ಚಳಿಗಾಲ ಶುರುವಾಗ್ತಿದ್ದಂಗೆ ನಿದ್ದೆ, ಸೋಮಾರಿತನ ಹೆಚ್ಚಾಗೋದು ಯಾಕ್ ಗೊತ್ತಾ?

Published : Nov 30, 2024, 02:04 PM ISTUpdated : Nov 30, 2024, 02:48 PM IST

ಚಳಿಗಾಲದಲ್ಲಿ ಸಾಮಾನ್ಯವಾಗಿ ನಿದ್ದೆ ಜಾಸ್ತಿ ಬರುತ್ತೆ, ಅದೆಷ್ಟೇ ಬೇಗ ಎದ್ದೇಳಕ್ಕೆ ಟ್ರೈ ಮಾಡಿದ್ರೂ ಕೂಡ ಮತ್ತೊಂದಿಷ್ಟು ಹೊತ್ತು ನಿದ್ದೆ ಮಾಡುವಂತಹ ಸೋಮಾರಿತನ ಬರುತ್ತೆ. ಹೀಗಾಗೋದು ಯಾಕೆ ಗೊತ್ತಾ?  

PREV
19
ಚಳಿಗಾಲ ಶುರುವಾಗ್ತಿದ್ದಂಗೆ ನಿದ್ದೆ, ಸೋಮಾರಿತನ ಹೆಚ್ಚಾಗೋದು ಯಾಕ್ ಗೊತ್ತಾ?

 ಶೀತ ಚಳಿಗಾಲ (winter season) ಬಂದ ತಕ್ಷಣ, ಮನಸ್ಸು ಯಾವಾಗಲೂ ಹಾಸಿಗೆಯಲ್ಲಿರಲು ಬಯಸುತ್ತದೆ. ಚಳಿಗಾಲದಲ್ಲಿ ಈ ರೀತಿಯ ಸೋಮಾರಿತನ ಸಾಮಾನ್ಯವಾಗಿದೆ. ಆದರೂ, ಚಳಿಗಾಲದಲ್ಲಿ ಈ ಸೋಮಾರಿತನದ ಹೆಚ್ಚು ನಿದ್ದೆ ಯಾಕೆ ಬರೋದು ಅಂತ ನೀವು ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಇದಕ್ಕೆ ಪ್ರಕೃತಿಯ ದೊಡ್ಡ ಕೈವಾಡವಿದೆ. ಹೌದು ಚಳಿಗಾಲದಲ್ಲಿ ಯಾಕೆ ಹೀಗಾಗುತ್ತೆ ಅನ್ನೋದನ್ನ ನೋಡೋಣ.   

29

ಚಳಿಗಾಲದಲ್ಲಿ ಸೋಮಾರಿತನ 
ಚಳಿಗಾಲದ ದಿನಗಳು ಚಿಕ್ಕದಾಗಿರುತ್ತವೆ ಮತ್ತು ರಾತ್ರಿಗಳು ತುಂಬಾನೆ ದೊಡ್ಡದಾಗಿರುತ್ತೆ, ಇದರಿಂದಾಗಿ ಅನೇಕ ಜನರು ದಿನವಿಡೀ ಸೋಮಾರಿತನ (laziness)  ಮತ್ತು ನಿದ್ರೆಗೆ ಜಾರುತ್ತಾರೆ. ಇದು ಏಕೆ ಸಂಭವಿಸುತ್ತದೆ  ಅನ್ನೋದನ್ನ ನೋಡೋಣ ಬನ್ನಿ. 

39

ಸಿರ್ಕಾಡಿಯನ್ ರಿದಮ್
ಚಳಿಗಾಲದ ಅಲ್ಪ ದಿನಗಳು ಮತ್ತು ಸೂರ್ಯನ ಕಡಿಮೆ ಬೆಳಕು ಮತ್ತು ಮಂಜು ನಮ್ಮ ಸಿರ್ಕಾಡಿಯನ್ ರಿದಮ್ ನ್ನು ಅಡ್ಡಿಪಡಿಸುತ್ತದೆ, ಇದು ನಮ್ಮ ನಿದ್ರೆ ಮತ್ತು ಎಚ್ಚರದ ಚಕ್ರಗಳನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ದಿನದಿವಿಡೀ ನಿದ್ದೆ ಬರುತ್ತದೆ. 
 

49

ಹೆಚ್ಚು ಮೆಲಟೋನಿನ್
ದೀರ್ಘ ರಾತ್ರಿಗಳು ನಮ್ಮ ನಿದ್ರೆಗೆ ಕಾರಣವಾದ ಹಾರ್ಮೋನ್ ಮೆಲಟೋನಿನ್ ಅನ್ನು ಉತ್ಪಾದಿಸಲು ಮೆದುಳಿಗೆ ಹೇಳುತ್ತವೆ, ಇದು ಹಗಲಿನ ನಿದ್ರೆಗೆ ಕಾರಣವಾಗುತ್ತದೆ.

59

ವಿಟಮಿನ್ ಡಿ ಕೊರತೆ (Vitamin D)
ಕಡಿಮೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ವಿಟಮಿನ್ ಡಿ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಆಯಾಸ ಮತ್ತು ಸೋಮಾರಿತನಕ್ಕೆ ಕಾರಣವಾಗುತ್ತದೆ. 
 

69

ದೈಹಿಕ ಚಟುವಟಿಕೆಯ ಕೊರತೆ
ಶೀತ ವಾತಾವರಣದಲ್ಲಿ, ಜನರು ವ್ಯಾಯಾಮ ಮತ್ತು ಜಿಮ್ ಗಳ ಬದಲು ಮನೆಯಲ್ಲಿಯೇ ಇರಲು ಬಯಸುತ್ತಾರೆ. ಇದು ಶಕ್ತಿಯ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ನಿದ್ರೆ ಮತ್ತು ಆಲಸ್ಯಕ್ಕೆ ಕಾರಣವಾಗಬಹುದು. 

79

ಆಹಾರ ಬದಲಾವಣೆಗಳು
ಚಳಿಗಾಲದಲ್ಲಿ, ಹೆಚ್ಚು ಚಳಿ ಇರೋದರಿಂದ ಬಿಸಿ ಬಿಸಿ ಬೋಂಡಾದಂತಹ ಹೆಚ್ಚು ಕರಿದ, ಕಾರ್ಬ್ ಭರಿತ ಆಹಾರವನ್ನು ತಿನ್ನುತ್ತೇವೆ, ಇದು ದೇಹಕ್ಕೆ ಆಲಸ್ಯವನ್ನುಂಟು ಮಾಡುತ್ತದೆ. 

89

ಹಿತಕರವಾದ ಅನುಭವ
ಹೊರಗಿನ ಶೀತ ಮತ್ತು ಮನೆಯೊಳಗಿನ ಬೆಚ್ಚಗಿನ ಮತ್ತು ಹಿತಕರವಾದ ಅನುಭವವು ದೇಹವನ್ನು ವಿಶ್ರಾಂತಿ ಮತ್ತು ಆರಾಮದಾಯಕ ಮನಸ್ಥಿತಿಯಲ್ಲಿರಿಸುತ್ತದೆ, ಇದರಿಂದಾಗಿ ನಿಮಗೆ ಪದೇ ಪದೇ ನಿದ್ದೆ ಬರೋದಕ್ಕೆ ಕಾರಣವಾಗಬಹುದು. 

99

ಚಳಿಗಾಲದ ಮಂಪರನ್ನ ಎದುರಿಸೋದು ಹೇಗೆ?
ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಿ, ಪ್ರತಿದಿನ ಒಂದೇ ಸಮಯದಲ್ಲಿ ನಿದ್ರೆ ಮಾಡೋದು, ಒಂದೇ ಸಮಯಕ್ಕೆ ಎದ್ದೇಳುವ ಅಭ್ಯಾಸವನ್ನು ರೂಢಿಸಿ. ಇದರಿಂದ ದಿನಪೂರ್ತಿ ನಿದ್ದೆ ಬರೋದೆ ಇಲ್ಲ. 
 

Read more Photos on
click me!

Recommended Stories