ಚಳಿ ಅಂತ ನೀರು ಕಡಿಮೆ ಕುಡಿದರೂ ಪದೇ ಪದೇ ಬಾತ್‌ರೂಮ್‌ಗೆ ಹೋಗ್ತೀರಾ? ಹಾಗಿದ್ರೆ ಇದನ್ನು ತಪ್ಪದೆ ಓದಿ

First Published | Nov 30, 2024, 11:16 AM IST

ಚಳಿಗಾಲದಲ್ಲಿ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕು ಅನಿಸುತ್ತಿದ್ದರೆ ತಪ್ಪಲ್ಲ ಆದರೆ ಈ ಸಮಯದಲ್ಲಿ ನೀವು ಎಚ್ಚರ ವಹಿಸಬೇಕಾದ ವಿಚಾರಗಳು ಇಲ್ಲಿದೆ.....

ಬಳಿಗಾಲ ಶುರುವಾದರೆ ಸಾಕು ಮನೆಯಲ್ಲಿ ಇಷ್ಟೂ ದಿನ ಮರೆಯಾಗಿದ್ದ ಸ್ವೆಟರ್‌, ಜಾಕೆಟ್‌ ಮತ್ತು ಸಾಕ್ಸ್‌ ಕೈಗೆ ಸಿಗುತ್ತದೆ. ಬಿಸಿ ಬಿಸಿ ನೀರು ಕುಡಿಯಲು ಆರಂಭಿಸಿದ್ದರೂ ಬೇಸಿಗೆಯಲ್ಲಿ ಕುಡಿಯುವಷ್ಟು ನೀರು ನಾವು ಕುಡಿಯುವುದಿಲ್ಲ. 

ಬಳಿಗಾಲದಲ್ಲಿ ನೀರು ಕಡಿಮೆ ಕುಡಿದರೂ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕು ಅನಿಸುತ್ತದೆ. ಇದಕ್ಕೆ ಕಾರಣ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ನಿಜಕ್ಕೂ ನಮ್ಮ ದೇಹದಲ್ಲಿ ನಡೆಯುವ ವಿಸ್ಮಯಗಳಿವು.

Latest Videos


ಬೇಸಿಗೆಯಲ್ಲಿ ಏನೂ ಮಾಡದಿದ್ದರೂ ಕೂತಲ್ಲಿ ನಿಂತಲ್ಲಿ ಬೆವರುತ್ತೀವಿ. ಆಗ ನಾವು ಯಾವುದೇ ರೀತಿಯಲ್ಲಿ ಲಿಕ್ವಿಡ್‌ ಸ್ವೀಕರಿಸಿದ್ದರು ಅದು ಬೆವರಿನಲ್ಲಿ 70%  ಹೋಗುತ್ತದೆ ಇನ್ನು ಉಳಿದು 30% ಮೂತ್ರದಲ್ಲಿ ಹೋಗುತ್ತದೆ. 

ಆದರೆ ಚಳಿಗಾಲದಲ್ಲಿ ಬೆವರುವುದು ತುಂಬಾ ಕಡಿಮೆ. ಹೀಗಾಗಿ ನಾವು ಕಡಿಯುವುದು ಕಡಿಮೆ ನೀರು ಆದರೂ ಅದು ಮೂತ್ರದ ಮೂಲಕವೇ ಹೊರ ಬರಬೇಕಿದೆ. ಅಲ್ಲದೆ ಚಳಿಗಾಲದಲ್ಲಿ ನಮ್ಮ ದೇಹ ಬೆಚ್ಚಗಿರಲು ನಮ್ಮ ಚರ್ಮ ಮತ್ತು ರಕ್ತ ಸಹಾಯ ಮಾಡುತ್ತಾರೆ.

ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವುದರಿಂದ ಹೆಚ್ಚಿನ ಜನರಲ್ಲಿ ಇನ್‌ಫೆಕ್ಷನ್ ಕಾಣಿಸುತ್ತದೆ. ಇಲ್ಲಿ ಪದೇ ಪದೇ ಮೂತ್ರವಿಸರ್ಜನೆ ಮಾಡಿ ಹೈಜಿನ್‌ ಕಾಪಾಡಿಕೊಳ್ಳಲಿಲ್ಲ ಅಂದರೂ ಸಮಸ್ಯೆ ಆಗುತ್ತದೆ. ಅಥವಾ ಮೂತ್ರವಿಜರ್ಸನೆ ಮಾಡದೆ ತಡೆದುಕೊಂಡರೂ ಇನ್‌ಫೆಕ್ಷನ್‌ಗೆ ಕಾರಣವಾಗುತ್ತದೆ. ಹೀಗಾಗಿ ಚಳಿಗಾಳದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಚಳಿಗಾಲದಲ್ಲಿ ಪದೇ ಪದೇ ಏನಾದರೂ ತಿನ್ನಬೇಕು ಅನಿಸುತ್ತದೆ ಆಗ ನಾನು ಬಿಸಿ ಏನೇ ಸಿಕ್ಕರೆ ಅದು ಒಳ್ಳೆಯದ ಕೆಟ್ಟದ ಎಂದು ಯೋಚನೆ ಮಾಡದೆ ಸೇವಿಸುತ್ತೀವಿ. ಈ ಸಮಯದಲ್ಲಿ ನಮ್ಮ ದೇಹ ಎಕ್ಸಸ್‌ ಕ್ಯಾಲ್ಸಿಯಂ ಪಡೆಯಲು ಪ್ರಯತ್ನಿಸುತ್ತದೆ...ನಾವು ಸೇವಿಸುವ ಆಹಾರದಲ್ಲಿ ಒಳ್ಳೆಯ ಕ್ಯಾಲ್ಸಿಯಂ ಸಿಗದಿದ್ದರೆ ಕಿಡ್ನಿ ಫಿಲ್ಟರ್ ಮಾಡಲು ವಿಫಲವಾಗುತ್ತದೆ. ಆಗ ಪದೇ ಪದೇ ಮೂತ್ರವಿಸರ್ಜಿಸುವುದು ಹಾಗೂ ಇನ್‌ಫೆಕ್ಷನ್ ಆಗುವುದು. 
 

click me!