ಎಳನೀರು ಕುಡಿದ್ರೆ ಆರೋಗ್ಯಕ್ಕೆ ಒಳ್ಳೇದಂತ ಗೊತ್ತು. ಆದ್ರೆ, ಪೌಷ್ಟಿಕಾಂಶಗಳ ಭಂಡಾರವಾದ ಎಳನೀರು ಎಲ್ಲರಿಗೂ ಒಳ್ಳೆಯದಲ್ಲ ಅಂತ ಗೊತ್ತಾ? ಈ ಬಗ್ಗೆ ತಿಳ್ಕೊಳ್ಳೋಣ.
ಎಳನೀರಿನಲ್ಲಿ ಅಗತ್ಯ ಪೋಷಕಾಂಶಗಳು, ಪೊಟ್ಯಾಶಿಯಂ, ಸೋಡಿಯಂ, ಮೆಗ್ನೀಷಿಯಂ ತುಂಬ ಇದೆ. ಹಂಗಾಗಿ ಇದು ಆರೋಗ್ಯಕರ ಪಾನೀಯ. ಇದು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಹಲವು ಬಿ ವಿಟಮಿನ್‌ಗಳೂ ಇದರಲ್ಲಿವೆ. ಇತ್ತೀಚೆಗೆ, ಎಳನೀರು ತನ್ನ ನೈಸರ್ಗಿಕ ಮತ್ತು ಹೈಡ್ರೇಟಿಂಗ್ ಗುಣಗಳಿಂದಾಗಿ ಜನಪ್ರಿಯವಾಗಿದೆ. ಆದರೆ, ಅದು ಎಲ್ಲರಿಗೂ ಏಕೆ ಸೂಕ್ತವಲ್ಲ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.