Newborn Screening Test : ಜನನದ ನಂತರ ತಕ್ಷಣ ಮಗುವಿಗೆ ಈ ಟೆಸ್ಟ್ ಮಾಡಿಸಿ

First Published | Jan 30, 2023, 5:52 PM IST

ಮಗು ಹುಟ್ಟಿದಾಗಲೇ, ಅಥವಾ ಕೆಲವು ಸಮಯದ ನಂತರ ಅರೋಗ್ಯ ತೊಂದರೆಗಳಿಗೆ ಒಳಗಾಗಬಹುದು. ಇದರಿಂದಾಗಿ ಮಗು ಜೀವನುದ್ದಕ್ಕೂ ಸಮಸ್ಯೆ ಅನುಭವಿಸಬೇಕಾಗಬಹುದು. ಹಾಗಾಗಿ ಜನನದ ನಂತರ, ಮಗುವಿನ ಆರೋಗ್ಯವನ್ನು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತೆ, ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ನವಜಾತ ಶಿಶುವಿನ(New born baby) ಆರೋಗ್ಯವನ್ನು ಜನನದ ತಕ್ಷಣ ಪರೀಕ್ಷಿಸಲು ರಕ್ತ ಪರೀಕ್ಷೆ ಸೇರಿ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತೆ. ಮಗು ಆರೋಗ್ಯಕರವಾಗಿ ಕಾಣುತ್ತಿದ್ದರೂ, ನ್ಯೂ ಬಾರ್ನ ಸ್ಕ್ರೀನಿಂಗ್ ಬ್ಲಡ್ ಟೆಸ್ಟ್ ಮಗುವಿಗೆ ಯಾವುದೇ ಅಪರೂಪದ ಆನುವಂಶಿಕ, ಹಾರ್ಮೋನ್ ಅಥವಾ ಚಯಾಪಚಯ ಅಸ್ವಸ್ಥತೆ ಇಲ್ಲ ಎಂದು ತೋರಿಸುತ್ತೆ.  ಈ ಅಸ್ವಸ್ಥತೆಗಳನ್ನು ಶೀಘ್ರದಲ್ಲೇ ಕಂಡುಹಿಡಿಯದಿದ್ದರೆ, ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಅಥವಾ ಸಾಯಬಹುದು. 

ಮಗುವಿಗೆ ಬಾಲ್ಯದಲ್ಲಿ ಕಂಡು ಬರುವ ಅಸ್ವಸ್ಥತೆಗಳಲ್ಲಿ ಹೆಚ್ಚಿನವು ಆನುವಂಶಿಕವಾಗಿವೆ ಮತ್ತು ಮಗುವಿಗೆ ತನ್ನ ಹೆತ್ತವರಿಂದ(Parents) ಇದು ಬರುತ್ತೆ. ಇದನ್ನು ಪತ್ತೆಹಚ್ಚಲು, ಫಾಲೋ ಅಪ್ ಟೆಸ್ಟ್ ಸೇರಿ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತೆ. ಅಂತಹ ಪರೀಕ್ಷೆಗಳು ಯಾವುವು? ಅವುಗಳನ್ನು ಯಾವಾಗ ಮಾಡಬೇಕು? ಅನ್ನೋದನ್ನು ನೋಡೋಣ. 

Tap to resize

ಪರೀಕ್ಷೆಯನ್ನು ಯಾವಾಗ ಮಾಡಬೇಕು?

ಹೆರಿಗೆಯ 24 ರಿಂದ 48 ಗಂಟೆಗಳ ನಂತರ ಮತ್ತು ಐದನೇ ದಿನಕ್ಕೆ ಮೊದಲು ಮಗುವಿನ ರಕ್ತದ ಮಾದರಿಯನ್ನು ತೆಗೆದುಕೊಳ್ಳುವುದು ಅವಶ್ಯಕ. ಮಗು ಮನೆಗೆ ಹೋಗುವ ಮೊದಲು ಈ ಪರೀಕ್ಷೆಗಳನ್ನು ಮಾಡಲಾಗುತ್ತೆ. ಜನನದ ಮೊದಲ 24 ಗಂಟೆಗಳ ಒಳಗೆ ಪರೀಕ್ಷೆಯನ್ನು ಮಾಡಿದರೆ, ಅದರ ಫಾಲೋ ಅಪ್ ಟೆಸ್ಟ್ (Followup test) ಐದು ದಿನಗಳಲ್ಲಿ ಮಾಡಲಾಗುತ್ತೆ.
 

 ನ್ಯೂ ಬಾರ್ನ ಸ್ಕ್ರೀನಿಂಗ್ ಪರೀಕ್ಷೆಗಳಿಂದ ಪತ್ತೆಯಾದ ಕೆಲವು ಅಸ್ವಸ್ಥತೆಗಳ ಬಗ್ಗೆ ಇಲ್ಲಿ ತಿಳಿಯೋಣ.

ಬಯೋಟಿನಿಡೇಸ್ ಕೊರತೆ
ಈ ಆನುವಂಶಿಕ ಅಸ್ವಸ್ಥತೆಯು ಬಯೋಟಿನಿಡೇಸ್ ಕಿಣ್ವದ ಕೊರತೆಯಿಂದ ಉಂಟಾಗುತ್ತೆ.  ಚಯಾಪಚಯಗೊಳಿಸಲು ಬಯೋಟಿನ್ ಕಿಣ್ವವು ಅವಶ್ಯಕವಾಗಿದೆ. ಇದಲ್ಲದೆ, ಜನ್ಮಜಾತ ಮೂತ್ರಜನಕಾಂಗದ ಹೈಪರ್ಪ್ಲಾಸಿಯಾ ಎಂದು ಕರೆಯಲ್ಪಡುವ ಅಸ್ವಸ್ಥತೆಗಳನ್ನು ಕಂಡುಹಿಡಿಯಲು ರಕ್ತ ಪರೀಕ್ಷೆಗಳನ್ನು ಸಹ ಮಾಡಲಾಗುತ್ತೆ. ಈ ಅಸ್ವಸ್ಥತೆಯಿಂದ ಬಳಲುತ್ತಿರುವ ಶಿಶುಗಳಿಗೆ ಕಾರ್ಟಿಸೋಲ್ ಎಂಬ ಹಾರ್ಮೋನ್ ತಯಾರಿಸಲು ಸಾಧ್ಯವಾಗೋದಿಲ್ಲ. ಇದು ಹಾರ್ಮೋನ್(Harmone) ಶಕ್ತಿ, ಸಕ್ಕರೆ ಮಟ್ಟ, ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ .

ಅಮೈನೋ ಆಮ್ಲ (Amino acid)ಅಸ್ವಸ್ಥತೆ

ಆಹಾರವು ಅಮೈನೊ ಆಮ್ಲಗಳನ್ನು ಹೊಂದಿರುತ್ತೆ. ಇದು ಪ್ರೋಟೀನ್‌ಗಳಿಗೆ ಬಿಲ್ಡಿಂಗ್ ಬ್ಲಾಕ್ ಆಗಿ ಕಾರ್ಯನಿರ್ವಹಿಸುತ್ತೆ. ಈ ಅಸ್ವಸ್ಥತೆಯಲ್ಲಿ, ದೇಹವು ಶಕ್ತಿಗಾಗಿ ಪ್ರೋಟೀನ್ಗಳನ್ನು ಅಮೈನೋ ಆಮ್ಲಗಳಾಗಿ ವಿಭಜಿಸಲು ಸಾಧ್ಯವಾಗೋದಿಲ್ಲ. ಜನನದ ನಂತರ, ಇದು ಮಗುವಿನ ಮೆದುಳು ಮತ್ತು ಇತರ ಅಂಗಗಳನ್ನು ಹಾನಿಗೊಳಿಸುತ್ತೆ.

ಸಿಸ್ಟ್ ಫೈಬ್ರೋಸಿಸ್

ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಮಗುವಿನ ಸಿಸ್ಟ್ ಫೈಬ್ರೋಸಿಸ್ ಸಹ ಪರೀಕ್ಷಿಸಲಾಗುತ್ತೆ. ಇದು ಜೀರ್ಣಕ್ರಿಯೆ(Digestion) ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. ಇದರಲ್ಲಿ, ಮಗುವು ಸರಿಯಾಗಿ ತೂಕವನ್ನು ಹೆಚ್ಚಿಸೋದಿಲ್ಲ ಮತ್ತು ಎದೆಯಲ್ಲಿ ಸೋಂಕು ತಗುಲುವ ಭಯವಿರುತ್ತೆ. ಆರಂಭದಲ್ಲಿ, ಹೆಚ್ಚಿನ ಶಕ್ತಿಯ ಆಹಾರ, ಔಷಧಿ ಮತ್ತು ಫಿಸಿಯೋಥೆರಪಿಯಿಂದ ಇದನ್ನು ಗುಣಪಡಿಸಬಹುದು, ಇಲ್ಲದಿದ್ದರೆ ಮಗು ತುಂಬಾ ಅನಾರೋಗ್ಯಕ್ಕೆ ಒಳಗಾಗಬಹುದು.

ನ್ಯೂ ಬಾರ್ನ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಇನ್ನೇನು ಬರುತ್ತೆ ?

 ನ್ಯೂ ಬಾರ್ನ ಸ್ಕ್ರೀನಿಂಗ್ ಪರೀಕ್ಷೆಯು ಫ್ಯಾಟಿ ಆಸಿಡ್ ಡಿಸ್ಆರ್ಡರ್(Fatty acid disorder), ಆರ್ಗಾನಿಕ್ ಆಸಿಡ್ ಡಿಸ್ಆರ್ಡರ್, ಪ್ರೈಮರಿ ಕಂಜನೈಟಲ್ ಹೈಪೋಥೈರಾಯ್ಡಿಸಮ್, ಗ್ಯಾಸ್ಟ್ರೋಸ್ಮೋಮಿಯಾ ಮತ್ತು ಸಿಕೆಲ್ ಸೆಲ್ ರೋಗವನ್ನು ಪರೀಕ್ಷಿಸುತ್ತೆ.

ನ್ಯೂ ಬಾರ್ನ ಸ್ಕ್ರೀನಿಂಗ್ ಪರೀಕ್ಷೆಯನ್ನು ಏಕೆ ನಡೆಸಲಾಗುತ್ತೆ?

ಈ ಸರಳ ರಕ್ತ ಪರೀಕ್ಷೆಯೊಂದಿಗೆ, ವೈದ್ಯರು ಮಗುವಿನಲ್ಲಿ ಅಪರೂಪದ ಆನುವಂಶಿಕ, ಹಾರ್ಮೋನ್ ಮತ್ತು ಮೆಟಾಬಾಲಿಕ್(Metabolic) ಅಸ್ವಸ್ಥತೆಗಳನ್ನು ಪತ್ತೆಹಚ್ಚುತ್ತಾರೆ, ಇದು ಮಗುವಿನ ಜೀವಕ್ಕೆ ಅಪಾಯ ಉಂಟು ಮಾಡಬಹುದು. ಯಾವುದೇ ಅನಾರೋಗ್ಯ ಕಂಡು ಬಂದರೆ, ಬಾಲ್ಯದಲ್ಲಿಯೇ ಬೇಗನೆ ಗುಣಪಡಿಸಲೂ ಬಹುದು.
 

Latest Videos

click me!