ತುಪ್ಪವನ್ನು ನಿಯಮಿತವಾಗಿ ಸೇವನೆ ಮಾಡೋದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ದೇಹಕ್ಕೆ ಬೇಕಾಗಿರುವ ಅಗತ್ಯವಿರುವ ಕೊಬ್ಬನ್ನು ನೀಡುವಲ್ಲಿ ತುಪ್ಪ ಸಹಕಾರಿಯಾಗಿದೆ. ಮಧುಮೇಹಿಗಳಿಗೆ ಸಕ್ಕರ ಪ್ರಮಾಣ ನಿಯಂತ್ರಣದಲ್ಲಿರಿಸಿಕೊಳ್ಳಲು ತುಪ್ಪ ಕೆಲಸ ಮಾಡುತ್ತದೆ.
ಶುಗರ್ ಲೆವಲ್ ಏರಿಕೆಯಾಗದಂತೆ ಕಂಟ್ರೋಲ್ ಮಾಡುವ ಸಾಮಾರ್ಥ್ಯವನ್ನು ತುಪ್ಪ ಹೊಂದಿದೆ. ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹೊಂದಿರುವ ಈ ತುಪ್ಪವನ್ನು ಕೆಲವರು ತಿನ್ನಬಾರದು. ತುಪ್ಪ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಕ್ಕೆ ಒಂದು ಚಮಚದಷ್ಟು ತುಪ್ಪವನ್ನಾದ್ರೂ ತಿನ್ನಬೇಕು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಾರೆ. ಕೆಲವು ಆರೋಗ್ಯ ಸಮಸ್ಯೆ ಇರೋರು ತುಪ್ಪ ಸೇವನೆಯಿಂದ ದೂರವೇ ಇರಬೇಕು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.
ನಿಯಮಿತವಾಗಿ ತುಪ್ಪ ಸೇವನೆ ಮಾಡೋದರಿಂದ ಯಕೃತ್ ಸಮಸ್ಯೆಗಳು ಬರಲ್ಲ. ಆದ್ರೆ ನೀವು ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ರೆ ತುಪ್ಪ ಸೇವನೆ ಮಾಡಬಾರದು. ತುಪ್ಪ ಸೇವನೆಯಿಂದ ಜಾಂಡೀಸ್‌ಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಗರ್ಭಿಣಿಯರಿಗೆ ತುಪ್ಪ ಸೇವನೆ ಮಾಡುವಂತೆ ಎಲ್ಲರೂ ಸಲಹೆ ನೀಡುತ್ತಾರೆ. ಒಂದು ವೇಳೆ ಗರ್ಭಿಣಿ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ತುಪ್ಪ ತಿನ್ನಬಾರದು. ಈ ಸಮಸ್ಯೆಯಿದ್ದಾಗ ತುಪ್ಪ ತಿಂದ್ರೆ ಮಲಬದ್ಧತೆ ಸೇರಿದಂತೆ ಅಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತವೆ.
ಹೃದಯ ಸಂಬಂಧಿ ಸಮಸ್ಯೆ ಇರೋರು ತುಪ್ಪದಿಂದಲೇ ದೂರವಿರಬೇಕು. ಈ ಸಮಸ್ಯೆಯಿಂದ ಬಳಲುವ ಜನರಲ್ಲಿ ಅತ್ಯಧಿಕ ಕೊಬ್ಬಿನಾಂಶ ಶೇಖರಣೆ ಆಗಿರುತ್ತದೆ. ಅದಾಗಿಯೂ ತುಪ್ಪ ತಿಂದ್ರೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.
ತೂಕ ಇಳಿಸಲು ಬಯಸೋರು ಸಹ ತುಪ್ಪ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ತಿಂದ್ರೂ ಅದು ತುಂಬಾ ಇತಿಮಿತಿಯಲ್ಲಿರಬೇಕು. ಇಲ್ಲವಾದ್ರೆ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ.
ಕೆಲವರಿಗೆ ಮೊಡವೆ ಸಮಸ್ಯೆ ಇರುತ್ತದೆ. ಏನೇ ಮಾಡಿದರೂ ಮೊಡವೆಗಳು ಕಡಿಮೆ ಆಗುತ್ತಿರಲ್ಲ. ಇಂತಹ ಸಂದರ್ಭದಲ್ಲಿಯೂ ತುಪ್ಪ ಸೇವನೆ ಮಾಡಿದರೆ ಮೊಡವೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಡವೆ ಸಮಸ್ಯೆ ಇರೋರು ಸಹ ತುಪ್ಪವನ್ನು ಸೇವನೆ ಮಾಡಬಾರದು