Health Tips: ಬಿಪಿ ಇದ್ದಕ್ಕಿದ್ದಂತೆ ಕಡಿಮೆಯಾದ್ರೆ ತಕ್ಷಣ ಹೀಗೆ ಮಾಡಿ!

First Published | Oct 23, 2023, 5:48 PM IST

ನೀವು ಕಡಿಮೆ ಬಿಪಿ, ತಲೆತಿರುಗುವಿಕೆ ಮತ್ತು ಮೂರ್ಛೆ ರೋಗ ಹೊಂದಿದ್ದರೆ, ತಕ್ಷಣ ಈ ಮನೆಮದ್ದುಗಳನ್ನು ಟ್ರೈ ಮಾಡಿ. ಯಾವುದೇ ಔಷಧಿಗಳ ಸಹಾಯವಿಲ್ಲದೇ ನೀವು ಈ ಮನೆಮದ್ದುಗಳನ್ನು ಬಳಸಿಕೊಂಡು ಬಿಪಿ ನಿವಾರಿಸಬಹುದು.
 

ಕಡಿಮೆ ರಕ್ತದೊತ್ತಡವು (low blood pressure) ಬಿಪಿ ಸಾಮಾನ್ಯ ಮಟ್ಟಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗುವ ಸ್ಥಿತಿಯಾಗಿದೆ. ನಿಮ್ಮ ಬಿಪಿ 90/60 ಎಂಎಂ ಎಚ್ಜಿಗಿಂತ ಕಡಿಮೆಯಾದಾಗ, ಲೋ ಬಿಪಿ ಸಮಸ್ಯೆ ಉಂಟಾಗುತ್ತದೆ. ಅನೇಕ ಬಾರಿ ನಾವು ಇದನ್ನು ಅರಿತುಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ತಲೆತಿರುಗುವಿಕೆ, ದೌರ್ಬಲ್ಯ, ಮೂರ್ಛೆ ತಪ್ಪುವುದು ಮೊದಲಾದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ಯಾವುದೇ ಸಮಯದಲ್ಲಿ ಯಾರಿಗಾದರೂ ಸಂಭವಿಸಬಹುದು. ಈ ರೀತಿಯ ಏನಾದರೂ ನಿಮಗೆ ಸಂಭವಿಸಿದರೆ, ತಜ್ಞರು ಹೇಳುವ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. 

ತಜ್ಞರು ಹೇಳುವ ಪ್ರಕಾರ ಕಡಿಮೆ ಬಿಪಿ ಒಂದು ರೋಗವಲ್ಲ. ಅಸಮತೋಲಿತ ಆಹಾರ ಪದ್ಧತಿ, ಒತ್ತಡ, ನೀರಿನ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಮನೆಮದ್ದುಗಳ ಸಹಾಯದಿಂದ, ಈ ಸಮಸ್ಯೆಯನ್ನು ನಿವಾರಿಸಬಹುದು. ಅವು ಯಾವುವು ಅನ್ನೋದನ್ನು ನೋಡೋಣ. 

Latest Videos


ಉಪ್ಪು: ರಕ್ತದಲ್ಲಿ ಕಡಿಮೆ ಸೋಡಿಯಂ ಅಂಶವು ಲೋ ಬಿಪಿಗೆ ಕಾರಣವಾಗಬಹುದು. ಬಿಪಿ ಕಡಿಮೆಯಾದಾಗಲೆಲ್ಲಾ, ಉಪ್ಪಿನ ಸೇವನೆಯು ಪರಿಣಾಮಕಾರಿ. ಬಿಪಿ ಕಡಿಮೆಯಾದಾಗ, ಒಂದು ಲೋಟ ನೀರಿಗೆ ನಿಂಬೆ ಮತ್ತು ಉಪ್ಪನ್ನು ಸೇರಿಸಿ ಕುಡಿಯಿರಿ. ಇದು ಬಿಪಿಯನ್ನು ಸಾಮಾನ್ಯಗೊಳಿಸುತ್ತದೆ. ಇದು ಎಲೆಕ್ಟ್ರೋಲೈಟ್ (electrolite) ದ್ರಾವಣವಾಗಿ ಕಾರ್ಯನಿರ್ವಹಿಸುತ್ತದೆ.

ಸಿಹಿ: ಬಿಪಿ ಕಡಿಮೆಯಿದ್ದರೆ, ನೀವು ಸಿಹಿ ವಸ್ತು, ಚಾಕೊಲೇಟ್ ಮುಂತಾದ ಸಿಹಿಯಾದ ಏನನ್ನಾದರೂ ತಿನ್ನಬಹುದು, ಇದು ಬಿಪಿ ಕಡಿಮೆಯಾಗೋದನ್ನು ತಡೆಯುತ್ತದೆ ಮತ್ತು ಬಿಪಿ ಸಾಮಾನ್ಯವಾಗುತ್ತದೆ. ಆದರೆ, ನಿಮಗೆ ಮಧುಮೇಹವಿದ್ದರೆ, ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ ಅಥವಾ ಡಾರ್ಕ್ ಚಾಕೊಲೇಟ್ (dark chocolate) ತಿನ್ನಿ.

ಕಾಫಿ: ಕಡಿಮೆ ಬಿಪಿಯ ಸಮಸ್ಯೆ ಇರುವವರಿಗೆ ಕಾಫಿ ಉಪಯುಕ್ತವಾಗಿದೆ. ಇದರಲ್ಲಿರುವ ಕೆಫೀನ್ ಬಿಪಿಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವ ಮೂಲಕ, ನೀವು ಶಕ್ತಿ ಮತ್ತು ಉತ್ಸಾಹವನ್ನು ಪಡೆಯಬಹುದು.

ವ್ಯಾಯಾಮ: ಲೋ ಬಿಪಿ ಉಂಟಾದಾಗಲೆಲ್ಲಾ, ನಿಮ್ಮ ಮುಷ್ಟಿಗಳನ್ನು ಬಿಗಿದು ತೆರೆಯುತ್ತಲೇ ಇರಿ. ಈ ಸಣ್ಣ ವ್ಯಾಯಾಮಗಳು (exercise) ರಕ್ತದ ಹರಿವನ್ನು ಸುಧಾರಿಸಬಹುದು ಮತ್ತು ನಿಮ್ಮ ಬಿಪಿ ಸಾಮಾನ್ಯವಾಗಿರುತ್ತದೆ. ಇದಲ್ಲದೆ, ನಿಮ್ಮ ಕಾಲುಗಳನ್ನು ಚಲಿಸುತ್ತಲೇ ಇರಿ, ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ತುಳಸಿ ಎಲೆ: ತುಳಸಿ ಎಲೆಗಳು ತುಂಬಾ ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಇದು ಯುಜೆನಾಲ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ, ಇದು ಬಿಪಿಯನ್ನು ನಿಯಂತ್ರಿಸುತ್ತದೆ. ಬಿಪಿ ಕಡಿಮೆಯಾಗಿದ್ರೆ, ತುಳಸಿಯ 4 ರಿಂದ 5 ಎಲೆಗಳನ್ನು ತಕ್ಷಣ ಜಗಿಯಿರಿ.
 

ನೀವು ಏನಾದರೂ ಮೆಡಿಕಲ್ ಕಂಡೀಶನ್ (medical condition) ಹೊಂದಿದ್ದರೆ ಅಥವಾ ನೀವು ಯಾವುದೇ ಬಿಪಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವ ಮೂಲಕ ಮಾತ್ರ ಚಿಕಿತ್ಸೆ ಪಡೆಯಬೇಕು ಎಂದು ತಜ್ಞರು ಹೇಳುತ್ತಾರೆ. ಇಲ್ಲವಾದರೆ ಸಮಸ್ಯೆ ಉಂಟಾಗಬಹುದು. 

click me!