ಚಹಾ ಕುಡಿಯೋಕೆ ಡಿಸ್ಪೋಸೇಬಲ್ ಕಪ್ ಬಳಸ್ತಿದ್ರೆ ಇವತ್ತೆ ನಿಲ್ಲಿಸಿ… ಇಲ್ಲಾಂದ್ರೆ ಅಪಾಯ ಖಚಿತ!

First Published | Dec 25, 2023, 5:13 PM IST

ನೀವು ಡಿಸ್ಪೋಸೇಬಲ್ ಕಪ್ ಅಥವಾ ಲೋಟದಲ್ಲಿ ಚಹಾವನ್ನು ಕುಡಿದರೆ, ಇಂದೇ ನೀವು ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಬೇಕು ಏಕೆಂದರೆ ಅದು ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.

ನೀವೆಲ್ಲರೂ ನೀರು, ಚಹಾ ಅಥವಾ ಕಾಫಿಯನ್ನು ಪ್ಲಾಸ್ಟಿಕ್ ಅಥವಾ ಕಾಗದದ ಡಿಸ್ಪೋಸೇಬಲ್ ಕಪ್ ಗಳು (disposable cups) ಅಥವಾ ಲೋಟಗಳಲ್ಲಿ ಒಂದಲ್ಲ ಒಂದು ಸಮಯದಲ್ಲಿ ಸೇವಿಸಿರಬೇಕು ಅಲ್ವಾ. ಇದು ಮದುವೆಯ ಪಾರ್ಟಿಯಾಗಿರಲಿ ಅಥವಾ ರಸ್ತೆಬದಿಯ ಚಹ ಅಂಗಡಿಯಾಗಿರಲಿ, ಈ ಎಲ್ಲಾ ಸ್ಥಳಗಳಲ್ಲಿ ಡಿಸ್ಪೋಸೇಬಲ್ ಕಪ್ ಗಳು ಅಥವಾ ಲೋಟಗಳನ್ನು ವಿವೇಚನೆಯಿಲ್ಲದೆ ಬಳಸಲಾಗುತ್ತದೆ. 

ಹಾಗೇ ನೋಡಿದ್ರೆ, ಡಿಸ್ಪೋಸೇಬಲ್  ಕಪ್ ಬಳಕೆ ತುಂಬಾ ಸುಲಭ, ಆದ್ದರಿಂದ ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ ನಿಮ್ಮ ಜೀವನವನ್ನು ಸುಲಭಗೊಳಿಸುವ ಈ ಕಪ್ ಗಳು ಅಥವಾ ಗ್ಲಾಸ್ ಗಳು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಡಿಸ್ಪೋಸೇಬಲ್ ಕಪ್ ಅಥವಾ ಲೋಟದಲ್ಲಿ ಚಹಾ ಕುಡಿಯುವುದರಿಂದ ಉಂಟಾಗುವ ಅನಾನುಕೂಲತೆಗಳು (disadvantages) ಯಾವುವು ಎಂದು ತಿಳಿಯೋಣ.  

Latest Videos


ಡಿಸ್ಪೋಸೇಬಲ್ ಕಪ್ ಗಳಲ್ಲಿ ಚಹಾ ಕುಡಿಯುವ ಅನಾನುಕೂಲಗಳು: ಈ ಡಿಸ್ಪೋಸೇಬಲ್ ಕಪ್ ಆರೋಗ್ಗ್ಯಕ್ಕೆ ತುಂಬಾನೆ ಮಾರಕವಾಗಿದೆ. ಇದರಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತೆ. ಈ ಪ್ಲಾಸ್ಟಿಕ್ ನಲ್ಲಿ ಮೆಟ್ರೋಸಮೈನ್ ಮತ್ತು ಬಿಸ್ಫೆನಾಲ್ ನಂತಹ ಮಾರಕ ರಾಸಾಯನಿಕಗಳಿವೆ (chemicals), ಅದು ನಿಮ್ಮ ಆರೋಗ್ಯವನ್ನು ಕೆಟ್ಟದಾಗಿ ಹಾಳುಮಾಡುತ್ತದೆ. 

ನೀವು ಬಿಸಿ ಚಹಾ ಅಥವಾ ಕಾಫಿ ಕುಡಿದಾಗ, ಮೈಕ್ರೋಪ್ಲಾಸ್ಟಿಕ್ ಕಣಗಳು ಚಹಾದಲ್ಲಿ ಕರಗಲು ಪ್ರಾರಂಭಿಸುತ್ತವೆ ಮತ್ತು ಅವು ಚಹಾದೊಂದಿಗೆ ನಮ್ಮ ದೇಹವನ್ನು ಪ್ರವೇಶಿಸುತ್ತವೆ, ಅಂದರೆ, ನೀವು ತಿಳಿಯದೆ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ. ಈ ಪ್ಲಾಸ್ಟಿಕ್ ಕಣಗಳು ಕರುಳಿನಲ್ಲಿ ಸಂಗ್ರಹವಾಗಬಹುದು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತವೆ. ಇದು ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಇದಲ್ಲದೆ, ಮೂತ್ರಪಿಂಡದ ಹಾನಿಯನ್ನು (kidney problem) ಸಹ ಉಂಟು ಮಾಡಬಹುದು. 
 

ಗರ್ಭಾವಸ್ಥೆಯಲ್ಲಿ (pregnancy), ಡಿಸ್ಪೋಸೇಬಲ್ ಕಪ್ ಅಥವಾ ಲೋಟವನ್ನು ಮರೆತೂ ಕೂಡ ಬಳಸಬಾರದು, ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಡಿಸ್ಪೋಸೇಬಲ್ ಕಪ್ ಗಳನ್ನು ಬಳಸುವ ಜನರು ತುಂಬಾ ಹೆಚ್ಚಿನ ಅಪಾಯದಲ್ಲಿದ್ದಾರೆ. ಇವರು ಗಂಭೀರ ಕಾಯಿಲೆಗಳಿಂದ ಬಳಲುವ ಸಾಧ್ಯತೆ ತುಂಬಾನೆ ಹೆಚ್ಚಿದೆ. 
 

ಅದೇ ಸಮಯದಲ್ಲಿ, ಈ ಪ್ಲಾಸ್ಟಿಕ್ ಕಪ್ ಗಳಿಂದ ಉಂಟಾಗುವ ಅಪಾಯವನ್ನು ತಪ್ಪಿಸಲು, ಕಾಗದದ ಕಪ್ ಗಳು ಮಾರುಕಟ್ಟೆಗೆ ಬಂದವು. ಸಮಸ್ಯೆಯನ್ನು ತಪ್ಪಿಸಲು ಜನರು ಪ್ಲಾಸ್ಟಿಕ್ ಬದಲಿಗೆ ಕಾಗದದ ಕಪ್ ಗಳನ್ನು ಬಳಸಲು ಪ್ರಾರಂಭಿಸಿದರು, ಆದರೆ ಕಾಗದದ ಕಪ್ ಗಳು (paper cups) ಸಹ ಪ್ಲಾಸ್ಟಿಕ್ ಅನ್ನು ಹೊಂದಿರುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 

ಹೌದು ಕಾಗದ ಡಿಸ್ಪೋಸೇಬಲ್ ಕಪ್ ಗಳನ್ನು ತಯಾರಿಸಲು, ಹೈಡ್ರೋಫೋಬಿಕ್ ಫಿಲ್ಮ್ ನ ಪದರವನ್ನು ಬಳಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ನಿಂದ ತಯಾರಿಸಲಾಗುತ್ತದೆ. ಕಾಗದದ ಕಪ್ ಗಳಲ್ಲಿನ ರಾಸಾಯನಿಕಗಳು ದೇಹದಲ್ಲಿ ವಿಷವನ್ನು ಸಂಗ್ರಹಿಸಲು ಕಾರಣವಾಗಬಹುದು. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  
 

click me!