ಪಾಲಕ್ ಅಥವಾ ಮೆಂತ್ಯ ಸೊಪ್ಪು…. ಉತ್ತಮ ಆರೋಗ್ಯಕ್ಕೆ ಯಾವುದು ಬೆಸ್ಟ್?

First Published | Oct 23, 2022, 5:34 PM IST

ಹವಾಮಾನವು ಬದಲಾದಾಗ, ನಮ್ಮ ಆಹಾರದಲ್ಲಿಯೂ ವ್ಯತ್ಯಾಸ ಆಗೋದು ಸಾಮಾನ್ಯ. ಈ ಋತುವಿನಲ್ಲಿ, ಪಾಲಕ್ ಸೊಪ್ಪು ಅಥವಾ ಮೆಂತ್ಯ ಇತ್ಯಾದಿಗಳಂತಹ ಹಸಿರು ಎಲೆ ತರಕಾರಿಗಳನ್ನು ಸೇವಿಸಲು ಜನರಿಗೆ ಸೂಚಿಸಲಾಗಿದೆ. ಹಸಿರು ಎಲೆ ತರಕಾರಿಗಳು ಅನೇಕ ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಇತ್ಯಾದಿಗಳನ್ನು ಹೊಂದಿರುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೆ, ಇದು ಫೈಬರ್ ನಿಂದ ಸಮೃದ್ಧವಾಗಿದೆ, ಇದರಿಂದಾಗಿ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಎಲ್ಲಾ ರೀತಿಯ ಹಸಿರು ಎಲೆಗಳ ತರಕಾರಿಗಳು ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ವಿವಿಧ ರೀತಿಯ ಹಸಿರು ಎಲೆಗಳ ತರಕಾರಿಗಳಲ್ಲಿ ಯಾವುದನ್ನು ತಮ್ಮ ಆಹಾರದ ಒಂದು ಭಾಗವಾಗಿಸಬೇಕು ಎನ್ನುವ ಬಗ್ಗೆ ಜನರ ಮನಸ್ಸಿನಲ್ಲಿ ಸಂದೇಹ ಮೂಡೋದು ಸಾಮಾನ್ಯ. ಉದಾಹರಣೆಗೆ, ಕೆಲವರು ಪಾಲಕ್ ಸೊಪ್ಪನ್ನು (spinach) ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವರು ಮೆಂತ್ಯ ಎಲೆಗಳನ್ನು ಸೇವಿಸುತ್ತಾರೆ.

ಪಾಲಕ್ ಮತ್ತು ಮೆಂತ್ಯೆ (fenugreek), ಈ ಎರಡು ಹಸಿರು ಎಲೆ ತರಕಾರಿಗಳ ನಡುವಿನ ವ್ಯತ್ಯಾಸ ಮತ್ತು ಯಾವುದನ್ನು ತಿನ್ನೋದು ಬೆಸ್ಟ್ ಎಂದು ನೀವು ತಿಳಿಯಲು ಬಯಸಿದರೆ, ನೀವು ಈ ಲೇಖನವನ್ನು ಓದಬೇಕು.  ಪಾಲಕ್ ಮತ್ತು ಮೆಂತ್ಯ ನಡುವಿನ ವ್ಯತ್ಯಾಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.

Tap to resize

ಪಾಲಕ್ ಸೊಪ್ಪಿನಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?
ಪಾಲಕ್ ಸೊಪ್ಪಿನಲ್ಲಿ ಕಂಡುಬರುವ ಪೋಷಕಾಂಶಗಳ ವಿಷಯದ ಬಗ್ಗೆ ಹೇಳೋದಾದರೆ, ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಾಲಕ್ ಸೊಪ್ಪು ಕೇವಲ ಕಬ್ಬಿಣಾಂಶ ಮಾತ್ರ ಹೊಂದಿಲ್ಲ, ಇದು ಆಂಟಿ-ಆಕ್ಸಿಡೆಂಟ್ ಗಳು ಮತ್ತು ಫೈಬರ್ ಅನ್ನು ಸಹ ಹೊಂದಿರುತ್ತದೆ. ಇಷ್ಟೇ ಅಲ್ಲ, ಕ್ಯಾಲ್ಸಿಯಂ, ವಿಟಮಿನ್ ಎ, ಕೆ, ಸಿ ಮತ್ತು ಕೆ 1 ನಂತಹ ಅನೇಕ ಜೀವಸತ್ವಗಳು ಮತ್ತು ಖನಿಜಗಳು  ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತವೆ. 

ಪಾಲಕ್ ಸೊಪ್ಪಿನಲ್ಲಿ ಇರುವ ಪೋಷಕಾಂಶಗಳು ನಮಗೆ ಹಲವಾರು ರೀತಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಕಣ್ಣುಗಳನ್ನು ಆರೋಗ್ಯಕರವಾಗಿಡಲು ಮತ್ತು ಮಲಬದ್ಧತೆ (constipation) ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳನ್ನು ದೂರವಿಡಲು ಪಾಲಕ್ ಸೊಪ್ಪಿನಲ್ಲಿರುವ ಪೋಷಕಾಂಶಗಳು ಸಹಾಯ ಮಾಡುತ್ತದೆ. 
 

ಮೆಂತ್ಯ ಎಲೆಗಳಲ್ಲಿ ಏನಿದೆ?
ನೀವು ನಿಮ್ಮ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಬಯಸಿದರೆ, ಮೆಂತ್ಯವನ್ನು ಸೇವಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ತುಂಬಾ ಕಡಿಮೆ ಕ್ಯಾಲೋರಿ ಹೊಂದಿದೆ. ಮೆಂತ್ಯದಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ನಂತಹ ಪೋಷಕಾಂಶಗಳಿವೆ. 

ಮೆಂತ್ಯದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಕಾರಣದಿಂದಾಗಿಯೇ ಶೀತ ಋತುವಿನಲ್ಲಿ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತೆ.  

ಯಾವುದನ್ನು ಸೇವಿಸೋದು ಉತ್ತಮ?
ಎರಡೂ ಹಸಿರು ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಆದರೆ ಕೆಲವು ಸಂದರ್ಭಗಳಲ್ಲಿ ಮೆಂತ್ಯವನ್ನು ಪಾಲಕ್ ಸೊಪ್ಪಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಒಬ್ಬರು ತಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ತರಕಾರಿಗಳನ್ನು ಸೇವಿಸಬೇಕು. 

ರಕ್ತವನ್ನು ತೆಳುಗೊಳಿಸುವ ಸಮಸ್ಯೆಗಳನ್ನು ಹೊಂದಿರುವ ಜನರು, ಪಾಲಕ್ ಸೊಪ್ಪನ್ನು ತಿನ್ನಬಾರದು, ಏಕೆಂದರೆ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ, ಮಧುಮೇಹ (diabetes)ರೋಗಿಗಳು ಸಹ ವೈದ್ಯರ ಸಲಹೆಯಿಲ್ಲದೆ ಪಾಲಕ್ ಸೊಪ್ಪನ್ನು ಸೇವಿಸಬಾರದು.

ನೀವು ಕಡಿಮೆ ಕ್ಯಾಲೋರಿ ಆಹಾರ ಸೇವಿಸುತ್ತಿದ್ದರೆ, ಮೆಂತ್ಯವನ್ನು ಆಯ್ಕೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಮೆಂತ್ಯವು ಪಾಲಕ್ ಸೊಪ್ಪಿಗಿಂತ ಕಡಿಮೆ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿದೆ. ಆದರೆ ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ. 100 ಗ್ರಾಂ ಮೆಂತ್ಯದಲ್ಲಿ 2.9 ಗ್ರಾಂ ಕಾರ್ಬೋಹೈಡ್ರೇಟ್ಸ್ ಮತ್ತು 4 ಗ್ರಾಂ ಪ್ರೋಟೀನ್ ಇದ್ದರೆ, 100 ಗ್ರಾಂ ಪಾಲಕ್ ಸೊಪ್ಪಿನಲ್ಲಿ 6 ಗ್ರಾಂ ಕಾರ್ಬೋಹೈಡ್ರೇಟ್ಸ್ ಮತ್ತು 2 ಗ್ರಾಂ ಪ್ರೋಟೀನ್ ಇದೆ. 

ಮೆಂತ್ಯವು ಪಾಲಕ್ ಸೊಪ್ಪಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಸಹ ಹೊಂದಿದೆ ಮತ್ತು ಅದಕ್ಕಾಗಿಯೇ ಮೆಂತ್ಯವನ್ನು ಸೇವಿಸುವುದು ಮೂಳೆಯ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇನ್ನೇನು ಮಾಹಿತಿ ಬೇಕು? ಮೆಂತೆ ಮತ್ತು ಪಾಲಕ್ ಸೊಪ್ಪಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗಾಗಲೇ ನೀವು ತಿಳಿದುಕೊಂಡಿದ್ದೀರಿ ಅಲ್ವಾ?

Latest Videos

click me!