ದಿಢೀರ್ ಆಗಿ ಎದ್ದು ನಿಂತಾಗ ತಲೆ ತಿರುಗಿದಂತೆ ಆಗುತ್ತದೆಯೇ? ಕಾರಣವೇನು ಗೊತ್ತಾ?

First Published | Oct 24, 2023, 4:56 PM IST

ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಒಂದು ರೀತಿಯ ಕಡಿಮೆ ರಕ್ತದೊತ್ತಡದ ಸ್ಥಿತಿಯಾಗಿದ್ದು, ಇದು ಸಾಮಾನ್ಯವಾಗಿ ಕುಳಿತು, ಮಲಗಿ ಸಡನ್ ಆಗಿ ಎದ್ದ ನಂತರ ಸಂಭವಿಸುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಗೆ ಇದ್ದಕ್ಕಿದ್ದಂತೆ ತಲೆತಿರುಗುವಿಕೆಯ ಉಂಟಾಗುತ್ತೆ.
 

ನೀವು ಎಲ್ಲೋ ಕುಳಿತಿದ್ದೀರಿ ಅಥವಾ ಮಲಗಿದ್ದೀರಿ ಎಂದಿಟ್ಟುಕೊಳ್ಳಿ, ನೀವು ಇದ್ದಕ್ಕಿದ್ದಂತೆ ಎದ್ದಾಗ ಒಂದು ಕ್ಷಣ ನಿಮ್ಮ ತಲೆ ತಿರುಗುವಂತೆ ಭಾಸವಾಗುತ್ತೆ. ನೀವು ಈ ಹಿಂದೆ ಸಹ ಇದೇ ರೀತಿಯ ಸಮಸ್ಯೆಯನ್ನು ಹೊಂದಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ನೀವು ಅತ್ಯಂತ ಜಾಗರೂಕರಾಗಿರಬೇಕು. ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ (Orthostatic hypotension) ಹಠಾತ್ ತಲೆನೋವು, ತಲೆತಿರುಗುವಿಕೆಯಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದು.

ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಎಂದರೇನು?:  ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಬಗ್ಗೆ  ತಜ್ಞರು ಹೇಳುವಂತೆ ಭೌತಿಕ ಹೈಪೋಟೆನ್ಷನ್ ಎಂದೂ ಕರೆಯಲ್ಪಡುವ ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಕುಳಿತ ನಂತರ ಅಥವಾ ಮಲಗಿದ ಎದ್ದು ನಿಲ್ಲುವ ಸ್ಥಿತಿಯಲ್ಲಿದ್ದಾಗ, ಅವನ ರಕ್ತದೊತ್ತಡದಲ್ಲಿ ಹಠಾತ್ ಕುಸಿತ (low blood pressure) ಉಂಟಾಗುತ್ತದೆ. ರಕ್ತದೊತ್ತಡದ ಕುಸಿತದಿಂದಾಗಿ ತಲೆತಿರುಗುವಿಕೆ ಮತ್ತು ಮೂರ್ಛೆಯಂತಹ ರೋಗಲಕ್ಷಣಗಳು ಸಹ ಕಂಡುಬರುತ್ತವೆ. ತಜ್ಞರ ಪ್ರಕಾರ, ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಉಂಟಾಗುತ್ತದೆ ಏಕೆಂದರೆ ನೀವು ಎದ್ದು ನಿಂತಾಗ, ಗುರುತ್ವಾಕರ್ಷಣೆಯಿಂದಾಗಿ ನಿಮ್ಮ ದೇಹದ ಕೆಳ ತುದಿಗಳಲ್ಲಿ ರಕ್ತ ಸಂಗ್ರಹವಾಗುತ್ತದೆ, ಇದು ಮೆದುಳಿಗೆ ರಕ್ತದ ಹರಿವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ. ಇದರಿಂದ ತಲೆತಿರುಗುವಿಕೆ ಉಂಟಾಗುತ್ತೆ.

Tap to resize

ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಗೆ ಪ್ರಮುಖ ಕಾರಣಗಳು ಯಾವುವು?: 

ನಿರ್ಜಲೀಕರಣ (dehydration): ದೇಹದಲ್ಲಿ ಸಾಕಷ್ಟು ದ್ರವದ ಕೊರತೆಯು ದೇಹದ ರಕ್ತದ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ದೇಹದಲ್ಲಿ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದಾಗಿ ಆರ್ಥೋಸ್ಟಾಟಿಕ್ ಹೈಪೊಟೆನ್ಷನ್ ಸ್ಥಿತಿ ಉದ್ಭವಿಸುತ್ತದೆ.
 

ಔಷಧಿಗಳು (medicine): ಕೆಲವು ಆಂಟಿಹೈಪರ್ಟೆನ್ಸಿವ್ಗಳು, ಮೂತ್ರವರ್ಧಕಗಳು ಮತ್ತು ಖಿನ್ನತೆ-ಶಮನಕಾರಿಗಳಂತಹ ಕೆಲವು ಔಷಧಿಗಳು ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ಗೆ ಕಾರಣವಾಗಬಹುದು ಅಥವಾ ಹೆಚ್ಚಿಸಬಹುದು.

ವಯಸ್ಸು ಸಹ ಕಾರಣವಾಗಬಹುದು: ರಕ್ತನಾಳಗಳು ಮತ್ತು ನರಮಂಡಲದ ಬದಲಾವಣೆಗಳಿಂದಾಗಿ, ವಯಸ್ಸಾದವರಲ್ಲಿ ಆರ್ಥೋಸ್ಟಾಟಿಕ್ ಹೈಪೊಟೆನ್ಷನ್ ಸ್ಥಿತಿ ಉಂಟಾಗುತ್ತೆ. ಇದರಿಂದ ಸಡನ್ ಆಗಿ ಎದ್ದು ನಿಂತಾಗ ಅವರಲ್ಲಿ ಸಮಸ್ಯೆ ಕಾಡುತ್ತದೆ. 

ನರವೈಜ್ಞಾನಿಕ ಅಸ್ವಸ್ಥತೆಗಳು: ಪಾರ್ಕಿನ್ಸನ್ ಕಾಯಿಲೆ, ಮಲ್ಟಿಪಲ್ ಸಿಸ್ಟಮ್ ಅಟ್ರೋಫಿ ಮತ್ತು ಸ್ವಯಂಚಾಲಿತ ನರರೋಗದಂತಹ ಪರಿಸ್ಥಿತಿಗಳು ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತವೆ, ಇದು ವ್ಯಕ್ತಿಯಲ್ಲಿ ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಸ್ಥಿತಿಯನ್ನು ಉಂಟುಮಾಡುತ್ತದೆ.

ದೀರ್ಘಕಾಲದಿಂದ ಹಾಸಿಗೆಯಲ್ಲಿ ಮಲಗಿಯೇ ಇರೋದು:  ದೀರ್ಘಕಾಲ ಹಾಸಿಗೆಯಲ್ಲಿ (bed ridden) ಮಲಗಿರುವವರು ಹೆಚ್ಚಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿರೋದಿಲ್ಲ, ಇದು ತಲೆತಿರುಗುವಿಕೆ ಮತ್ತು ಮೂರ್ಛೆಯಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

ಅದರ ಚಿಕಿತ್ಸೆ ಏನು?: ಸಾಮಾನ್ಯವಾಗಿ ಈ ರೋಗದ ಮುಖ್ಯ ಚಿಕಿತ್ಸೆಯು ವೈದ್ಯರನ್ನು ಸಂಪರ್ಕಿಸುವ ಮೂಲಕ ಮಾತ್ರ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ನೀವು ಗಂಭೀರ ಸಮಸ್ಯೆಯನ್ನು ಹೊಂದಿದ್ದರೆ, ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡಿ. ಅದೇ ಸಮಯದಲ್ಲಿ, ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವ ಮೂಲಕ, ನೀವು ಈ ಸಮಸ್ಯೆಯಿಂದ ಸ್ವಲ್ಪ ಪರಿಹಾರವನ್ನು ಪಡೆಯಬಹುದು.

ಎದ್ದೇಳುವಾಗ ಎಚ್ಚರಿಕೆ ವಹಿಸಿ: ವ್ಯಕ್ತಿಯು ಹಾಸಿಗೆಯಿಂದ ಅವನು ನಿಧಾನವಾಗಿ ಎದ್ದು ನಿಲ್ಲುವುದು ಬಹಳ ಮುಖ್ಯ, ಇದರಿಂದ ದೇಹದಲ್ಲಿನ ರಕ್ತದೊತ್ತಡದ ಪರಿಸ್ಥಿತಿ ತ್ವರಿತವಾಗಿ ಬದಲಾಗುವುದಿಲ್ಲ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ.

ಯೋಗ ಮತ್ತು ವ್ಯಾಯಾಮ: ಸಾಮಾನ್ಯವಾಗಿ ಯೋಗ ಮತ್ತು ವ್ಯಾಯಾಮ ಮಾಡುವ ಮೂಲಕ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಮಸಾಲೆಗಳ ಸೇವನೆಯನ್ನು ಕಡಿಮೆ ಮಾಡಿ: ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಗೆ ಮುಖ್ಯ ಕಾರಣ ಆಹಾರಕ್ಕೆ ಸಂಬಂಧಿಸಿದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿಮಗೆ ರಕ್ತದೊತ್ತಡದ ಸಮಸ್ಯೆಗಳು ಉಂಟಾಗಬಹುದು ಮತ್ತು ತಲೆತಿರುಗುವಿಕೆ ಮತ್ತು ಮೂರ್ಛೆ ಹೋಗುವ ಸಮಸ್ಯೆ ಸಹ ಉಂಟಾಗಬಹುದು. 

Latest Videos

click me!