ಟ್ಯಾಬ್ಲೆಟ್ ತಗೊಂಡ್ರೂ ಜ್ವರ ಕಡಿಮೆಯಾಗಿಲ್ವಾ ? ಹಾಗಾದ್ರೆ ತಿನ್ನೋ ಆಹಾರ ಬದಲಾಯಿಸಿ

First Published | Oct 16, 2022, 10:20 AM IST

ಜ್ವರ ಬಂದರೆ ಸಾಕು ಯಾರಿಗಾದರೂ ಸಿಕ್ಕಾಪಟ್ಟೆ ಹಿಂಸೆ. ದೇಹದಲ್ಲಿ ತ್ರಾಣವಿರುವುದಿಲ್ಲ. ಏನು ತಿನ್ನಲು ಸಹ ರುಚಿಸುವುದಿಲ್ಲ. ಹೀಗಾಗಿ ಜ್ವರ ಒಮ್ಮೆ ಕಡಿಮೆಯಾದರೆ ಸಾಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಕೆಲವು ಸಲಹೆಗಳನ್ನು ಪಾಲಿಸಿದರೆ ಜ್ವರ ಬೇಗ ಕಡಿಮೆಯಾಗುತ್ತದೆ. ಅದ್ಹೇಗೆ ತಿಳಿದುಕೊಳ್ಳಿ.

ಜ್ವರ ಹಲವರನ್ನು ಆಗಾಗ ಕಾಡುವ ಕಾಯಿಲೆ. ಜ್ವರ ಬಂತೆಂದರೆ ಇನ್ನೊಂದು ಭಯವೆಂದರೆ, ಇದು ಸಾಮಾನ್ಯ ಜ್ವರವಲ್ಲದಿದ್ದರೆ ಡೆಂಗ್ಯೂ, ಟೈಫಾಯಿಡ್, ಕರೋನಾ, ಮಲೇರಿಯಾ, ವೈರಲ್ ಫೀವರ್ ನಂತಹ ಕಾಯಿಲೆಯೂ ಆಗಿರಬಹುದು. ಯಾವುದೇ ಜ್ವರವಾಗಿದ್ದರೂ ಇದು ನಮ್ಮ ದೇಹದಲ್ಲಿನ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ದೇಹದಲ್ಲಿ ಶಕ್ತಿ ಇರುವುದಿಲ್ಲ. ಇದು ರೋಗವನ್ನು ಉಲ್ಬಣಗೊಳಿಸುತ್ತದೆ. ಜ್ವರ ಬೇಗ ಕಡಿಮೆಯಾಗಬೇಕಾದರೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಜೊತೆಗೆ ಎಂಥಾ ಆಹಾರ ಸೇವಿಸಬೇಕು ಎಂಬುದನ್ನು ಸಹ ತಿಳಿದುಕೊಳ್ಳಬೇಕು,

fruits

ಜ್ವರ ಬಂದಾಗ ಕೆಲವು ರೀತಿಯ ಆಹಾರವನ್ನು ಸೇವಿಸಿದರೆ ಜ್ವರ ಬೇಗ ಕಡಿಮೆಯಾಗುತ್ತದೆ. ಬಾಯಿಗೆ ರುಚಿ ಸಿಗದ ಕಾರಣ ಕೆಲವೊಬ್ಬರು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುತ್ತಾರೆ. ಆದರೆ ಹಾಗೆ ಮಾಡಬೇಡಿ. ನಾವು ಕೆಲವು ರೀತಿಯ ಆಹಾರವನ್ನು ಸೇವಿಸುವುದರಿಂದ ಜ್ವರವು ಬೇಗನೆ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದು ಯಾವುದೆಲ್ಲಾ ತಿಳಿದುಕೊಳ್ಳೋಣ.

Tap to resize

ಚಿಕನ್ ಸೂಪ್
ಜ್ವರ ಬಂದರೆ ನಾನ್ ವೆಜ್ ಬೇಡ ತಿನ್ನಬಾರದು ಎಂದು ಹಿರಿಯರು ಹೇಳುತ್ತಾರೆ. ಜ್ವರವಿದ್ದಾಗ ನಾನ್‌ವೆಜ್‌ ಸೇವಿಸಿದರೆ ಜ್ವರ ಜಾಸ್ತುಯಾಗುತ್ತದೆ ಎನ್ನುತ್ತಾರೆ. ಆದರೆ, ವಾಸ್ತವವಾಗಿ, ಚಿಕನ್ ಸೂಪ್ ಜ್ವರವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಬಿಸಿ ಚಿಕನ್ ಸೂಪ್ ರುಚಿಕರವಾಗಿರುತ್ತದೆ. ಈ ಸೂಪ್ ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಕ್ಯಾಲೋರಿಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಸೋಡಿಯಂ ಕೂಡ ಇದೆ. ಚಿಕನ್ ಸೂಪ್‌ನೊಂದಿಗೆ ದೇಹದಲ್ಲಿನ ನೀರಿನ ಅಂಶವು ಸಮತೋಲಿತವಾಗಿರುತ್ತದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜ್ವರವೂ ಕಡಿಮೆಯಾಗುತ್ತಿದೆ.. ಈ ಚಿಕನ್ ಸೂಪ್ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಹಸಿರು ತರಕಾರಿಗಳು
ಹಸಿರು ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇವುಗಳನ್ನು ತಿನ್ನುವವರು ಬಹಳ ಕಡಿಮೆ. ಅದಕ್ಕಾಗಿಯೇ ವೈದ್ಯರು ಜ್ವರ ಬಂದಾಗ ಸೊಪ್ಪು, ಮೂಲಂಗಿ, ಬೀನ್ಸ್‌ ತಿನ್ನಲು ಸಲಹೆ ನೀಡುತ್ತಾರೆ. ಈ ತರಕಾರಿಗಳಲ್ಲಿ ಕಬ್ಬಿಣ ಮತ್ತು ನಾರಿನಂಶ ಹೇರಳವಾಗಿದೆ. ಇವು ಜ್ವರವನ್ನು ಬೇಗನೆ ಕಡಿಮೆ ಮಾಡುತ್ತವೆ. ವೈರಲ್ ಸೋಂಕುಗಳನ್ನು ನಿವಾರಿಸುತ್ತದೆ.

ಕಿಚಡಿ
ಕಿಚಿಡಿಯನ್ನು ದಾಲ್ ಮತ್ತು ವಿವಿಧ ತರಕಾರಿಗಳನ್ನು ಸೇರಿಸಿ ಬೇಯಿಸಲಾಗುತ್ತದೆ. ಇದು ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಆದರೆ ಹೆಚ್ಚಿನವರಿಗೆ ಕಿಚಡಿ ಇಷ್ಟವಾಗುವುದಿಲ್ಲ. ಆದರೆ ಜ್ವರದ ಸಮಯದಲ್ಲಿ ಕಿಚಡಿ ತಿನ್ನುವುದು ಒಳ್ಳೆಯದು. ಏಕೆಂದರೆ ಇದು ಜೀರ್ಣವಾಗುವುದು ತುಂಬಾ ಸುಲಭ. ರುಚಿ ಇಲ್ಲದಿದ್ದರೂ ತಿಂದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಇದರೊಂದಿಗೆ ಇಡ್ಲಿಯನ್ನೂ ತಿನ್ನಬಹುದು. ಇದು ಸುಲಭವಾಗಿ ಜೀರ್ಣವಾಗುತ್ತದೆ.

ಹಣ್ಣುಗಳು
ಜ್ವರ ಬಂದಾಗ ಮಾಂಸಾಹಾರ ಮಾತ್ರವಲ್ಲದೆ ಕೆಲವು ಹಣ್ಣುಗಳನ್ನೂ ತಿನ್ನಬಾರದು ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಕರಿದ ಮಾಂಸವನ್ನು ತಿನ್ನಬಾರದು ನಿಜ, ಆದರೆ ಹಣ್ಣುಗಳನ್ನು ತಿನ್ನಬಹುದು. ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ, ಸೇಬು ಮತ್ತು ದಾಳಿಂಬೆಯಂತಹ ಹಣ್ಣುಗಳನ್ನು ಹೆಚ್ಚು ಸೇವಿಸಿ. ಇವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ಜ್ವರ ಬೇಗ ಕಡಿಮೆಯಾಗುತ್ತದೆ.

ತೆಂಗಿನ ನೀರು
ಜ್ವರ ಬಂದಾಗ ದೇಹದ ಉಷ್ಣತೆ ಹೆಚ್ಚಿರುತ್ತದೆ. ತಾಪಮಾನವನ್ನು ಕಡಿಮೆ ಮಾಡಲು ಹೆಚ್ಚು ನೀರು ಕುಡಿಯಿರಿ. ಆದರೆ ಅಂತಹ ಸಮಯದಲ್ಲಿ ನೀವು ಹೆಚ್ಚು ನೀರು ಕುಡಿಯಲು ಬಯಸುವುದಿಲ್ಲ. ಹಾಗಾಗಿ ನೀರಿನ ಬದಲು ತೆಂಗಿನ ನೀರನ್ನು ಕುಡಿಯಿರಿ. ತೆಂಗಿನ ನೀರು ನಿಮ್ಮ ದೇಹವನ್ನು ಪುನರ್ಜಲೀಕರಣಗೊಳಿಸುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಜ್ವರ ಕಡಿಮೆಯಾಗುತ್ತದೆ.

Latest Videos

click me!