ಪಿರಿಯಡ್ಸ್ ಆಗೋ ಮುನ್ನ ನಿಮಗೂ ಕಾಮಾಸಕ್ತಿ ಹೆಚ್ಚಾಗುತ್ತಾ? ಯಾಕೀಗಾಗುತ್ತೆ?

First Published | Nov 26, 2023, 11:13 AM IST

ಪಿಎಂಎಸ್ ಸಮಯದಲ್ಲಿ, ವಿವಿಧ ರೀತಿಯ ಭಾವನೆಗಳನ್ನು ಎದುರಿಸೋದು ಸಾಮಾನ್ಯ. ಅಂತಹ ಭಾವನೆಗಳಲ್ಲಿ ಒಂದು ಲೈಂಗಿಕತೆಯ ಬಗ್ಗೆ ಹೆಚ್ಚು ಉತ್ಸುಕರಾಗಿರುವುದು. ಋತುಚಕ್ರದ ಮೊದಲು ನಿಮಗೂ ಹೀಗಾಗುತ್ತಾ? ಅದಕ್ಕೆ ಕಾರಣ ಏನು ತಿಳಿಯೋಣ. 
 

ಸೆಕ್ಸ್ ಬಗ್ಗೆ ನಿಮ್ಮ ಮನಸ್ಥಿತಿ ಮತ್ತು ಭಾವನೆಗಳು ಬದಲಾಗಬಹುದು. ಬಹುಶಃ ಕೆಲವೊಮ್ಮೆ ನೀವು ಸೆಕ್ಸ್ ಮಾಡಲು ಕಾಯುವಿರಿ, ಇನ್ನೂ ಕೆಲವೊಮ್ಮೆ ಅದರಿಂದ ಸಂಪೂರ್ಣವಾಗಿ ಬೇಸರಗೊಳ್ಳುತ್ತೀರಿ. ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಮಹಿಳೆಯರು ನಿಜವಾಗಿಯೂ ಭಾವನೆಗಳ ಪೆಟ್ಟಿಗೆ ಅಂದ್ರೆ ಸುಳ್ಳಲ್ಲ .ಅದರಲ್ಲೂ ಪಿಎಂಎಸ್ ಸಮಯದಲ್ಲಿ, ಮಹಿಳೆಯರು ವಿವಿಧ ರೀತಿಯ ಭಾವನೆಗಳನ್ನು ಎದುರಿಸಬಹುದು. ಅಂತಹ ಒಂದು ಭಾವನೆಯೆಂದರೆ ಲೈಂಗಿಕತೆಯ ಬಗ್ಗೆ ಹೆಚ್ಚು ಉತ್ಸುಕರಾಗಿರುವುದು. ನಿಮ್ಮ ಋತುಚಕ್ರದ ಮೊದಲು ನೀವು ಹೆಚ್ಚು ಕಾಮಾಸಕ್ತಿ (horney before periods) ಅನುಭವಿಸಿದ್ದೀರಾ? ಇದಕ್ಕೆ ಕಾರಣ ಏನು ತಿಳಿಯೋಣ.  
 

ಋತುಚಕ್ರ ಪ್ರಾರಂಭವಾಗುವ ಮೊದಲು ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಶಾರೀರಿಕ ಬದಲಾವಣೆಗಳು (physical changes) ಹಾರ್ಮೋನುಗಳಿಗೆ ಸಂಬಂಧಿಸಿವೆ, ಏಕೆಂದರೆ ಋತುಚಕ್ರ ಪ್ರಾರಂಭವಾಗುವ ಮೊದಲು ದೇಹದಲ್ಲಿನ ಅನೇಕ ಹಾರ್ಮೋನುಗಳು ವೇಗವಾಗಿ ಬದಲಾಗುತ್ತವೆ. ಋತುಸ್ರಾವಕ್ಕೆ ಕೆಲವು ದಿನಗಳ ಮೊದಲು, ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆ ಹೆಚ್ಚಾಗುತ್ತದೆ. ನೀವೆಲ್ಲರೂ ಅದನ್ನು ಅನುಭವಿಸಿರಬೇಕು. ಆದರೆ ಅದರ ಹಿಂದಿನ ಕಾರಣ ಏನು ಅನ್ನೋದನ್ನು ತಿಳಿದಿದ್ದೀರಾ? ಇಲ್ಲದಿದ್ದರೆ, ನೀವು ವಿಷಯದ ಬಗ್ಗೆ ತಿಳಿಯಬೇಕು. 
 

Latest Videos


ಋತುಚಕ್ರ ಪ್ರಾರಂಭವಾಗುವ ಮೊದಲು ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆ ಏಕೆ ಹೆಚ್ಚಾಗುತ್ತದೆ  

ತಜ್ಞರ ಪ್ರಕಾರ ಮುಟ್ಟಿನ ಸಮಯದಲ್ಲಿ ನಿಕಟ ಭಾಗಗಳಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ರಕ್ತದ ಹರಿವನ್ನು (blood flow) ಹೆಚ್ಚಿಸುವುದು ಮಹಿಳೆಯರು ಹಾರ್ನಿ ಆಗಲು ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಇದಲ್ಲದೆ, ಈ ಸಮಯದಲ್ಲಿ ಡಿಸ್ಚಾರ್ಜ್ ಕೂಡ ತುಂಬಾ ಹೆಚ್ಚಾಗಿರುತ್ತದೆ,ಇದರಿಂದಾಗಿ ವಜೈನಾ ಸ್ಮೂತ್ ಆಗಿರುತ್ತೆ. ಇದು ಯೋನಿ ಶುಷ್ಕತೆಗೆ ಕಾರಣವಾಗುವುದಿಲ್ಲ, ಆದ್ದರಿಂದ ಮಹಿಳೆಯರು ಹೆಚ್ಚು ಉದ್ವೇಗಗೊಳ್ಳುತ್ತಾರೆ.

ವೈದ್ಯರ ಪ್ರಕಾರ, ಅಂಡೋತ್ಪತ್ತಿ ನಂತರ ಮುಂಬರುವ ದಿನಗಳಲ್ಲಿ ಮಹಿಳೆಯರ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆ ಹೆಚ್ಚಾಗುತ್ತದೆ. ಈಸ್ಟ್ರೊಜೆನ್, ಟೆಸ್ಟೋಸ್ಟೆರಾನ್ ಎಂಬ ಮತ್ತೊಂದು ಹಾರ್ಮೋನ್ ಜೊತೆಗೆ, ಅಂಡೋತ್ಪತ್ತಿ (ovulation period) ಸಮಯದಲ್ಲಿ ಮಹಿಳೆಯರಲ್ಲಿ ಪ್ರಚೋದನೆಯನ್ನು ಹೆಚ್ಚಿಸಲು ಕಾರಣವಾಗಿದೆ.
 

ಅಂಡೋತ್ಪತ್ತಿ ನಂತರ, ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾಗುತ್ತದೆ. ಪ್ರೊಜೆಸ್ಟರಾನ್ ಮಹಿಳೆಯರಲ್ಲಿ ಬ್ಲೋಟಿಂಗ್ ಮತ್ತು ವಾಟರ್ ರೆಸಿಸ್ಟಿಂಗ್ ಗೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ, ಅಂಡೋತ್ಪತ್ತಿ ನಂತರದ ಹಂತದಲ್ಲಿ ಸೆಕ್ಸ್ ಡ್ರೈವ್ ಕಡಿಮೆಯಾಗುತ್ತದೆ ಎಂದು ಕೆಲವು ಮಹಿಳೆಯರಲ್ಲಿ ಕಂಡುಬಂದಿದೆ. ಪ್ರೊಜೆಸ್ಟರಾನ್ ಹಾರ್ಮೋನ್ ಮಟ್ಟವು (hormone level) ಋತುಚಕ್ರದ ಮೊದಲು ಮತ್ತು ನಂತರ ಕಡಿಮೆಯಾಗುತ್ತದೆ. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತದೆ.

ಪಿರಿಯಡ್ಸ್ ಸಮಯದಲ್ಲೂ ಲೈಂಗಿಕ ಬಯಕೆ ಹೆಚ್ಚಾಗಬಹುದು
ಮುಟ್ಟಿನ ಸಮಯದಲ್ಲಿ, ಮಹಿಳೆಯರು ಫರ್ಟೈಲ್ (fertile) ಆಗಿರೋದಿಲ್ಲ, ಆದ್ದರಿಂದ ಅವರು ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ, ಆದ್ದರಿಂದ ಮಹಿಳೆಯರಿಗೆ ಈ ಸಮಯದಲ್ಲಿ ಯಾವುದೇ ಭಯ ಇರೋದಿಲ್ಲ ಮತ್ತು ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಾರೆ.
 

ತಜ್ಞರ ಪ್ರಕಾರ, ಮಾನಸಿಕ ಅಂಶಗಳು ಸಹ ಇದರಲ್ಲಿ ಮುಖ್ಯವಾಗುತ್ತವೆ. ಮಹಿಳೆಯರು ಋತುಚಕ್ರದ ಸಮಯದಲ್ಲಿ, ಅವರು ಮಾನಸಿಕವಾಗಿ ಸಿದ್ಧರಾಗುತ್ತಾರೆ, ಈ ಸಮಯದಲ್ಲಿ ಅವರು ಗರ್ಭಿಣಿಯಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮಹಿಳೆಯರು ಕೇರ್ ಲೆಸ್ ಆಗಿ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಾಧ್ಯವಾಗುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಹೆಚ್ಚಿದ ಲೈಂಗಿಕ ಪ್ರಚೋದನೆಗೆ ಇದು ಒಂದು ಕಾರಣವಾಗಿರಬಹುದು.
 

ನೀವು ಸಹ ಮುಟ್ಟಿನ ಲೈಂಗಿಕತೆಯನ್ನು ಆನಂದಿಸಲು ಬಯಸಿದರೆ, ಈ ಸಲಹೆಗಳು ನಿಮಗಾಗಿ
ಋತುಚಕ್ರದ ಲೈಂಗಿಕತೆಯನ್ನು (periods sex) ಆನಂದಿಸುವುದು ತಪ್ಪಲ್ಲ. ಆದರೆ ಈ ಸಮಯದಲ್ಲಿ ಸೋಂಕಿನ ಅಪಾಯವು ಹೆಚ್ಚಾಗಿರುತ್ತದೆ, ಆದ್ದರಿಂದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ.

ಪಿರಿಯಡ್ಸ್ ಸೆಕ್ಸ್ ಗೆ ಮುನ್ನ ಟ್ಯಾಂಪೂನ್ಗಳು, ಮುಟ್ಟಿನ ಕಪ್ಗಳಂತಹ (tampoons and menstrual cup)ಉತ್ಪನ್ನಗಳನ್ನು ತೆಗೆದುಹಾಕಲು ಮರೆಯಬೇಡಿ. ಇದು ಆಕಸ್ಮಿಕವಾಗಿ ನಿಮ್ಮ ಯೋನಿಯೊಳಗೆ ಇದ್ದರೆ,  ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮೊದಲು, ಅದನ್ನು ನೆನಪಿನಿಂದ ತೆಗೆದುಹಾಕಿ.
 

 ಸೇಫ್ಟಿ ಬಗ್ಗೆ ಕಾಳಜಿ ವಹಿಸಿ. ನೀವು ಮುಟ್ಟಿನ ಲೈಂಗಿಕ ಕ್ರಿಯೆ ನಡೆಸುತ್ತಿದ್ದರೆ, ಖಂಡಿತವಾಗಿಯೂ ಸೇಫ್ಟಿಗೆ ಕಾಂಡೋಮ್ ಗಳನ್ನು (condoms) ಬಳಸಿ. ಹೆಚ್ಚಿನ ದಂಪತಿಗಳು ಋತುಚಕ್ರದ ಸಮಯದಲ್ಲಿ ಗರ್ಭಧಾರಣೆ ಸಂಭವಿಸುವುದಿಲ್ಲ ಎಂದು ಭಾವಿಸುತ್ತಾರೆ, ಆದ್ದರಿಂದ ಕಾಂಡೋಮ್ ಬಳಸೋದಿಲ್ಲ. ಆದರೆ ಇದು ಗರ್ಭಧಾರಣೆಯ ಬಗ್ಗೆ ಅಲ್ಲ, ಇದು ಸುರಕ್ಷತೆಯ ಬಗ್ಗೆ. ಕಾಂಡೋಮ್ ಬಳಸದಿದ್ದರೆ, ಇಬ್ಬರೂ ಎಸ್ಟಿಐಗಳನ್ನು (STI) ಪಡೆಯುವ ಸಾಧ್ಯತೆ ಇದೆ..

ನೀವು ಪಿರಿಯಡ್ಸ್ ಸೆಕ್ಸ್ ಮಾಡಲಿ ಅಥವಾ ಸಾಮಾನ್ಯ ಸೆಕ್ಸ್ ಮಾಡಲಿ, ನಿಮ್ಮ ಇಂಟಿಮೇಟ್ ಪ್ರದೇಶವನ್ನು  ಸೆಕ್ಸ್ ಗೂ ಮೊದಲು ಮತ್ತು ಲೈಂಗಿಕತೆಯ ನಂತರ ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ವಿಶೇಷವಾಗಿ ಋತುಚಕ್ರದಲ್ಲಿ ಇದು ಹೆಚ್ಚು ಮುಖ್ಯವಾಗುತ್ತದೆ. ಪುರುಷ ಸಂಗಾತಿಗಳು ನೈರ್ಮಲ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಅವರು ಸೋಂಕಿನ ಅಪಾಯ ಹೊಂದಿದ್ದಾರೆ..

click me!