ಪ್ರತಿದಿನ ಸ್ವಲ್ಪ ಸ್ವಲ್ಪ ಬಿಯರ್ ಕುಡಿದ್ರೆ ಏನೂ ಆಗಲ್ಲ ಅಂತಾ ಅಂದ್ಕೊಡಿರೋರು ಇದನ್ನ ಓದಿ

First Published | Dec 30, 2023, 4:49 PM IST

ಪ್ರತಿದಿನ ತುಂಬಾ ಬಿಯರ್ ಕುಡಿದ್ರೆ ಮಾತ್ರ ಆರೋಗ್ಯಕ್ಕೆ ಹಾನಿಯಾಗುತ್ತೆ, ಸ್ವಲ್ಪ ಸ್ವಲ್ಪ ಬಿಯರ್ ಕುಡಿಯೋದ್ರಿಂದ ಏನೂ ಸಮಸ್ಯೆ ಆಗೊದಿಲ್ಲ ಅಂದು ಕೊಂಡು ನೀವು ಪ್ರತಿದಿನ ಸ್ವಲ್ಪ ಬಿಯರ್ ಕುಡಿತ್ತಿದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ ನೋಡಿ. 

ಇತ್ತೀಚಿನ ದಿನಗಳಲ್ಲಿ ಜನರ ಜೀವನ ತುಂಬಾನೆ ಒತ್ತಡದಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಜನರು ಚಿಲ್ ಮಾಡೋದಕ್ಕಾಗಿ ಬಿಯರ್ ಕುಡಿಯುತ್ತಾರೆ. ಬಿಯರ್ ಕುಡಿಯೋದರಿಂದ ಮೂಡ್ ಚೆನ್ನಾಗಿರುತ್ತೆ ಎಂದು ಜನರು ಬಿಯರ್ (beer) ಕುಡಿಯುತ್ತಾರೆ. ಇದರಿಂದ ಎಷ್ಟೊಂದು ಸಮಸ್ಯೆ ಇದೆ ಗೊತ್ತಾ? 

ನೀವು ಅಂದುಕೊಂಡಿರಬಹುದು ಸ್ವಲ್ಪ ಪ್ರಮಾಣದಲ್ಲಿ ಬಿಯರ್ ಕುಡಿಯೋದರಿಂದ ಸಮಸ್ಯೆ ಇಲ್ಲ ಎಂದು. ಆದರೆ ಅದು ನಿಜವಲ್ಲ. ನಿಯಮಿತವಾಗಿ ಬಿಯರ್ ಕುಡಿಯೋದ್ರಿಂದ ಹೃದಯಕ್ಕೆ ಒಳ್ಳೆಯದು ಎಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಆದರೆ ಪ್ರತಿದಿನ ಕುಡೀಯೋದರಿಂದ ಹೆಚ್ಚು ಸಮಸ್ಯೆ ಎದುರಿಸಬೇಕಾಗಿ ಬರುತ್ತೆ. 

Latest Videos


ಬಿಯರ್ ನಲ್ಲಿ ಹೆಚ್ಚು ಕ್ಯಾಲರಿ ಇರುತ್ತೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸೋದರಿಂದ ನಿಮ್ಮ ಫ್ಯಾಟ್ ಹೆಚ್ಚುತ್ತದೆ. ಇದರಿಂದಾ ಬೊಜ್ಜಿನ ಸಮಸ್ಯೆ ಕಾಡೋದು ಖಚಿತ. ಅಷ್ಟೇ ಅಲ್ಲ ಪ್ರತಿದಿನ ಬಿಯರ್ ಕುಡಿಯೋದರಿಂದ ನೀವು ಡಿಹೈಡ್ರೇಶನ್ (dehydration) ಸಮಸ್ಯೆಯನ್ನು ಸಹ ಹೊಂದುವ ಸಾಧ್ಯತೆ ಇದೆ. 

ಪ್ರತಿದಿನ ಬಿಯರ್ ಕುಡಿಯೋದರಿಂದ ಅದರ ಪರಿಣಾಮ ನೇರವಾಗಿ ನಿಮ್ಮ ಇಮ್ಯೂನ್ ಸಿಸ್ಟಮ್ ಮೇಲೆ ಬೀಳುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿ (immunity power) ಕಡಿಮೆಯಾಗುತ್ತ ಬಂದರೆ ಅದರಿಂದ ಹಲವಾರು ರೋಗಗಳು ನಿಮ್ಮನ್ನು ಆವರಿಸುವ ಸಾಧ್ಯತೆ ಹೆಚ್ಚಿದೆ. 

ಅಷ್ಟೇ ಅಲ್ಲ ಅಧಿಕ ಬಿಯರ್ ಕುಡಿಯೋದರಿಂದ ನೀವು ಅಧಿಕ ರಕ್ತದೊತ್ತಡ ಮತ್ತು ಡಯಾಬಿಟೀಸ್ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದರ ಪರಿಣಾಮ ನಿಮ್ಮ ಕಿಡ್ನಿ ಮತ್ತು ಲಿವರ್ ಮೇಲೆ ಉಂಟಾಗುವ ಸಾಧ್ಯತೆ ಇದೆ. 

ಹೆಚ್ಚು ಬಿಯರ್ ಕುಡಿಯೋದರಿಂದ ದೇಹದಲ್ಲಿ ನಿರ್ಜಲೀಕರಣ ಹೆಚ್ಚಾಗುವ ಸಾಧ್ಯತೆ ಇದೆ. ದೇಹದಲ್ಲಿ ಡೀಹೈಡ್ರೇಶನ್ ಸಮಸ್ಯೆ ಹೆಚ್ಚಾಗುತ್ತ ಹೋದಂತೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಹೆಚ್ಚಾಗುತ್ತಾ ಹೋಗುತ್ತವೆ. 

Image: Getty

ಹಲವಾರು ರಿಸರ್ಚ್ ಗಳು ತಿಳಿಸಿದಂತೆ ಪ್ರತಿದಿನ ಬಿಯರ್ ಕುಡಿಯೋದರಿಂದ ಬಾಯಿ, ಗಂಟಲಿನ ಕ್ಯಾನ್ಸರ್ ಉಂಟಾಗುವ ಅಪಾಯ ಸಾಕಷ್ಟು ಹೆಚ್ಚಿದೆ. ಮತ್ತೆ ಈ ಸಮಸ್ಯೆ ಮಾರಕವೂ ಆಗಿ, ನಿಮ್ಮ ಜೀವ ಹೋಗುವ ಸಾಧ್ಯತೆ ಕೂಡ ಹೆಚ್ಚಿದೆ. 

click me!