ಮಳೆಗಾಲದಲ್ಲಿ ಹಾಲು ಕುಡಿಯೋದು ಆರೋಗ್ಯಕ್ಕೆ ವಿಷ!

First Published Jun 30, 2023, 3:18 PM IST

ಮಳೆಗಾಲದಲ್ಲಿ ಹಾಲು ಕುಡಿಯಬಾರದು ಅನ್ನೋದನ್ನು ಕೇಳಿದ್ದೇವೆ. ಯಾಕಂದ್ರೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಲು ನಮ್ಮ ದೇಹಕ್ಕೆ ವಿಷವಾಗಿ ಪರಿಣಮಿಸುತ್ತಂತೆ. 
 

ಮನೆಯ ಹಿರಿಯರು ಮಳೆಗಾಲದಲ್ಲಿ ಹಾಲು ಕುಡಿಯಬಾರದು (drink milk during rainy season) ಎಂದು ಹೇಳಿರೋದನ್ನು ನೀವು ಕೇಳಿರಬಹುದು. ಆದರೆ ಮಳೆಗಾಲದಲ್ಲಿ ಹಾಲು ಕುಡಿಯೋದ್ರಿಂದ ಏನಾಗುತ್ತೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಜಾ ವಿಷ್ಯ ಅಂದ್ರೆ, ಮಳೆಗಾಲದಲ್ಲಿ ಹಾಲು ಕುಡಿಯುವುದರಿಂದ ಹೊಟ್ಟೆ ಹಾಳಾಗುತ್ತದೆ. ಇದು ಮಾತ್ರವಲ್ಲ, ಹಾಲಿನಿಂದ ಇಡೀ ಜೀರ್ಣಾಂಗ ವ್ಯವಸ್ಥೆಯನ್ನು (Digestive System) ಹಾಳು ಮಾಡುತ್ತದೆ. 
 

ಮಳೆಗಾಲದಲ್ಲಿ ಹಾಲು ಫೂಗ್ ವಿಷಕ್ಕೆ ಕಾರಣವಾಗಬಹುದು. ಇದೇ ಹಾಲನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು, ಆಮ್ಲೀಯತೆ (gastric) ಮತ್ತು ಹೊಟ್ಟೆ ನೋವು ಸಹ ಉಂಟಾಗಬಹುದು. ಅಷ್ಟೇ ಅಲ್ಲ ಈ ಋತುವಿನಲ್ಲಿ ಹಾಲು ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಹಾನಿಯಾಗುತ್ತದೆ. 
 

Latest Videos


ಮಳೆಗಾಲದಲ್ಲಿ ಹಾಲು ಫೂಗ್ ವಿಷಕ್ಕೆ ಕಾರಣವಾಗಬಹುದು. ಇದೇ ಹಾಲನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು, ಆಮ್ಲೀಯತೆ (gastric) ಮತ್ತು ಹೊಟ್ಟೆ ನೋವು ಸಹ ಉಂಟಾಗಬಹುದು. ಅಷ್ಟೇ ಅಲ್ಲ ಈ ಋತುವಿನಲ್ಲಿ ಹಾಲು ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಹಾನಿಯಾಗುತ್ತದೆ. 

ಬ್ಯಾಕ್ಟೀರಿಯಾ (bacteria) ಹೆಚ್ಚುತ್ತೆ ಅನ್ನೋವಾಗ ಹಸುಗಳು ಮತ್ತು ಎಮ್ಮೆಗಳ ಮೇವಿನಲ್ಲಿ ವಿಷಕಾರಿ ಕೀಟಗಳು ಇರುವ ಸಾಧ್ಯತೆ ಕೂಡ ಹೆಚ್ಚುತ್ತೆ. ಅವುಗಳನ್ನು ತಿನ್ನುವುದರಿಂದ ಪ್ರಾಣಿಗೆ ಸೋಂಕು ಉಂಟಾಗಬಹುದು. ಅದರ ನಂತರ ನೀವು ಹಾಲು ಕುಡಿಯುವ ಮೂಲಕ ಫುಡ್ ಪಾಯಿಸನ್ (poison) ಖಂಡಿತವಾಗಿಯೂ ಆಗುತ್ತೆ ಅಲ್ವಾ?

ಸ್ಟಮಕ್ ಅಪ್ಸೆಟ್ ಆಗಬಹುದು
ಈ ಸೀಸನ್ ನಲ್ಲಿ ಹಾಲು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ.ಜೀರ್ಣಕಾರಿ ಕಿಣ್ವಗಳಿಗೆ ಹಾನಿಯಾಗುತ್ತದೆ. ಇದು ಮಾತ್ರವಲ್ಲ, ಈ ಕಾರಣದಿಂದಾಗಿ ದೇಹದಲ್ಲಿ ಅನೇಕ ರೀತಿಯ ಪ್ರತಿಕ್ರಿಯೆಗಳು ಸಹ ಉಂಟಾಗುತ್ತವೆ. ನೀವು ಯಾವುದೇ ಅಹಾರ ಸೇವಿಸಿದರೆ, ಅದನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ, ಇದು ನಿಧಾನ ಚಯಾಪಚಯ ಕ್ರಿಯೆಗೆ (stomach upset) ಕಾರಣವಾಗುತ್ತದೆ. 

ಮಳೆಗಾಲದಲ್ಲಿ, ಪ್ರಾಣಿಗಳ ರೋಗ ಬರುವ ಭಯ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹಾಲು ಕುಡಿಯುವುದು ನಿಮ್ಮ ದೇಹಕ್ಕೆ ಅಪಾಯಕಾರಿ. ಆದ್ದರಿಂದ, ಅಂತಹ ಹವಾಮಾನದಲ್ಲಿ ಹಾಲು ಕುಡಿಯುವುದನ್ನು ತಪ್ಪಿಸಬೇಕು. ಮಕ್ಕಳಿಗಂತೂ ಹಾಲಿನ ಯಾವುದೇ ಉತ್ಪನ್ನವನ್ನು ಸಹ ನೀಡಬೇಡಿ. 

ಒಂದು ವೇಳೆ ನಿಮಗೆ ಪ್ರತಿದಿನವು ಹಾಲು ಬೇಕೇ ಬೇಕು ಎನ್ನೋದಾದರೆ ಹಾಲನ್ನು ಚೆನ್ನಾಗಿ ಬಿಸಿ ಮಾಡಿ ಮತ್ತು ಅದಕ್ಕೆ ಚಿಟಿಕೆ ಅರಿಶಿನವನ್ನು (turmeric milk) ಸೇರಿಸಿ ಕುಡಿಯಿರಿ. ಈ ಹಾಲು ನಿಮ್ಮ ದೇಹಕ್ಕೆ ವಿಷವಾಗುವುದಿಲ್ಲ. ಇದು ನಿಮ್ಮ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ. 
 

click me!