ಭಾರತೀಯರು ಪ್ರತಿದಿನ ಚಿನ್ನದ ಆಭರಣ ಧರಿಸೋದು ಯಾಕೆ?

Published : May 16, 2025, 04:37 PM ISTUpdated : May 16, 2025, 04:39 PM IST

ಭಾರತೀಯರಿಗೆ ಚಿನ್ನದ ಜೊತೆಗಿನ ಸಂಬಂಧ ಹೇಗಿದೆ ಅನ್ನೊದು ನಿಮಗೆ ಗೊತ್ತೇ ಇದೆ. ಆದರೆ ಪ್ರತಿದಿನವೂ ಭಾರತೀಯರು ಚಿನ್ನ ಧರಿಸೋದಕ್ಕೆ ಕಾರಣ ಏನು ಗೊತ್ತಾ?   

PREV
16
ಭಾರತೀಯರು ಪ್ರತಿದಿನ ಚಿನ್ನದ ಆಭರಣ ಧರಿಸೋದು ಯಾಕೆ?

ಶತ ಶತಮಾನಗಳಿಂದ ಭಾರತೀಯ ಮನೆಗಳಲ್ಲಿ ಚಿನ್ನವನ್ನು (wearing gold) ಬಳಕೆ ಮಾಡುತ್ತಾ ಬಂದಿದ್ದಾರೆ. ಇದು ಕೇವಲ ಅಲಂಕರಿಸುವ ಆಭರಣ ಮಾತ್ರವಲ್ಲ, ಚಿನ್ನವನ್ನು ನಮ್ಮನ್ನು ರಕ್ಷಿಸಲು, ನಮ್ಮನ್ನು ಹೀಲ್ ಮಾಡಲು, ಡಿವೈನ್ ಕನೆಕ್ಷನ್ ಹೊಂದಲು ಚಿನ್ನ ಸಹಾಯ ಮಾಡುತ್ತೆ. ವೇದಿಕ್ ಸಂಪ್ರದಾಯದಿಂದ ಹಿಡಿದು, ದೇವಸ್ಥಾನದ ಸಂಸ್ಕೃತಿವರೆಗೂ, ಆಯುರ್ವೇದ ಹಾಗೂ ಜ್ಯೋತಿಷ್ಯ ಶಾಸ್ತ್ರದವರೆಗೆ ಚಿನ್ನವು ಆಧ್ಯಾತ್ಮಿಕದಲ್ಲಿ ತುಂಬಾನೆ ಪವರ್ ಫುಲ್ ಆಗಿರುವ ಸ್ಥಾನವನ್ನು ಪಡೆದಿದೆ. 
 

26

ಚಿನ್ನದಿಂದ ಹಲವು ಆರೋಗ್ಯ ಪ್ರಯೋಜನಗಳು (health benefits) ಸಹ ಇವೆ. ಕೆಲವು ಅಧ್ಯಯನಗಳು ಶುದ್ಧ ಚಿನ್ನವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಎಂದು ತೋರಿಸಿವೆ. 1900 ರ ದಶಕದ ಆರಂಭದಲ್ಲಿ, ಒಬ್ಬ ಶಸ್ತ್ರಚಿಕಿತ್ಸಕ ಇದರ ಬಗ್ಗೆ ಪ್ರಾಯೋಗಿಕ ಪರೀಕ್ಷೆಯನ್ನು ಮಾಡಿದರು.  ಶಸ್ತ್ರಚಿಕಿತ್ಸಕ ನೋವು ಕಡಿಮೆ ಮಾಡಲು ದೇಹದ ಊದಿಕೊಂಡ ಭಾಗಕ್ಕೆ ಚಿನ್ನದ ತುಂಡನ್ನು ಹಚ್ಚಿದರು. ದೇಹದಲ್ಲಿನ ನೋವು ಮತ್ತು ಊತವನ್ನು ಕಡಿಮೆ ಮಾಡಲು ಉರಿಯೂತದ ಗುಣಲಕ್ಷಣಗಳು ಉತ್ತಮವಾಗಿವೆ. ಈ ರೀತಿಯಾಗಿ, ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಚಿನ್ನದ ಜೊತೆಗೆ, ಈ ಗುಣಲಕ್ಷಣಗಳು ತಾಮ್ರ ಲೋಹದಲ್ಲಿಯೂ ಕಂಡುಬರುತ್ತವೆ.
 

36

ದೇಹದ ಮೇಲೆ ಚಿನ್ನವನ್ನು ಧರಿಸಿ ಸ್ನಾನ ಮಾಡಬೇಕು ಎನ್ನುತ್ತಾರೆ. ಹೀಗೆ ಮಾಡೊದ್ರಿಂದ ಚಿನ್ನದ ಮೇಲೆ ಬಿದ್ದ ನೀರು ನಂತರ ಮೈ ಮೇಲೆ ಬಿದ್ದರೆ, ಇದರಿಂದ ದೇಹದ ಎನರ್ಜಿ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೂ ತುಂಬಾನೆ ಉತ್ತಮ. ಹಾಗಾಗಿ ಭಾರತೀಯರು ಅನಾದಿ ಕಾಲದಿಂದಲೂ ಮೈ ಮೇಲೆ ಚಿನ್ನವನ್ನು ಹಾಕಿಯೇ ಸ್ನಾನ ಮಾಡುತ್ತಾ ಬಂದಿದ್ದಾರೆ. 
 

46

ಹಿಂದೂ ಸಂಪ್ರದಾಯಗಳಲ್ಲಿ (Hindu traditions) ಯಾವಾಗ್ಲೂ ಚಿನ್ನ ಇದ್ದೇ ಇರುತ್ತೆ. ದೇವಾಲಯಗಳಲ್ಲೂ ಸಹ ದೇವರನ್ನು ಚಿನ್ನದ ಕಿರೀಟ, ಚಿನ್ನದ ಆಭರಣಗಳಿಂದ ಅಲಂಕರಿಸುತ್ತಾರೆ. ನಿಮಗೆ ಗೊತ್ತಾ? ನೀವು ಚಿನ್ನವನ್ನು ಧರಿಸಿ ಹೋಮ, ಹವನ ಅಥವಾ ಪೂಜೆಗಳಲ್ಲಿ ಭಾಗಿಯಾದರೆ, ಇದರಿಂದ ಆ ಮಂತ್ರಗಳು, ಪಾಸಿಟಿವ್ ಎನರ್ಜಿ ಎಲ್ಲವನ್ನೂ ಚಿನ್ನವು ಆಕರ್ಷಿಸುತ್ತದೆ. ಇದು ಹೆಚ್ಚಿನ ಸಮಯ ನಿಮ್ಮ ಜೊತೆಯೇ ಇರುತ್ತದೆ. 

56

ಇದಲ್ಲದೇ ಚಿನ್ನದ ಆಭರಣಗಳನ್ನು (golden jewellery) ಧರಿಸೋದ್ರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಖ ಉತ್ಪತ್ತಿಯಾಗುತ್ತದೆ.ಇದರೊಂದಿಗೆ, ಶೀತ, ಅಸ್ತಮಾ ಲಕ್ಷಣಗಳು, ಉಸಿರಾಟದ ಕಾಯಿಲೆಗಳು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ.ಅಲ್ಲದೆ ರಕ್ತ ಸಂಚಾರವೂ ಉತ್ತಮವಾಗಿರುತ್ತದೆ. ಒಟ್ಟಲ್ಲಿ ಚಿನ್ನ ಧರಿಸೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ. 
 

66

ಚಿನ್ನ ಧರಿಸುವ ಸರಿಯಾದ ವಿಧಾನಗಳು : 
ಚಿನ್ನವನ್ನು ಧರಿಸುವುದೇ ಆದರೆ ದೇಹದ ಮೇಲಿನ ಭಾಗಗಳಿಗೆ ಮಾತ್ರ ಧರಿಸಬೇಕು. ಅಂದ್ರೆ, ಕೈ , ಕುತ್ತಿಗೆ, ಕಿವಿ ಇತ್ಯಾದಿ. ಇದರಿಂದ ಪಾಸಿಟಿವ್ ವೈಬ್ರೇಶನ್ ಹೆಚ್ಚಾಗುತ್ತೆ. ಆದರೆ ಸೊಂಟಕ್ಕಿಂತ ಕೆಳಗಿನ ಭಾಗದಲ್ಲಿ ಚಿನ್ನವನ್ನು ಧರಿಸಬಾರದು.  ಪ್ರತಿದಿನ ಚಿನ್ನ ಧರಿಸೋದರಿಂದ ದೇಹದಲ್ಲಿ ಪಾಸಿಟಿವ್ ಎನರ್ಜಿ ಯಾವಾಗ್ಲೂ ಇರುತ್ತೆ. ಹಾಗಾಗಿ ಅದನ್ನು ಲಾಕರ್ ನಲ್ಲಿ ಇಡಬೇಡಿ. 
 

Read more Photos on
click me!

Recommended Stories