ಮೊಟ್ಟೆಗಳಲ್ಲಿ ಪ್ರೋಟೀನ್ ಹೇರಳವಾಗಿದೆ. ಇದು ಪ್ರೋಟೀನ್‌ನ ಮೂಲ. ಇದನ್ನು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ ಎಲ್ಲಾ ಅಗತ್ಯ ಪೋಷಕಾಂಶಗಳಿದ್ದು, ನೀವು ತೂಕ ಇಳಿಸಿಕೊಳ್ಳಲು ಅಥವಾ ಮಸಲ್ಸ್ ಪಡೆಯಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಮೊಟ್ಟೆಗೆ ಆದ್ಯತೆ ಇರಲಿ
undefined
ಮೊಟ್ಟೆಯ ಬಿಳಿ ಭಾಗ ತೂಕ ಇಳಿಸಲು ಹೇಗೆ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೂ ನೀವು ಹಳದಿ ಭಾಗವನ್ನು ಸಂಪೂರ್ಣವಾಗಿ ತ್ಯಜಿಸುತ್ತಿದ್ದೀರಾ?
undefined
ಆರೋಗ್ಯಕರ ಬ್ರೇಕ್‌ಫಾಸ್ಟ್ ಮುಖ್ಯ ಭಾಗ ಮೊಟ್ಟೆಗಳು. ತೂಕ ಇಳಿಸಲು ನಮ್ಮ ಬೆಳಗಿನ ಆಹಾರ ಕ್ರಮದ ಮಹತ್ವ ಎಲ್ಲರಿಗೂ ಗೊತ್ತು
undefined
ನೀವು ಮೊಟ್ಟೆಗಳನ್ನು ಪೂರ್ತಿಯಾಗಿ ಅಥವಾ ಅರ್ಧ ಬೇಯಿಸುವುದನ್ನು ಇಷ್ಟಪಡುತ್ತೀರಾ..? ಅಧಿಕ ಕೊಲೆಸ್ಟ್ರಾಲ್ ಇರುವ ಕಾರಣ, ಜನರು ಮೊಟ್ಟೆಯ ಹಳದಿ ಲೋಳೆಯನ್ನು ಅನಾರೋಗ್ಯಕರವೆಂದು ಪರಿಗಣಿಸಿ ತಿರಸ್ಕರಿಸುತ್ತಾರೆ ಮತ್ತು ಬಿಳಿ ಭಾಗವನ್ನು ಮಾತ್ರ ತಿನ್ನುತ್ತಾರೆ.
undefined
ವಾಸ್ತವವಾಗಿ, ಟೆಸ್ಟೋಸ್ಟೆರಾನ್ ತಯಾರಿಸಲು ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದೆ, ಇದು ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
undefined
ಇಡೀ ಮೊಟ್ಟೆಯು ವಿವಿಧ ಪೋಷಕಾಂಶಗಳಿಂದ ತುಂಬಿದೆ.ಬಿಳಿ ಭಾಗದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಉಳಿದ ಪೋಷಕಾಂಶಗಳು ಹಳದಿ ಲೋಳೆಯಲ್ಲಿ ಇರುತ್ತವೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಕಬ್ಬಿಣ, ವಿಟಮಿನ್ ಬಿ 2, ಬಿ 12 ಮತ್ತು ಡಿ ಸಮೃದ್ಧವಾಗಿದೆ.ನೀವು ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಸೇವಿಸಿದರೆ, ನೀವು ಇತರ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತೀರಿ.
undefined
ಕನೆಕ್ಟಿಕಟ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನವು ಮೊಟ್ಟೆಯ ಹಳದಿಗಳಲ್ಲಿರುವ ಕೊಬ್ಬು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನು ಸಾಬೀತು ಮಾಡಿದೆ
undefined
ನೀವು ತೂಕ ಇಳಿಸಿಕೊಳ್ಳಲು ಬಯಸಿದ್ದರೂ ಸಹ, ನಿಮ್ಮ ಪೌಷ್ಟಿಕತಜ್ಞರು ನಿಮಗೆ ನಿರ್ದಿಷ್ಟವಾಗಿ ಸಲಹೆ ನೀಡದ ಹೊರತು ಹಳದಿ ಲೋಳೆಯನ್ನು ಎಸೆಯಬೇಡಿ
undefined