ಸೇಬು ವೈದ್ಯರಿಂದ ದೂರವಿರಿಸುತ್ತೆ ಎಂದು ಹೆಚ್ಚು ಹೆಚ್ಚು ಸೇವಿಸಿದ್ರೆ ಏನಾಗುತ್ತೆ?
First Published Jan 25, 2021, 4:43 PM IST'ದಿನಕ್ಕೊಂದು ಸೇಬು, ವೈದ್ಯರನ್ನು ದೂರ ಇಡುತ್ತದೆ' ಎಂಬ ಮಾತನ್ನು ನಾವೆಲ್ಲಾ ಕೇಳಿದ್ದೇವೆ. ಸೇಬುಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಪೊಟ್ಯಾಶಿಯಂ ಸೇರಿದಂತೆ ಹಲವಾರು ಪೋಷಕಾಂಶಗಳಿರುವ ಕಾರಣ ಈ ಮಾತು ನಿಜವಾಗಿದೆ. ಇವೆಲ್ಲವೂ ಆರೋಗ್ಯವನ್ನು ಬೆಂಬಲಿಸುವಲ್ಲಿ ಅದ್ಭುತಗಳನ್ನು ಉಂಟುಮಾಡುತ್ತದೆ, ಆದರೆ ಅವುಗಳು ತುಂಬಾ ಹೆಚ್ಚಾದ ಸೇವನೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಬೀರುತ್ತವೆ. ಹೌದು, ಯಾವುದೇ ಒಳ್ಳೆಯ ವಸ್ತು ಅತಿಯಾದರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.