ದೆವ್ವಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ಮತ್ತು ಸಿನಿಮಾಗಳ ಬಗ್ಗೆ ನೀವು ಓದಿರಬೇಕು ಅಥವಾ ಕೇಳಿರಬೇಕು, ನೋಡಿರಲೂ ಬಹುದು. ದೆವ್ವಗಳು ಮತ್ತು ಆತ್ಮಗಳ ಶಕ್ತಿಗಳು ಇನ್ನೂ ಸಂಪೂರ್ಣವಾಗಿ ಬಹಿರಂಗಗೊಂಡಿಲ್ಲ ಎಂದು ಪ್ಯಾರನಾರ್ಮಲ್ ತಜ್ಞರು ನಂಬುತ್ತಾರೆ. ಅದೇ ಸಮಯದಲ್ಲಿ, ತಾವು ದೆವ್ವಗಳನ್ನು ನೋಡಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ಜನರು ನಮ್ಮ ದೇಶದಲ್ಲಿದ್ದಾರೆ. ಪ್ಯಾರನಾರ್ಮಲ್ ತಜ್ಞರ ಪ್ರಕಾರ, ಸತ್ತವರ ದೇಹವು (after death) ಕೊನೆಗೊಂಡ ನಂತರವೂ ಆತ್ಮವು ಜೀವಂತವಾಗಿರುತ್ತದೆ. ಈ ಆತ್ಮವು ತನ್ನ ಅಸ್ತಿತ್ವವನ್ನು ವಿಚಿತ್ರ ರೀತಿಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸುತ್ತದೆ. ಇದನ್ನು ದೆವ್ವಗಳು ಎಂದು ಕರೆಯಲಾಗುತ್ತದೆ
ನಮ್ಮಲ್ಲಿ ಅನೇಕ ಜನರಿಗೆ ರಾತ್ರಿಯಲ್ಲಿ ಅಥವಾ ಕತ್ತಲೆಯಲ್ಲಿದ್ದಾಗ, ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಅನಿಸುತ್ತದೆ. ಅದೇ ಸಮಯದಲ್ಲಿ, ದೆವ್ವಗಳನ್ನು ನೋಡಿದ್ದೇವೆ ಎಂದು ಹೇಳಿಕೊಂಡವರೂ ಇದ್ದಾರೆ, ಅದರಲ್ಲೂ ದೆವ್ವವನ್ನು ನೋಡಿದವರೆಲ್ಲಾ ಅವುಗಳನ್ನು ರಾತ್ರಿಯ ಸಮಯದಲ್ಲಿ ಮಾತ್ರ ನೋಡಿದ್ದಾರೆ. ಹಾಗಿದ್ರೆ, ದೆವ್ವಗಳು (ghost in night)ರಾತ್ರಿಯ ಸಮಯದಲ್ಲಿ ಮಾತ್ರ ಏಕೆ ಕಾಣಿಸಿಕೊಳ್ಳುತ್ತವೆ ಎಂಬ ಪ್ರಶ್ನೆ ನಿಮಗೂ ಕಾಡೋದು ಸಾಮಾನ್ಯ ಅಲ್ವಾ?.
ದೆವ್ವಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ? ದೆವ್ವಗಳು ರಾತ್ರಿಯಲ್ಲಿ ಮಾತ್ರ ಏಕೆ ಬರುತ್ತವೆ? ಚಳಿಗಾಲದ ರಾತ್ರಿಗಳಲ್ಲಿ ದೆವ್ವಗಳನ್ನು ನೋಡುವಾಗ ಭಯ ಹೆಚ್ಚಾಗಿ ಚಳಿ ಮರೆತು ಹೋಗಿ ಮೈ ಬೆವರಲು ಆರಂಭವಾಗುತ್ತದೆ. ಹಾಗಿದ್ರೆ ದೆವ್ವಗಳು ರಾತ್ರಿ ಮಾತ್ರ ಯಾಕೆ ಕಾಣಿಸಿಕೊಳ್ಳುತ್ತವೆ ಎನ್ನುವ ಬಗ್ಗೆ ಪ್ಯಾರನಾರ್ಮಲ್ ತಜ್ಞರಿಂದ (paranormal experts) ತಿಳಿಯೋಣ.
ಹವಾಮಾನವು ದೆವ್ವಗಳ ಮೇಲೆ ಪರಿಣಾಮ ಬೀರುತ್ತದೆಯೇ?: ಚಳಿಗಾಲದಲ್ಲಿ ರಾತ್ರಿ ಉದ್ದವಾಗಿರುತ್ತದೆ ಮತ್ತು ಹಗಲುಗಳು ಚಿಕ್ಕದಾಗಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ಈಗ ಚಳಿಗಾಲದ ರಾತ್ರಿಯಲ್ಲಿ ಶೀತದಿಂದಾಗಿ, ಜನರು ಮನೆಗಳಿಂದ ಹೊರಬರುವುದಿಲ್ಲ. ರಸ್ತೆ ನಿರ್ಜನವಾಗಿರುತ್ತದೆ, ವಾತಾವರಣ ಶಾಂತವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನಸ್ಸು ಅನೇಕ ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತದೆ.
ದೆವ್ವಗಳು ಅಥವಾ ಶಕ್ತಿಗಳು (spirit) ಯಾವುದೇ ನಿರ್ದಿಷ್ಟ ಹವಾಮಾನದಿಂದ ಪ್ರಭಾವಿತವಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ. ಅದು ಚಳಿಗಾಲವಾಗಿರಲಿ ಅಥವಾ ಬೇಸಿಗೆಯಾಗಿರಲಿ, ಅವರ ನಡವಳಿಕೆಯ ಮಾದರಿ ಬದಲಾಗುವುದಿಲ್ಲ. ಅದರ ನಡವಳಿಕೆ ಯಾವಾಗಲೂ ಒಂದೇ ಅಗಿರುತ್ತದೆ.
ಅನೇಕ ಬಾರಿ ವ್ಯಕ್ತಿಯ ಮನಸ್ಸಿನಲ್ಲಿ ಯಾವುದೋ ಒಂದು ಸ್ಥಳದಲ್ಲಿ ನಕಾರಾತ್ಮಕವಾದ (negativity) ಏನೋ ಇದೆ ಎಂಬ ಭಾವನೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನಸ್ಸಿನಲ್ಲಿ ಅನೇಕ ರೀತಿಯ ತಳಮಳಗಳು ಸಂಭವಿಸಲು ಪ್ರಾರಂಭಿಸುತ್ತವೆ. ಅವೆಲ್ಲವೂ ಸಂಪೂರ್ಣವಾಗಿ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ನೀವು ಹೆಚ್ಚು ಹೆದರಿದಷ್ಟೂ ಏನೋ ಇದೆ ಎಂಬ ಭಾವನೆ ಹೆಚ್ಚಾಗಿ ಕಾಡುತ್ತದೆ.
ರಾತ್ರಿಯಲ್ಲಿ ದೆವ್ವಗಳು ಏಕೆ ಕಾಣಿಸಿಕೊಳ್ಳುತ್ತವೆ?: ರಾತ್ರಿಯಲ್ಲಿ ದೆವ್ವಗಳು ಕಂಡುಬರುತ್ತವೆ ಏಕೆಂದರೆ ಆ ಸಮಯದಲ್ಲಿ ಸಾಕಷ್ಟು ಶಾಂತಿ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ರಾತ್ರಿಯಲ್ಲಿ ವಿದ್ಯುನ್ಮಾನ ಅಡಚಣೆ ತುಂಬಾ ಕಡಿಮೆ. ಹಗಲಿನಲ್ಲಿ ಅತಿಯಾದ ಎಲೆಕ್ಟ್ರಾನಿಕ್ ಅಡಚಣೆಯು (electronic hurdles) ದೆವ್ವಗಳ ಶಕ್ತಿಯನ್ನು ತೊಂದರೆಗೊಳಿಸುತ್ತದೆ. ರಾತ್ರಿಯಲ್ಲಿ ದೆವ್ವಗಳು ಸಕ್ರಿಯವಾಗಿರಲು ಇದು ಒಂದು ಪ್ರಮುಖ ಕಾರಣವಾಗಿದೆ