ಲಿಚಿ ಆರೋಗ್ಯಕ್ಕೆ ಒಳ್ಳೇದು ಹೌದು, ಹೆಚ್ಚಾದರೆ?

First Published Jun 22, 2021, 1:41 PM IST

ಬೇಸಿಗೆಯಲ್ಲಿ, ಹೆಚ್ಚಿನ ಮಾವಿನ ಹಣ್ಣಿನ ಸೇವಿಸಿದ ಬಳಿಕ ಜನರು ಲಿಚ್ಚಿ ತಿನ್ನುತ್ತಾರೆ. ರಸಭರಿತವಾದ ಲಿಚಿಯನ್ನು ನೋಡಿದಾಗ ತಿನ್ನಬೇಕು ಅನಿಸುತ್ತದೆ. ಲಿಚಿ ತಿನ್ನುವುದು ತುಂಬಾ ಪ್ರಯೋಜನಕಾರಿ, ಆದರೆ ಜನರು ಒಮ್ಮೆ ಈ ಹಣ್ಣನ್ನು ತಿನ್ನಲು ಪ್ರಾರಂಭಿಸಿದರೆ, ಅವರು ಅದನ್ನು ತಿನ್ನುತ್ತಲೇ ಇರುತ್ತಾರೆ. ಆದಾಗ್ಯೂ, ಹೆಚ್ಚು ಲಿಚಿ ತಿನ್ನುವುದು ಹಾನಿ ಮಾಡುತ್ತದೆ. ಲಿಚಿ ತಿನ್ನುವುದರ ಜೊತೆಗೆ, ಕೆಲವರು ಇದರ ರಸವನ್ನು ಕುಡಿಯಲು ಸಹ ಇಷ್ಟಪಡುತ್ತಾರೆ. 

ಮ್ಯಾಂಗನೀಸ್, ಖನಿಜಗಳು, ತಾಮ್ರ, ಕಬ್ಬಿಣ, ಮೆಗ್ನೀಷಿಯಮ್, ಫೋಲೇಟ್, ವಿಟಮಿನ್-ಬಿ 6, ಸಿ, ಪೊಟ್ಯಾಷಿಯಮ್ ಸಮೃದ್ಧವಾಗಿರುವ ಲಿಚಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಅದರ ಪಾಲಿಫಿನಾಲ್, ಆಂಟಿಆ್ಯಕ್ಸಿಡೆಂಟ್, ಆಂಟಿವೈರಲ್ ಕಾರಣ, ಇದು ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.
undefined
ಹೆಚ್ಚು ಲಿಚಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ವಿಶೇಷವಾಗಿ ಸಕ್ಕರೆ ಮಟ್ಟದಲ್ಲಿ ತೊಂದರೆ ಇರುವವರು. ಲಿಚಿಯನ್ನು ಅತಿಯಾಗಿ ಸೇವಿಸುವುದರಿಂದ ಏನು ಹಾನಿ ಉಂಟಾಗುತ್ತದೆ ತಿಳಿಯಿರಿ.
undefined
ಗರ್ಭಾವಸ್ಥೆಯಲ್ಲಿ ಹೆಚ್ಚು ಲಿಚಿ ತಿನ್ನುವ ಅನಾನುಕೂಲಗಳುಲಿಚಿಯಲ್ಲಿ ಅನೇಕ ಪೋಷಕಾಂಶಗಳಿವೆ, ಇದು ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ.ಆದರೆ ಲಿಚಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ತಿನ್ನುವುದರಿಂದ ಗರ್ಭಿಣಿ ಮಹಿಳೆಯರಿಗೆ ಹಾನಿಯಾಗುತ್ತದೆ.
undefined
ಮಧುಮೇಹ ಇದ್ದವರು ಗರ್ಭಿಣಿಯಾದರೆ,ಹೆಚ್ಚು ಲಿಚಿ ತಿನ್ನುವುದರಿಂದ ದೇಹದಲ್ಲಿನ ರಕ್ತದಸಕ್ಕರೆ ಮಟ್ಟಹೆಚ್ಚಿಸುತ್ತದೆ, ಇದು ಹುಟ್ಟಲಿರುವ ಮಗುವಿಗೆ ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ಲಿಚಿ ತಿನ್ನಬೇಕೆಂದು ನಿಮಗೆ ಅನಿಸಿದರೆ, ಖಂಡಿತವಾಗಿಯೂ ವೈದ್ಯರೊಂದಿಗೆ ಮಾತನಾಡಿ.
undefined
ಲಿಚಿಯಲ್ಲಿ ಕೆಲವು ಅಂಶಗಳಿವೆ, ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ, ಆದರೆ ಅದನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಲಿಚಿ ತಿನ್ನುವುದರಿಂದ ದೇಹದಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಅಧಿಕ ಸಕ್ಕರೆ ಮಟ್ಟವು ಮಧುಮೇಹದಲ್ಲಿ ಕೆಟ್ಟದ್ದಾಗಿರುತ್ತದೆ, ಅದೇ ರೀತಿಯಲ್ಲಿ ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟವೂ ಉತ್ತಮವಲ್ಲ.
undefined
ಯಾವುದೇ ಶಸ್ತ್ರಚಿಕಿತ್ಸೆಗೊಳಗಾದ ಜನರು ಲಿಚಿಯಿಂದ ದೂರ ಇರಬೇಕು. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಶಸ್ತ್ರಚಿಕಿತ್ಸೆಗೆ 10-14 ದಿನಗಳ ಮೊದಲು ಲಿಚಿ ತಿನ್ನುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಆರೋಗ್ಯಕ್ಕೆ ಅಪಾಯಕಾರಿ.
undefined
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆಅಧಿಕ ರಕ್ತದೊತ್ತಡ, ಒತ್ತಡ, ಉಸಿರಾಟದ ಸಮಸ್ಯೆಯನ್ನು ಲಿಚಿ ಸೇವನೆಯಿಂದ ತೆಗೆದು ಹಾಕಲಾಗುತ್ತದೆ, ಆದರೆ ಒಂದು ಸಮಯದಲ್ಲಿ 20-30 ಲಿಚಿಗಳನ್ನು ತಿನ್ನಬಾರದು.
undefined
ಹೆಚ್ಚು ಲಿಚಿ ಸೇವಿಸಿದರೆ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಇದು ಆಯಾಸ, ಆಲಸ್ಯಕ್ಕೆ ಕಾರಣವಾಗಬಹುದು. ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಂಡರೆ, ವೈದ್ಯರನ್ನು ಕೇಳಿದ ನಂತರವೇ ಲಿಚಿ ತಿನ್ನಿರಿ.
undefined
ಸಂಧಿವಾತದಲ್ಲೂ ಲಿಚಿ ತಿನ್ನುವುದು ಒಳ್ಳೆಯದಲ್ಲಸಂಧಿವಾತ ಅಥವಾ ಮೂಳೆ ಸಂಬಂಧಿತ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಲಿಚಿಗಳನ್ನು ಮಿತವಾಗಿ ಸೇವಿಸಿ. ಅಲ್ಲದೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಲೂಪಸ್ನಂತಹ ಸ್ವಯಂ ನಿರೋಧಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಲಿಚಿ ಸೇವಿಸುವುದನ್ನು ತಪ್ಪಿಸಿ.
undefined
ಅಲರ್ಜಿಯ ಸಮಸ್ಯೆ ಇದ್ದರೆ ಲಿಚಿ ತಿನ್ನಬೇಡಿಯಾವುದೇ ರೀತಿಯ ಅಲರ್ಜಿ ಇದ್ದರೆ, ಲಿಚಿ ತಿನ್ನಬೇಡಿ. ಲಿಚಿ ಸೇವಿಸಿದ ನಂತರ ಚರ್ಮದ ಮೇಲೆ ತುರಿಕೆ, ಕೆಂಪು ಬಣ್ಣ ಕಾಣುತ್ತಿದ್ದರೆ, ಲಿಚಿ ತಿನ್ನಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
undefined
click me!