ಡಿಯೋಡ್ರೆಂಟ್ ಬಳಸಿದ ಬಾಲಕಿ ಹೃದಯ ಸ್ತಂಭನದಿಂದ ಸಾವು?

First Published Jan 28, 2023, 3:58 PM IST

ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಕೆಲದಿನಗಳ ಹಿಂದಷ್ಟೇ ಜಾರ್ಜಿಯಾ ಗ್ರೀನ್ (14) ಎಂಬ ಬಾಲಕಿ ತನ್ನ ಕೋಣೆಯಲ್ಲಿ ಡಿಯೋ ಸಿಂಪಡಿಸಿದ ನಂತರ ಶವವಾಗಿ ಪತ್ತೆಯಾಗಿದ್ದಾಳೆ. ಡಿಯೋದ ಸುವಾಸನೆಯ ವಾಸನೆಯಿಂದಾಗಿ ಅವಳು ಹೃದಯ ಸ್ತಂಭನಕ್ಕೆ  ಒಳಗಾದಳು ಎಂದು ತಜ್ಞರು ಹೇಳುತ್ತಿದ್ದಾರೆ. ಡಿಯೋ ಎಷ್ಟು ಅಪಾಯಕಾರಿ ಎಂದು ತಿಳಿಯಲು ಮುಂದೆ ಓದಿ.

ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಡಿಯೋಡರೆಂಟ್ಗಳನ್ನು(Deodarant) ಬಳಸ್ತಾರೆ, ಇದನ್ನು ಹೈಜೀನ್ ರೂಟೀನ್ನ ಭಾಗವೆಂದು ಪರಿಗಣಿಸಲಾಗುತ್ತೆ. ಆದರೆ, ಅವುಗಳ ಬಳಕೆಯು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ ಎಂದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಡಿಯೋದಲ್ಲಿರುವ ರಾಸಾಯನಿಕಗಳು ಕೆಲವೊಮ್ಮೆ ಚರ್ಮವನ್ನು ಹಾನಿಗೊಳಿಸಬಹುದು, ರಾಷೆಸ್ ಮತ್ತು ಊತಕ್ಕೆ ಕಾರಣವಾಗಬಹುದು. ಇಷ್ಟೇ ಅಲ್ಲ, ಇತ್ತೀಚೆಗೆ ನಡೆದ ಒಂದು ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿತು.

ಡಿಯೋ ವಾಸನೆಯಿಂದ ಮಗು ಸಾವು: ಡಿಯೋಡರೆಂಟ್ ಹಾಕಿದ ನಂತರ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ವೈದ್ಯರ ಪ್ರಕಾರ, ಆಕಸ್ಮಿಕವಾಗಿ ಏರೋಸಾಲ್ ವಾಸನೆ ಬಂದ ನಂತರ ಬಾಲಕಿಗೆ ಹೃದಯ ಸ್ತಂಭನವಾಯಿತು ಎನ್ನಲಾಗಿದೆ. ಅದಕ್ಕೂ ಮುನ್ನ, ಜಾರ್ಜಿಯಾ ಗ್ರೀನ್ ಸಂಪೂರ್ಣವಾಗಿ ಫಿಟ್ ಮತ್ತು ಆರೋಗ್ಯಕರವಾಗಿದ್ದಳು ಎನ್ನಲಾಗಿದೆ.

ಹುಡುಗಿ ಹಿಂದೆಂದೂ ಗಂಭೀರ ಅನಾರೋಗ್ಯಕ್ಕೆ ಒಳಗಾಗಿರಲಿಲ್ಲ. ಈ ಘಟನೆಯ ನಂತರ, ಜಾರ್ಜಿಯಾ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೆ ಪೋಷಕರು ಹೇಳುವ ಮಾಹಿತಿ ಪ್ರಕಾರ ಆಕೆ ಸಾಮಾನ್ಯವಾಗಿ ಡಿಯೋಡ್ರಂಟ್ ಸಿಂಪಡಿಸುತ್ತಿದ್ದಳು, ಡಿಯೋ ವಾಸನೆಯಿಂದ ಆಕೆಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ಅದುವೇ ಹೃದಯ ಸ್ತಂಭನಕ್ಕೆ ಕಾರಣವಾಗಿದೆ.

ಡಿಯೋಡರೆಂಟ್ ಏರೋಸಾಲ್ ಎಂಬ ವಿಷಕಾರಿ ರಾಸಾಯನಿಕಗಳು ಮತ್ತು ಅನಿಲಗಳನ್ನು ಹೊಂದಿರುತ್ತದೆ. ಈ ಪರಿಮಳವನ್ನು ಹೆಚ್ಚು ತೆಗೆದುಕೊಂಡರೆ, ಇದರಿಂದ ಹೃದಯ ಸ್ತಂಭನ(Cardiac arrest) ಸಾಧ್ಯತೆ ಹೆಚ್ಚಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸುರಕ್ಷಿತ ಬಳಕೆಯನ್ನು ಪ್ರಚಾರ ಮಾಡುವುದು ಅಂತಹ ಘಟನೆಗಳನ್ನು ಗಮನಾರ್ಹವಾಗಿ ಮಿತಿಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಹೆಚ್ಚುವರಿಯಾಗಿ, ಈ ಉತ್ಪನ್ನಗಳನ್ನು ಮಕ್ಕಳ ಕೈಗೆಟುಕದಂತೆ ದೂರವಿಡುವುದು ಮತ್ತು ಅಂಬೆಗಾಲಿಡುವ ಮಕ್ಕಳಿಗೆ ಅವುಗಳನ್ನು ಬಳಸುವುದನ್ನು ಮಿತಿಗೊಳಿಸುವುದು ಅಥವಾ ತಪ್ಪಿಸುವುದು ತುಂಬಾನೆ ಮುಖ್ಯವಾಗಿದೆ. ಬದಲಿಗೆ, ಪೋಷಕರು ಟಾಲ್ಕಂ ಪೌಡರ್ ಅನ್ನು(Talcum powder) ಬಳಸಬಹುದು. ಇದನ್ನು ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ.

ಕಾರ್ಡಿಯಾಕ್ ಅರೆಸ್ಟ್ ಎಂದರೇನು?: ಹೃದಯ ಸ್ತಂಭನವು ಒಂದು ರೀತಿಯ ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು, ಇದರಲ್ಲಿ ಸಾವಿನ ಅಪಾಯ ಹೆಚ್ಚಾಗಿರುತ್ತೆ. ಹೃದಯ ಸ್ತಂಭನವಾದಾಗ, ಹೃದಯ ಬಡಿತ ಇದ್ದಕ್ಕಿದ್ದಂತೆ ನಿಲ್ಲುತ್ತೆ. ಹೃದಯ ಸ್ತಂಭನದ ಸಂದರ್ಭದಲ್ಲಿ, ರೋಗಿಯು ಇದ್ದಕ್ಕಿದ್ದಂತೆ ಮೂರ್ಛೆಹೋಗುತ್ತಾನೆ (Unconscious)ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತೆ .

ಕಾರ್ಡಿಯಾಕ್ ಅರೆಸ್ಟ್  ಲಕ್ಷಣಗಳು ಯಾವುವು?
ಎದೆ ನೋವು, ಯಾವುದೇ ಕಾರಣವಿಲ್ಲದೆ ಉಬ್ಬಸ, ಉಸಿರಾಟದ ತೊಂದರೆ, ಪ್ರಜ್ಞಾಹೀನತೆ, ತಲೆತಿರುಗುವಿಕೆ, ಲಘು ತಲೆನೋವಿನ,  ಅನುಭವ, ಅನಿಯಮಿತ ಹೃದಯ ಬಡಿತ, ವೇಗದ ಹೃದಯ ಬಡಿತ

ಹಾಗಾಗಿ ಕಾರ್ಡಿಯಾಕ್ ಅರೆಸ್ಟ್ ಲಕ್ಷಣಗಳನ್ನು ಮೊದಲೇ ತಿಳಿದು, ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಪ್ರಾಣಾಪಾಯವನ್ನು ತಡೆಯಬಹುದು. ಹಾಗೆಯೇ ಸರಿಯಾದ ರೀತಿಯಲ್ಲಿ  ಡಿಯೋಡರೆಂಟ್ ಬಳಕೆಯನ್ನು ತಿಳಿದು ನಂತರವೇ ಅದನ್ನು ಉಪಯೋಗಿಸಲು ಮರೀಬೇಡಿ.  
 

click me!