣದ ಬಗ್ಗೆ ಮಾತನಾಡುವುದಾದರೆ, ಅದರ ಮೂಲ ಬಣ್ಣ ಬಿಳಿ. ನೀವು ಬೇರೆ ಯಾವುದೇ ಬಣ್ಣದ ಕಮೋಡ್ ಅಥವಾ ಬೇಸಿನ್ ಮಾಡಲು ಬಯಸೋದಾದ್ರೆ, ಅದಕ್ಕೆ ಬಣ್ಣವನ್ನು ಸೇರಿಸಬೇಕಾಗುತ್ತೆ. 

57

ಬಣ್ಣದಿಂದಾಗಿ ಗುಣಮಟ್ಟವೂ ಕಳಪೆಯಾಗಬಹುದು. ಹಾಗಾಗಿ, ಗುಣಮಟ್ಟವು(Quality) ಯಾವುದೇ ವ್ಯತ್ಯಾಸವನ್ನುಂಟು ಮಾಡೋದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮಾತ್ರ ಅದರ ಬಣ್ಣವನ್ನು ಬಿಳಿಯಾಗಿ ಇಡಲಾಗುತ್ತೆ. ಇದಕ್ಕೆ ಬೇರಾವ ಕಾರಣವೂ ಇರೋದಿಲ್ಲ.

67

ಗುಣಮಟ್ಟದಿಂದಾಗಿ, ಬಿಳಿ ಬಣ್ಣವನ್ನು ಬಳಸುತ್ತಾರೆ.
ಆದರೆ ಕೆಲವು ಕಂಪನಿಗಳು ಗುಣಮಟ್ಟದ ಬಗ್ಗೆ ಗಮನ ಹರಿಸದೆ ಹಳದಿ, ನೀಲಿ ಮತ್ತು ಹಸಿರು ಕಮೋಡ್ಗಳು ಅಥವಾ ವಾಶ್ ಬೇಸಿನ್ಗಳನ್ನು(Wash basin) ತಯಾರಿಸುತ್ತವೆ. ಆದ್ದರಿಂದ, ನೀವು ಬೇರೆ ಯಾವುದೇ ಬಣ್ಣದ ಕಮೋಡ್ ಅಥವಾ ವಾಶ್ ಬೇಸಿನ್ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ನಿಮ್ಮ ಮನಸ್ಸನ್ನು ಬದಲಾಯಿಸಿ.

77

ಬೇಡಿಕೆಯ ಬಗ್ಗೆ ಮಾತನಾಡುವುದಾದರೆ, ಇದೀಗ ಮಾರುಕಟ್ಟೆಯಲ್ಲಿ(Market) ಹೆಚ್ಚಿನ ಬೇಡಿಕೆ ಬಿಳಿ ಕಮೋಡ್ ಅಥವಾ ವಾಶ್ ಬೇಸಿನದ್ದೇ ಆಗಿದೆ. ಆದ್ದರಿಂದ ಕಮೋಡ್ ಅಥವಾ ವಾಶ್ ಬೇಸಿನ್ ಏಕೆ ಬಿಳಿ ಬಣ್ಣದಲ್ಲಿದೆ ಎಂದು ಈಗ ಅರ್ಥಮಾಡಿಕೊಂಡಿರಬೇಕು ಅಲ್ವಾ. 

click me!

Recommended Stories