World Diabetes Day: ಚಳಿಗಾಲದಲ್ಲಿ ಇವನ್ನೆಲ್ಲಾ ಮಾಡಿಲ್ಲಾಂದ್ರೆ ಮಧುಮೇಹಿಗಳಿಗೆ ತೊಂದ್ರೆ

First Published Nov 14, 2022, 5:09 PM IST

ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಒಂದು ರೋಗವಾಗಿದ್ದು, ಅದರ ತೀವ್ರತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಚಳಿಗಾಲದಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗದಂತೆ ಕಾಪಾಡಲು ನೀವು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದ್ರೆ ಒಳ್ಳೇದು.

ನವೆಂಬರ್ ಮಧುಮೇಹ ಜಾಗೃತಿ ತಿಂಗಳು ಮತ್ತು ವಿಶ್ವ ಮಧುಮೇಹ ದಿನವು (world diabetes day) ನವೆಂಬರ್ 14 ರಂದು ಬರುತ್ತದೆ. ಭಾರತ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸಿರುವ ಈ ರೋಗದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಇದು ಉತ್ತಮ ಸಮಯ. ಮಧುಮೇಹವು ಒಂದು ರೋಗವಾಗಿದ್ದು, ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಆದ್ದರಿಂದ ಮಧುಮೇಹದ ಅರಿವು, ಆರೈಕೆ ಮತ್ತು ಚಿಕಿತ್ಸೆಯು ಅತ್ಯಂತ ಮುಖ್ಯ.ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗೋದರಿಂದ ನೀವು ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದಕ್ಕಾಗಿ ನೀವು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ನೋಡೋಣ.

ಮಧುಮೇಹವು ಇನ್ಸುಲಿನ್ (insulin) ಉತ್ಪಾದಿಸುವ ಅಥವಾ ಬಳಸುವ ದೇಹದ ಸಾಮರ್ಥ್ಯ ಕಡಿಮೆ ಮಾಡುವ ಸ್ಥಿತಿ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಇದು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ನಿಯಂತ್ರಿಸಲು ಸಹಾಯ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾಕಷ್ಟು ಇನ್ಸುಲಿನ್ ಇಲ್ಲದಿದ್ದಾಗ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.

Latest Videos


ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿದಾಗ ಹೃದ್ರೋಗ (heart problem), ಪಾರ್ಶ್ವವಾಯು, ಮೂತ್ರಪಿಂಡದ ಕಾಯಿಲೆ ಮತ್ತು ಕುರುಡುತನ ಸೇರಿ ಇತರ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಮಧುಮೇಹ ರೋಗಿಗಳು ಚಳಿಗಾಲದಲ್ಲಿ ತಮ್ಮನ್ನು ತಾವು ಹೇಗೆ ನೋಡಿಕೊಳ್ಳಬಹುದು ಎಂಬುದು ಇಲ್ಲಿದೆ.

ಪ್ರತಿದಿನ ವ್ಯಾಯಾಮ ಮಾಡಿ

ಚಳಿಗಾಲದಲ್ಲಿ ಸೋಮಾರಿತನದಿಂದಾಗಿ, ವ್ಯಾಯಾಮ ಮಾಡುವುದು ಸ್ವಲ್ಪ ಕಷ್ಟ. ಯಾಕೆಂದರೆ ಚಳಿಯಿಂದಾಗಿ ಬೆಳಗ್ಗೆ ಎದ್ದೇಳೋದೆ ಕಷ್ಟವಾಗುತ್ತೆ. ಆದರೆ ನೀವು ಮಧುಮೇಹದ ರೋಗಿಯಾಗಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಈ ಋತುವಿನಲ್ಲಿ ವ್ಯಾಯಾಮವನ್ನು (exercise) ಮುಂದುವರಿಸೋದು ತುಂಬಾನೆ ಮುಖ್ಯ.

ಚಳಿಗಾಲದಲ್ಲಿ ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ (physical activity), ತೂಕವೂ ಹೆಚ್ಚಾಗಲು ಪ್ರಾರಂಭಿಸುತ್ತದೆ, ಆದ್ದರಿಂದ ದೊಡ್ಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವ್ಯಾಯಾಮವು ಇವೆಲ್ಲವುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದುದರಿಂದ ಚಳಿಗಾಲದಲ್ಲಿ, ಸೋಮಾರಿತನ ಬಿಟ್ಟು, ಪ್ರತಿದಿನ ವ್ಯಾಯಾಮ ಮಾಡೋದನ್ನು ಮುಂದುವರೆಸಿ. 

ಎಣ್ಣೆಯುಕ್ತ ಆಹಾರದ ಸೇವನೆ ಕಡಿಮೆ ಮಾಡಿ

ಎಣ್ಣೆಯುಕ್ತ ಆಹಾರಗಳು (oily food) ಪ್ರತಿ ಋತುವಿನಲ್ಲಿಯೂ ಹಾನಿಕಾರಕವಾಗಿದ್ದರೂ, ಮಾನ್ಸೂನ್ ಮತ್ತು ಚಳಿಗಾಲದಲ್ಲಿ, ಜನರು ಅವುಗಳನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಪ್ರಾರಂಭಿಸುತ್ತಾರೆ, ಇದು ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ, ಇದರಿಂದಾಗಿ ವೇಗವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ. 

ಚಳಿಗಾಲದಲ್ಲಿ ಮಧುಮೇಹ ರೋಗಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು, ಏಕೆಂದರೆ ಈ ಸಮಯದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಸ್ವಲ್ಪ ದುರ್ಬಲವಾಗುತ್ತದೆ. ಇದು ನಿಮಗೆ ಅಪಾಯಕಾರಿಯಾಗಬಹುದು. ಆದುದರಿಂದ ನೀವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ಆರೋಗ್ಯಯುತ ಆಹಾರಗಳನ್ನೇ (healthy food) ಸೇವಿಸಬೇಕು.

ಚರ್ಮದ ಬಗ್ಗೆ ಕಾಳಜಿ ವಹಿಸಿ

ಈ ಋತುವಿನಲ್ಲಿ, ನಿಮ್ಮ ದೇಹದ ಜೊತೆಗೆ, ಕೈಗಳು ಮತ್ತು ಪಾದಗಳನ್ನು ಸಹ ನೋಡಿಕೊಳ್ಳಬೇಕು. ಸ್ವಚ್ಛವಾಗಿಡುವುದರ ಜೊತೆಗೆ, ಸುಟ್ಟಗಾಯಗಳು, ಕಡಿತಗಳು ಅಥವಾ ಗಾಯದ ಗುರುತುಗಳು ಇಲ್ಲದಂತೆ ನೋಡಿಕೊಳ್ಳಿ. ಚರ್ಮವನ್ನು ಮಾಯಿಶ್ಚರೈಸ್ ಆಗಿರಿಸಿಕೊಳ್ಳಿ ಏಕೆಂದರೆ ಶುಷ್ಕತೆಯು ತುರಿಕೆಗೆ ಕಾರಣವಾಗಬಹುದು ಮತ್ತು ಹೆಚ್ಚು ತುರಿಕೆ ಗಾಯಗಳಿಗೆ ಕಾರಣವಾಗಬಹುದು. 

ಇತರ ಮುನ್ನೆಚ್ಚರಿಕೆಗಳು

ಮಧುಮೇಹ ಮತ್ತು ಇತರ ರೋಗಗಳಿಂದ ಬಳಲುತ್ತಿರುವ ಜನರು ಚಳಿಯಲ್ಲಿ ಫ್ಲೂ ಮತ್ತು ನ್ಯುಮೋನಿಯಾದ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಆದ್ದರಿಂದ ಇದನ್ನು ತಪ್ಪಿಸಲು, ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ (consult doctor) ಅಗತ್ಯವಿರುವ ಯಾವುದೇ ಲಸಿಕೆ ಅಥವಾ ಔಷಧಿ ತೆಗೆದುಕೊಳ್ಳಿ. 

click me!