Male Nipples : ಪುರುಷರು ನಿಪ್ಪಲ್ಸ್ ಹೊಂದಿರ್ತಾರೆ. ಆದ್ರೆ ಮಕ್ಕಳಿಗೆ ಹಾಲುಣಿಸಲು ಸಾಧ್ಯವಿಲ್ಲ. ಏನೂ ಕೆಲಸಕ್ಕೆ ಬಾರದ ಈ ನಿಪ್ಪಲ್ಸ್ ಪುರುಷರಿಗೆ ಏಕಿರುತ್ತದೆ? ಇದ್ರ ಬೆಳವಣಿಗೆ ಅಗತ್ಯವಿದ್ಯಾ?
ಮನುಷ್ಯನ ದೇಹ ಅದ್ಭುತವಾಗಿದೆ. ಇದ್ರಲ್ಲಿ ಕೆಲವೊಂದು ವಿಷ್ಯಗಳನ್ನು ಅರ್ಥ ಮಾಡ್ಕೊಳ್ಳೋದು ಬಹಳ ಕಷ್ಟ. ಪುರುಷರು ಮಗುವಿಗೆ ಹಾಲುಣಿಸೋದಿಲ್ಲವಾದ್ರೂ ಅವರಿಗೆ ಏಕೆ ನಿಪ್ಪಲ್ಸ್ ಇದೆ ಎಂಬ ಪ್ರಶ್ನೆ ಆಗಾಗ ಮನಸ್ಸಿಗೆ ಬರುತ್ತದೆ. ಇದು ಬೆಳವಣಿಕೆ ದೋಷವಾ ಅಥವಾ ಇದರ ಹಿಂದೆ ಆಳವಾದ ಜೈವಿಕ ಕಾರಣ ಇದ್ಯಾ? ಇದಕ್ಕೆ ಉತ್ತರ ಮನುಷ್ಯನ ಬೆಳವಣಿಗೆಯ ಆರಂಭಿಕ ಹಂತದಲ್ಲಿದೆ. ಗಂಡು ಮತ್ತು ಹೆಣ್ಣು ಭ್ರೂಣದ ಆರಂಭಿಕ ಬೆಳವಣಿಗೆ ಒಂದೇ ಆಗಿರೋದು ಇದಕ್ಕೆ ಮುಖ್ಯ ಕಾರಣ. ಇದೇ ಸಮಯದಲ್ಲಿ ನಿಪ್ಪಲ್ಸ್ ಸೇರಿದಂತೆ ದೇಹದ ಕೆಲ ಭಾಗಗಳು ಬೆಳೆಯುತ್ತವೆ. ನಿಪ್ಪಲ್ಸ್ ಬೆಳವಣಿಗೆ ಯಾವಾಗ, ಏಕೆ ಎಂಬೆಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
25
ಪುರುಷರಿಗೆ ನಿಪ್ಪಲ್ಸ್ ಬೆಳವಣಿಗೆ
ನಿಪ್ಪಲ್ಸ್ ಬೆಳವಣಿಗೆ ಗರ್ಭಧಾರಣೆಯ ಮೊದಲ ದಿನದಿಂದಲೇ ಪ್ರಾರಂಭವಾಗುತ್ತದೆ. ಆರಂಭಿಕ ಹಂತದಲ್ಲಿ, ಎಲ್ಲಾ ಭ್ರೂಣಗಳು ಒಂದೇ ಆನುವಂಶಿಕ ನೀಲನಕ್ಷೆಯನ್ನು ಅನುಸರಿಸುತ್ತವೆ. ಗರ್ಭ ಧರಿಸಿದ ಸುಮಾರು ಆರರಿಂದ ಏಳು ವಾರಗಳ ನಂತ್ರ, Y ಕ್ರೋಮೋಸೋಮ್ ಸಕ್ರಿಯಗೊಳ್ಳುತ್ತದೆ. ಆಗ ಭ್ರೂಣ ಪುರುಷರ ದೇಹದ ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ. ವೃಷಣಗಳು ಮೊದಲು ಅಭಿವೃದ್ಧಿ ಹೊಂದುತ್ತವೆ. ಈ ಅಂಗವು ನಂತರ ವೀರ್ಯವನ್ನು ಉತ್ಪಾದಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ಇದರೊಂದಿಗೆ, ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಉತ್ಪತ್ತಿಯಾಗಲು ಪ್ರಾರಂಭವಾಗುತ್ತದೆ. ಒಂಬತ್ತನೇ ವಾರದಿಂದ ಈ ಹಾರ್ಮೋನ್ ಭ್ರೂಣದ ಜನನಾಂಗಗಳು ಮತ್ತು ಮೆದುಳಿನ ಬೆಳವಣಿಗೆಯನ್ನು ಬದಲಾಯಿಸುತ್ತದೆ. ಆದ್ರೆ ಈ Y ಕ್ರೋಮೋಸೋಮ್ ಸಕ್ರಿಯವಾಗುವ ಮೊದಲು ನಿಪ್ಪಲ್ಸ್ ಬೆಳೆಯುತ್ತವೆ ಎಂಬುದನ್ನು ನೆನಪಿಡಿ.
35
ವೆಸ್ಟಿಜಿಯಲ್ ಅಂಗ
ವೈಜ್ಞಾನಿಕ ಪರಿಭಾಷೆಯಲ್ಲಿ, ಪುರುಷರ ನಿಪ್ಪಲ್ಸ್ ಗಳನ್ನು ವೆಸ್ಟಿಜಿಯಲ್ ಅಂಗ ಎಂದು ಕರೆಯುತ್ತಾರೆ. ಅಂದ್ರೆ ದೇಹದಲ್ಲಿ ಯಾವುದೇ ಗಮನಾರ್ಹ ಬಳಕೆ ಹೊಂದಿರದ ಅಂಗ. ಮಹಿಳೆಯಂತೆ ಪುರುಷರಿಗೆ ಹಾಲುಣಿಸಲು ಸಾಧ್ಯವಿಲ್ಲ. ಅವರು ಆ ಹಾರ್ಮೋನ್ ಬದಲಾವಣೆಗೆ ಒಳಗಾಗುವುದಿಲ್ಲ. ಪುರಷರಿಗೆ ಬ್ರೆಸ್ಟ್ ಇದ್ರೂ ಅದು ಬೆಳೆಯೋದಿಲ್ಲ. ಹಾಗಾಗಿ ನಿಪ್ಪಲ್ಸ್ ಗೆ ಕೆಲಸವಿಲ್ಲ. ಇಯಾನ್ ಟ್ಯಾಟರ್ಸಾಲ್ ಪ್ರಕಾರ, ಪುರುಷರ ನಿಪ್ಪಲ್ಸ್ ಯಾವುದೇ ಅಗತ್ಯ ಚಯಾಪಚಯ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಒಂದ್ವೇಳೆ ಪುರುಷರಿಗೆ ನಿಪ್ಪಲ್ಸ್ ಇಲ್ದಿದ್ರೂ ದೇಹದಲ್ಲಿ ಯಾವುದೇ ವ್ಯತ್ಯಾಸವಾಗೋದಿಲ್ಲ.
ಪುರುಷರು ದೊಡ್ಡ ನಿಪ್ಪಲ್ಸ್ ಹೊಂದಿದ್ರೆ ಅದ್ರ ಬಗ್ಗೆ ಟೆನ್ಷನ್ ಮಾಡ್ಕೊಳ್ಳುವ ಅಗತ್ಯವಿಲ್ಲ. ಅದು ಯಾವುದೇ ರೋಗದ ಲಕ್ಷಣವಲ್ಲ. ದೇಹ ರಚನೆ ವೇಳೆ ನಡೆಯುವ ಜೈವಿಕ ಪ್ರಕ್ರಿಯೆ. ಇದು ಸಹಜ ಮತ್ತು ನೈಸರ್ಗಿಕ. ಈ ಬಗ್ಗೆ ಪುರುಷರು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದ್ರೆ ನಿಪ್ಪಲ್ಸ್ ನಲ್ಲಿ ಆಗುವ ಕೆಲ ಬದಲಾವಣೆ ಸ್ತನ ಕ್ಯಾನ್ಸರ್ ಲಕ್ಷಣವನ್ನು ಸೂಚಿಸುತ್ತದೆ. ಇದ್ರ ಬಗ್ಗೆ ಪುರುಷರು ಜಾಗರೂಕರಾಗಿರಬೇಕು. ನಿಪ್ಪಲ್ಸ್ ನಿಂದ ಬಿಳಿ ದ್ರುವ ಬರ್ತಿದ್ದರೆ, ಅದು ಒಳಮುಖವಾಗಿದ್ದರೆ ಡಾಕ್ಟರ್ ಭೇಟಿ ಅಗತ್ಯ.
55
ಹೆಚ್ಚು ಪ್ರಯೋಜನ ಇಲ್ಲದ ದೇಹದ ಇತರ ಅಂಗ
ಪುರುಷರ ನಿಪ್ಪಲ್ಸ್ ಮಾತ್ರವಲ್ಲ ದೇಹದಲ್ಲಿ ಇನ್ನೂ ಅನೇಕ ಅಂಗಗಳಿವೆ. ಅವು ಹೆಚ್ಚಿನ ಯಾವುದೇ ಕೆಲ್ಸವನ್ನು ಮಾಡೋದಿಲ್ಲ. ಅದ್ರಲ್ಲಿ ಅಪೆಂಡಿಕ್ಸ್, ಬುದ್ಧಿವಂತಿಕೆಯ ಹಲ್ಲುಗಳು ಸೇರಿವೆ. ಈ ಅಂಗಗಳು ವಿಕಾಸದ ಪ್ರಕ್ರಿಯೆಯಲ್ಲಿ ಉಳಿದಿವೆ, ಆದರೆ ಕಾಲಾನಂತರದಲ್ಲಿ ಅವುಗಳ ಪ್ರಾಮುಖ್ಯತೆ ಕಡಿಮೆಯಾಗಿದೆ. ಆರಂಭದಲ್ಲಿ ಅಪೆಂಡಿಕ್ಸ್ ಅನ್ನು ಹುಲ್ಲುಗಳನ್ನು ಜೀರ್ಣಿಸಿಕೊಳ್ಳಲು ಬಳಸಲಾಗ್ತಿತ್ತು. ಇನ್ನು ಬುದ್ಧಿವಂತಿಕೆ ಹಲ್ಲನ್ನು ಪ್ರಾಚೀನ ಕಾಲದ ಜನರು ಗಟ್ಟಿಯಾದ ಮಾಂಸ ಜಗಿಯಲು ಬಳಸುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.