ಆಲ್ಕೋಹಾಲ್ ಜೊತೆ ಸೋಡಾ, ಕೋಲ್ಡ್ ಡ್ರಿಂಕ್ಸ್ ಮಿಕ್ಸ್ ಮಾಡ್ತೀರಾ? ತಪ್ಪು ತಪ್ಪು

First Published | Jun 20, 2023, 4:18 PM IST

ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ರೂ ಜನ ಕುಡಿಯೋದನ್ನ ಬಿಡೋ ಬಗ್ಗೆ ಯೋಚ್ನೆ ಮಾಡೋದೆ ಕಡಿಮೆ. ಇಲ್ಲಿ ನಾವು ಕುಡಿಬೇಡಿ ಎಂದು ಹೇಳಲ್ಲ, ಆದ್ರೆ ಆಲ್ಕೋಹಾಲ್ ಜೊತೆ ಸೋಡಾ ಅಥವಾ ಕೋಲ್ಡ್ ಡ್ರಿಂಕ್ ಮಿಕ್ಸ್ ಮಾಡೋದ್ರಿಂದ ಏನಾಗುತ್ತೆ ಅನ್ನೋದನ್ನು ನೊಡೋಣ. 

ವಿಶ್ವದ ಹೆಚ್ಚಿನ ದೇಶಗಳಲ್ಲಿ, ಜನರು ಆಲ್ಕೋಹಾಲನ್ನು (alcohol) ಹಾಗೆಯೇ ಕುಡಿಯಲು ಇಷ್ಟಪಡ್ತಾರೆ, ಆದರೆ ಭಾರತದಲ್ಲಿ, ಹೆಚ್ಚಿನ ಜನ ಅದಕ್ಕೆ ಕೋಲ್ಡ್ ಡ್ರಿಂಕ್ ಅಥವಾ ಸೋಡಾ ಬೆರೆಸಿ ಕುಡಿಯೋದನ್ನು ನೀವು ನೋಡಿರಬಹುದು. ಬೇರೆ ಬೇರೆ ಕಾರಣಗಳಿಂದ ಈ ರೀತಿಯಾಗಿ ಕುಡಿತಾರೆ. ಆದರೆ ಆಲ್ಕೋಹಾಲ್ ನಲ್ಲಿ ಸೋಡಾದ ಬಳಕೆ ಮಾಡೊದ್ರಿಂದ ಆರೋಗ್ಯಕ್ಕೆ ತುಂಬಾನೆ ಹಾನಿಯಾಗುತ್ತೆ ಅನ್ನೋದು ಗೊತ್ತಾ?

ಭಾರತದಲ್ಲಿ ಹೆಚ್ಚಿನ ಜನರು ಕೋಲ್ಡ್ ಡ್ರಿಂಕ್ ಅಥವಾ ಸೋಡ ಮಿಕ್ಸ್ (cold drink or soda) ಮಾಡಿದ ಆಲ್ಕೋಹಾಲ್  ಕುಡಿಯಲು ಇಷ್ಟಪಡ್ತಾರೆ. ಇದಕ್ಕೆ ಮುಖ್ಯ ಕಾರಣ ಏನಂದ್ರೆ ರುಚಿಯನ್ನು ಬದಲಾಯಿಸೋಕ್ಕೆ. ಯಾಕಂದ್ರೆ ಆಲ್ಕೋಹಾಲ್ ಕಹಿಯಾಗಿದೆ, ಜನರು ಅದನ್ನು ಸಿಹಿಯಾಗಿಸಲು ಅದರ ಜೊತೆ ಸೋಡಾ ಅಥವಾ ಕೋಲ್ಡ್ ಡ್ರಿಂಕ್ಸ್ ಸೇವಿಸುತ್ತಾರೆ. ಆದರೆ ಈ ವಿಧಾನವು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ ಅನ್ನೋದು ಗೊತ್ತಿದ್ರೆ, ಮತ್ತೆ ನೀವು ಹಾಗೇ ಕುಡಿಯೋದಿಲ್ಲ. 

Tap to resize

ಅದು ಪಬ್, ಬಾರ್ ಅಥವಾ ಮನೆಯಾಗಿರಲಿ, ಜನರು ಹೆಚ್ಚಾಗಿ ನೀರು ಮತ್ತು ಸೋಡಾದೊಂದಿಗೆ ವಿಸ್ಕಿ (Wisky) ಕುಡಿಯಲು ಇಷ್ಟಪಡ್ತಾರೆ. ಇದನ್ನು ವಿಸ್ಕಿ ಹೈಬಾಲ್ ಎಂದು ಕರೆಯಲಾಗುತ್ತೆ, ಇದು ಭಾರತದಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ವಿಸ್ಕಿಯ ಕಹಿ ರುಚಿಯನ್ನು ದೂರ ಮಾಡಲು ಜನ ಈ ರೀತಿಯಾಗಿ ಅದನ್ನ ಕುಡಿಯುತ್ತಾರೆ.

ಸೋಡಾದಲ್ಲಿ ಇಂಗಾಲದ ಡೈಆಕ್ಸೈಡ್ (carbon dioxide)  ಇರುತ್ತೆ ಮತ್ತು ಅದನ್ನು ಆಲ್ಕೋಹಾಲ್ ಗೆ ಸೇರಿಸಿದ ತಕ್ಷಣ, ಆಲ್ಕೋಹಾಲ್ ನಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತೆ, ಜೊತೆಗೆ ಸೋಡಾ ಆಲ್ಕೋಹಾಲ್ ನ ಕಹಿ ರುಚಿಯನ್ನು ಕಡಿಮೆ ಮಾಡುತ್ತೆ. ಜನರು ಆಲ್ಕೋಹಾಲ್ ಗೆ ತಂಪು ಪಾನೀಯಗಳು ಅಥವಾ ಸೋಡಾ ಸೇರಿಸಲು ಇಷ್ಟಪಡಲು ಇದು ಮುಖ್ಯ ಕಾರಣ.

ಆರೋಗ್ಯಕ್ಕೆ ಹಾನಿಕಾರಕ
ಸೋಡ ಮಿಕ್ಸ್ ಮಾಡಿದ ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ.. ಸೋಡಾ ಮಿಶ್ರಿತ ಆಲ್ಕೋಹಾಲ್ ನಲ್ಲಿರುವ ಇಂಗಾಲದ ಡೈಆಕ್ಸೈಡ್ ನಮ್ಮ ರಕ್ತದಲ್ಲಿ ವೇಗವಾಗಿ ಕರಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಆಮ್ಲವು ದೇಹದಲ್ಲಿನ ಕ್ಯಾಲ್ಸಿಯಂ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಮೂತ್ರದ ಮೂಲಕ ಬೇಗನೆ ಹೊರಹೋಗುತ್ತದೆ. ಕ್ಯಾಲ್ಸಿಯಂ (calcium) ಕರಗುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತೆ. 

ಆಲ್ಕೋಹಾಲ್ ಮತ್ತು ಕೋಲ್ಡ್ ಡ್ರಿಂಕ್ಸ್ ಎರಡರಲ್ಲೂ ಸಕ್ಕರೆ ಪ್ರಮಾಣ ಇರುತ್ತೆ ಮತ್ತು ಇವೆರಡನ್ನೂ ಒಟ್ಟಿಗೆ ಕುಡಿಯೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹದಗೆಡುತ್ತೆ. ಅನೇಕ ತಂಪು ಪಾನೀಯಗಳು ಕೆಫೀನ್ ಅನ್ನು ಸಹ ಹೊಂದಿರುತ್ತವೆ, ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತೆ. ಆದ್ದರಿಂದ, ಆಲ್ಕೋಹಾಲ್ ಜೊತೆ ಸೋಡಾ ಅಥವಾ ಕೋಲ್ಡ್ ಡ್ರಿಂಕ್ಸ್ ಬೆರೆಸಿ ಸೇವಿಸಬೇಡಿ. 

ಪ್ರತಿದಿನ ಅಥವಾ ನಿಯಮಿತವಾಗಿ ತಂಪು ಪಾನೀಯ ಬೆರೆಸಿದ ಆಲ್ಕೋಹಾಲ್ ಕುಡಿಯುವ ಜನರು ನಿರ್ಜಲೀಕರಣ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ ಎಂದು ತಜ್ಞರು ಹೇಳುತ್ತಾರೆ. ದೇಹದಲ್ಲಿ ಡಿಹೈಡ್ರೇಶನ್ ಆದ್ರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ, ಹಾಗಾಗಿ ಆಲ್ಕೋಹಾಲ್ ಜೊತೆ ಹೆಚ್ಚು ಸೋಡಾ ಸೇವಿಸಬೇಡಿ. 

Latest Videos

click me!