ಮೀನಿನ ಜೊತೆ ಈ ಆಹಾರ ಸೇವಿಸಿದ್ರೆ ಚರ್ಮದ ಸಮಸ್ಯೆ ಗ್ಯಾರಂಟಿ!

Published : Jan 12, 2025, 11:43 AM ISTUpdated : Jan 12, 2025, 01:33 PM IST

ಹಾಲು ಮತ್ತು ಡೈರಿ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಆದರೆ ಎಲ್ಲಾ ಆಹಾರಗಳ ಜೊತೆ ಇದನ್ನು ಸೇವಿಸೋದಕ್ಕೆ ಸಾಧ್ಯ ಇಲ್ಲ. ಮೀನಿನ ಜೊತೆಯಂತೂ ಹಾಲು ತಿನ್ನಲೇ ಬಾರದು.   

PREV
17
ಮೀನಿನ ಜೊತೆ ಈ ಆಹಾರ ಸೇವಿಸಿದ್ರೆ ಚರ್ಮದ ಸಮಸ್ಯೆ ಗ್ಯಾರಂಟಿ!

ನಮ್ಮ ದೇಶದಲ್ಲಿ ಜನರು ಹೆಚ್ಚಾಗಿ ಸೇವಿಸುವಂತಹ ಆಹಾರ ಅಂದ್ರೆ ಅದು ಹಾಲು ಮತ್ತು ಡೈರಿ ಉತ್ಪನ್ನಗಳು (Milk and Dairy Products). ಹಾಲು ಮತ್ತು ಡೈರಿ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಇದು ಪ್ರತಿ ಆಹಾರ ಕಾಂಬಿನೇಶನ್ ಜೊತೆ ಪ್ರಯೋಜನಕಾರಿಯಾಗಿದೆ ಎಂದು ಹೇಳೋದಕ್ಕೆ ಸಾಧ್ಯ ಇಲ್ಲ. 
 

27

ವಿಶೇಷವಾಗಿ ಹಾಲು ಮತ್ತು ಮೀನಿನ (milk and fish) ಕಾಂಬಿನೇಶನ್ ಸೇವನೆ ಮಾಡೋದು ಆರೋಗ್ಯಕ್ಕೆ ತುಂಬಾನೆ ಮಾರಕವಾಗಿದೆ. ಕೆಲವರು ಮೀನು ತಿಂದ ನಂತರ ಹಾಲು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಚರ್ಮದ ಕಾಯಿಲೆಯ ಸಮಸ್ಯೆಗಳು ಉಂಟಾಗಬಹುದು. ಹಾಲಿನ ಜೊತೆ ಮೀನು ಸೇವಿಸೋದರಿಂದ ಏನಾಗುತ್ತದೆ ನೋಡೋಣ. 
 

37

ಕೆಲವರು ಮೀನು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುತ್ತಾರೆ. ಆದರೆ ಹೀಗೆ ಮಾಡೋದರಿಂದ ಕರುಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ಆಯುರ್ವೇದದ (Ayurveda) ಪ್ರಕಾರ, ಮೀನಿನ ಪರಿಣಾಮವು ಬಿಸಿಯಾಗಿರುತ್ತದೆ ಮತ್ತು ಹಾಲು ಮತ್ತು ಮೊಸರಿನ ಪರಿಣಾಮವು ತಂಪಾಗಿರುತ್ತದೆ.

47

ಬಿಸಿ ಮತ್ತು ಶೀತದ ಕಾಂಬಿನೇಶನನ್ನು ವಿರುದ್ಧ ಆಹಾರ ಎಂದು ಕರೆಯಲಾಗುತ್ತದೆ,  ಹಾಗಾಗಿ ಮೀನು ಮತ್ತು ಹಾಲು, ಮೊಸಲು ಜೊತೆಯಾಗಿ ಸೇವಿಸಬಾರದು. ಇದು ಜೀರ್ಣಕಾರಿ ಸಮಸ್ಯೆಗಳು, ಅಲರ್ಜಿಗಳು ಮತ್ತು ಚರ್ಮದ ಕಾಯಿಲೆಗಳನ್ನು ಉಂಟು ಮಾಡಬಹುದು. 
 

57

ಮೀನು ಮತ್ತು ಹಾಲಿನ ಸಂಯೋಜನೆಯು ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ, ಇದು ವಿಟಿಲಿಗೊ, ತುರಿಕೆ, ಅರ್ಟಿಕೇರಿಯಾ ಅಥವಾ ಇತರ ಚರ್ಮದ ಕಾಯಿಲೆಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತೆ. ಹಾಗಾಗಿ ಇವುಗಳನ್ನು ಜೊತೆಯಾಗಿ ತಿನ್ನುವ ಸಾಹಸ ಬೇಡವೇ ಬೇಡ. 

67

ಮೀನು ಮತ್ತು ಹಾಲು ಎರಡನ್ನೂ ಹೆವಿ ಆಹಾರವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ (digestion system) ಮೇಲೆ ಒತ್ತಡ ಹೆಚ್ಚಾಗುತ್ತದೆ, ಇದು ಅಜೀರ್ಣ, ಆಮ್ಲೀಯತೆ, ಗ್ಯಾಸ್ ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. 

77

ಮೊಸರು ಶೀತ ಪರಿಣಾಮವನ್ನು ಹೊಂದಿದೆ, ಇದು ಮೀನಿನೊಂದಿಗೆ ತಿನ್ನುವಾಗ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ . ಹಾಗಾಗಿ ಇದು ಚರ್ಮದ ಮೇಲೆ ತುರಿಕೆ, ಗುಳ್ಳೆಗಳು, ಕಲೆಗಳು ಅಥವಾ ಎಸ್ಜಿಮಾದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. 
 

click me!

Recommended Stories