ರಾತ್ರಿ ಮಲಗುವ ಮುನ್ನ ಎರಡು ಆಹಾರದ ಸಂಯೋಜನೆ ತಿಂದ್ರೆ ಪುರುಷರ ಆರೋಗ್ಯದಲ್ಲಾಗುತ್ತೆ ಚಮತ್ಕಾರ!

Published : Aug 10, 2024, 06:56 PM IST

ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ಕಾರಣ ಯಾರ ಬಳಿಯೂ ಸಮಯ ಇಲ್ಲ. ಅದರಲ್ಲಿರುವ ದುಡಿಯುವ ಪುರುಷರು ಇಂದು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.

PREV
17
ರಾತ್ರಿ ಮಲಗುವ ಮುನ್ನ ಎರಡು ಆಹಾರದ ಸಂಯೋಜನೆ ತಿಂದ್ರೆ ಪುರುಷರ ಆರೋಗ್ಯದಲ್ಲಾಗುತ್ತೆ ಚಮತ್ಕಾರ!

ಆರೋಗ್ಯ ತಜ್ಞರ ಪ್ರಕಾರ, ಪುರುಷರು ಕೆಲ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಹಜವಾಗಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲದೇ ಈ ಅಭ್ಯಾಸಗಳಿಂದ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬರಲ್ಲ. ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯ ಚೆನ್ನಾಗಿರುತ್ತದೆ.

27

ರಾತ್ರಿ ಮಲಗುವ ಮುನ್ನ ಹಾಲು ಮತ್ತು ಬಾಳೆಹಣ್ಣು ತಿನ್ನೋದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಹಾಲಿನಲ್ಲಿ ಟಮಿನ್ ಎ, ಡಿ, ಪ್ರೊಟೀನ್, ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯ ಅಂಶಗಳಿದ್ರೆ, ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ, ಸಿ,ಕಬ್ಬಿಣ, ಮೆಗ್ನೀಸಿಯಮ್,  ಪೊಟ್ಯಾಸಿಯಮ್, ನಿಯಾಸಿನ್, ಫೋಲಿಕ್ ಆಮ್ಲ, ಕ್ಯಾಲ್ಸಿಯಂನಂತರ ಅಂಶಗಳಿರುತ್ತವೆ. ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

37

ಹಾಲು ಮತ್ತು ಬಾಳೆಹಣ್ಣು ಸೇವಿಸೋದರಿಂದ ಪುರುಷರ ಆರೋಗ್ಯದಲ್ಲಿ ಹಲವು ಧನಾತ್ಮಕ ಬದಲಾವಣೆಗಳು ಆಗುತ್ತವೆ. ಈ ಎರಡನ್ನು ಜೊತೆಯಾಗಿ ಸೇವನೆ ಪುರುಷರ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಆಹಾರ ತಜ್ಞೆ ಪ್ರೀತಿ ಪಾಂಡೆ ಹೇಳುತ್ತಾರೆ.

47

ಹಾಲು ಮತ್ತು ಬಾಳೆಹಣ್ಣ ಜೊತೆಯಾಗಿ ತಿನ್ನುವದರಿಂದ ಪುರುಷರಲ್ಲಿ ದೈಹಿಕ ದೌರ್ಬಲ್ಯಗಳು ನಿವಾರಣೆಯಾಗುತ್ತವೆ. ಪದೇ ಪದೇ ದಣಿವು ಉಂಟಾಗುತ್ತಿದ್ರೆ ಹಾಲಿನೊಂದಿಗೆ ಬಾಳೆಹಣ್ಣು ಸೇವಿಸಬೇಕು. ಈ ಸಂಯೋಜನೆಯ ಆಹಾರ ದೇಹಕ್ಕೆ ಕ್ಷಿಪ್ರವಾಗಿ ಶಕ್ತಿಯನ್ನು ಒದಗಿಸುತ್ತದೆ.

57

ಒತ್ತಡಕ್ಕೆ ಒಳಗಾಗಿರುವ ಪುರುಷರಿಂದ ಬಾಳೆಹಣ್ಣು ಮತ್ತು ಹಾಲು ದಿವ್ಯ‍ಷೌಧ ಅಂತಾನೇ ಹೇಳಬಹುದು. ಬಿಡುವಿಲ್ಲದ ಜೀವನಶೈಲಿ ನಿಮ್ಮದಾಗಿದ್ದರೆ ಇದು ಒಳ್ಳೆಯ ಆಹಾರವಾಗಿದೆ. ಪ್ರತಿದಿನ ಮಲಗುವ ಮುನ್ನ ಬಾಳೆಹಣ್ಣು-ಹಾಲು ಸೇವನೆ ಮಾಡೋದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗಿ, ಗುಣಮಟ್ಟದ ನಿದ್ದೆ ಮಾಡಬಹುದು.

67

ನೀವು ತುಂಬಾ ತೆಳ್ಳಗಿದ್ರೆ ತೂಕ ಹೆಚ್ಚಳ ಮಾಡಲು ಬಾಳೆಹಣ್ಣು-ಹಾಲು ಸಹಾಯ ಮಾಡುತ್ತದೆ. ತೀವ್ರ ತೂಕನಷ್ಟಕ್ಕೆ ಒಳಗಾಗುತ್ತಿದ್ದರೆ ಈ ಎರಡರ ಜೊತೆ ಜೇನುತುಪ್ಪ ಮತ್ತು ಒಣ ಹಣ್ಣುಗಳನ್ನು ಸೇರಿಸಿಯೂ ಸೇವಿಸಬಹುದು.

77

ಬಾಳೆಹಣ್ಣು ಮತ್ತು ಹಾಲಿನಲ್ಲಿ ವಿಟಮಿನ್ ಮತ್ತು ಫೈಬರ್ ಅಂಶಗಳು ಹೇರಳವಾಗಿವೆ. ಹಾಗಾಗಿ ಈ ಸಂಯೋಜನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಗ್ಯಾಸ್, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಸಹ ಬಾಳೆಹಣ್ಣ- ಹಾಲು ನಿವಾರಿಸುತ್ತದೆ.

Read more Photos on
click me!

Recommended Stories