Heart Health : ಪರೀಕ್ಷೆಯ ಎಲ್ಲ ವರದಿ ಸಾಮಾನ್ಯವಾಗಿದ್ರೂ ಜನರು ಸಾಯ್ತಿದ್ದಾರೆ. ಹೃದಯಾಘಾತವಾಗ್ತಿದೆ. ಅದಕ್ಕೆ ಏನು ಮಾಡ್ಬೇಕು ಎನ್ನುವ ಜನರ ಸಾಮಾನ್ಯ ಹಾಗೂ ಆತಂಕಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ.
ನಾಗ್ಪುರದ ಪ್ರಸಿದ್ಧ ನರಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಪಖ್ಮೋಡೆ ಡಿಸೆಂಬರ್ 31 ರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಕೇಸ್ ನಲ್ಲಿರುವ ಅಚ್ಚರಿ ವಿಷ್ಯ ಅಂದ್ರೆ ಮೂರ್ನಾಲ್ಕು ದಿನಗಳ ಹಿಂದೆ ಚಂದ್ರಶೇಖರ್ ಇಸಿಜಿ ಪರೀಕ್ಷೆ ಮಾಡಿಸಿದ್ದರು. ಈ ಇಸಿಜಿ ಪರೀಕ್ಷೆ ಫಲಿತಾಂಶ ನಾರ್ಮಲ್ ಬಂದಿತ್ತು. ಆದ್ರೆ ಡಿಸೆಂಬರ್ 31ರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ, ಚಿಕಿತ್ಸೆ ಫಲ ನೀಡಲಿಲ್ಲ. ಇವರ ನಿಧನ ಜನರಲ್ಲಿ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ. ಇಸಿಜಿ, ಶುಗರ್, ಬಿಪಿ, ಥ್ರೆಡ್ ಮಿಲ್ ಪರೀಕ್ಷೆಯಿಂದ್ಲೂ ಹೃದಯದ ಸಮಸ್ಯೆ ಗೊತ್ತಾಗೋದಿಲ್ವ? ಹಾಗಿದ್ರೆ ಏನು ಮಾಡ್ಬೇಕು?
27
ಹೃದಯದ ಬಗ್ಗೆ ತಪ್ಪು ಕಲ್ಪನೆ
ನಮ್ಮಲ್ಲಿ ಹೆಚ್ಚಿನವರು ಇಸಿಜಿ, ಸಕ್ಕರೆ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಾಮಾನ್ಯವಾಗಿದ್ದರೆ, ನಾವು ಸುರಕ್ಷಿತರಾಗಿದ್ದೇವೆ ಎಂದು ಭಾವಿಸುತ್ತೇವೆ. ನಾವು ವ್ಯಾಯಾಮ ಮಾಡುತ್ತೇವೆ, ಚೆನ್ನಾಗಿ ತಿನ್ನುತ್ತೇವೆ ಮತ್ತು ವಿಶ್ರಾಂತಿ ಪಡೆಯುತ್ತೇವೆ. ಆದರೆ ಹೃದ್ರೋಗವನ್ನು ಯಾವಾಗಲೂ ದಿನನಿತ್ಯದ ಪರೀಕ್ಷೆಗಳಿಂದ ಪತ್ತೆ ಮಾಡಲು ಸಾಧ್ಯವಿಲ್ಲ.
37
ಇಸಿಜಿಯಿಂದ ಏನು ಪತ್ತೆಯಾಗುತ್ತೆ?
ಇಸಿಜಿ ಒಂದು ನಿರ್ದಿಷ್ಟ ಕ್ಷಣದಲ್ಲಿ ಹೃದಯದ ಎಲೆಕ್ಟ್ರಿಕಲ್ ಚಟುವಟಿಕೆಯನ್ನು ಮಾತ್ರ ತೋರಿಸುತ್ತದೆ. ಇದು ಹೃದಯದ ಅಪಧಮನಿಗಳಲ್ಲಿ ಅಡಗಿರುವ ಅಡೆತಡೆಗಳನ್ನು ಬಹಿರಂಗಪಡಿಸುವುದಿಲ್ಲ. ಒಬ್ಬ ವ್ಯಕ್ತಿಗೆ ಹೃದಯದಲ್ಲಿ ಸಮಸ್ಯೆ ಇದ್ರೂ ಇಸಿಜಿಯಲ್ಲಿ ಸಾಮಾನ್ಯದಂತೆ ತೋರುತ್ತದೆ.
ಹೃದಯ ಸಮಸ್ಯೆಯಲ್ಲಿ ಒತ್ತಡವು ದೊಡ್ಡ ಪಾತ್ರವನ್ನು ವಹಿಸುತ್ತದೆ. ದೀರ್ಘ ಗಂಟೆಗಳ ಕಾಲ ಕೆಲಸ, ಕಳಪೆ ನಿದ್ರೆ, ನಿರಂತರ ಒತ್ತಡ ಕ್ರಮೇಣ ಹೃದಯವನ್ನು ಹಾನಿಗೊಳಿಸುತ್ತದೆ. ಒತ್ತಡದ ಹಾರ್ಮೋನುಗಳು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ವರ್ಷಗಳವರೆಗೆ ಹೆಚ್ಚಿಸುತ್ತದೆ. ಇದು ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ. ಮೇಲ್ನೋಟಕ್ಕೆ ಫಿಟ್ ಆಗಿ ಕಾಣುವ ಜನರಲ್ಲಿಯೂ ಸಹ ಪ್ಲೇಕ್ ರಚನೆಯನ್ನು ವೇಗಗೊಳಿಸುತ್ತದೆ. ಕೆಲವೊಮ್ಮೆ, ಒತ್ತಡದ ಹಠಾತ್ ಉಲ್ಬಣವು ಅಸ್ತಿತ್ವದಲ್ಲಿರುವ ಪ್ಲೇಕ್ ಅನ್ನು ಛಿದ್ರಗೊಳಿಸುತ್ತದೆ. ಹೃದಯಾಘಾತಕ್ಕೆ ಕಾರಣವಾಗುತ್ತದೆ.
57
ಬೆಳಿಗ್ಗೆ ಅಪಾಯಕಾರಿ
ಬೆಳಿಗ್ಗೆ 3 ರಿಂದ 6 ಗಂಟೆಯ ನಡುವೆ, ದೇಹವು ಹೆಚ್ಚು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ. ರಕ್ತದೊತ್ತಡ ಹೆಚ್ಚಾಗುತ್ತದೆ. ಅಪಧಮನಿಗಳು ಸಂಕುಚಿತಗೊಳ್ಳುತ್ತವೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚು ಸುಲಭವಾಗಿ ರೂಪುಗೊಳ್ಳುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ಹೃದಯಾಘಾತಗಳು ಸಂಭವಿಸುವುದು ಹೆಚ್ಚು.
67
ನಿರ್ಲಕ್ಷ್ಯ
ವೈದ್ಯರು ಸಹ ಮುಂಚಿನ ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ. ಆಯಾಸ, ಸೌಮ್ಯ ಎದೆ ನೋವು, ವಾಕರಿಕೆ ಅಥವಾ ತಲೆತಿರುಗುವಿಕೆಯನ್ನು ಹೆಚ್ಚಾಗಿ ಸುಸ್ತೆಂದು ಭಾವಿಸುತ್ತಾರೆ. ವ್ಯಾಯಾಮ ಮಾಡುವ ಸಾಮರ್ಥ್ಯ ಕಡಿಮೆ ಆಗುವುದು, ಹಠಾತ್ ಸುಸ್ತು, ದಿನನಿತ್ಯದ ಕೆಲಸಗಳಿಂದ ಅಸಾಮಾನ್ಯ ಆಯಾಸ, ವಿಭಿನ್ನ ಅಥವಾ ಹೊಸದಾಗಿ ಕಾಣುವ ಎದೆಯುರಿ ತರಹದ ನೋವು, ಉಸಿರಾಟದ ತೊಂದರೆ, ಅತಿ ಹೆಚ್ಚು ಬೆವರು, ಆತಂಕ ಅಥವಾ ಚಡಪಡಿಕೆ ಇದರ ಲಕ್ಷಣವಾಗಿದೆ. ಎಲ್ಲರಲ್ಲೂ ಇದು ಕಾಣಿಸಿಕೊಳ್ಳುತ್ತದೆ ಎಂದಲ್ಲ. ಹೃದಯ ಕಾಯಿಲೆ ಅಥವಾ ಹಠಾತ್ ಸಾವಿನ ಹಿಂದೆ ಕುಟುಂಬದ ಇತಿಹಾಸ ಕೂಡ ಇದೆ.
77
ಯಾವೆಲ್ಲ ಪರೀಕ್ಷೆ ಮುಖ್ಯ
ಇಸಿಜಿ ಪರೀಕ್ಷೆಯಿಂದ ಹೃದಯದಲ್ಲಿ ಅಡಗಿರುವ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಟ್ರೋಪೋನಿನ್ನಂತಹ ರಕ್ತ ಪರೀಕ್ಷೆಗಳು ಹೆಚ್ಚು ಸಹಾಯಕವಾಗುತ್ತವೆ. ಇದಲ್ಲದೆ ಲಿಪೊಪ್ರೋಟೀನ್(a) ಪರೀಕ್ಷೆ ಮಾಡಿಸುವುದು ಬಹಳ ಮುಖ್ಯ. ಲಿಪೊಪ್ರೋಟೀನ್(a) ಒಂದು ವಿಶೇಷ ರೀತಿಯ ಕೊಲೆಸ್ಟ್ರಾಲ್ ಕಣವಾಗಿದ್ದು ಅದು ರಕ್ತದಲ್ಲಿನ ಅಪಧಮನಿಗಳನ್ನು ಮೌನವಾಗಿ ಹಾನಿಗೊಳಿಸುತ್ತದೆ. ಇದನ್ನು ದಿನನಿತ್ಯದ ಕೊಲೆಸ್ಟ್ರಾಲ್ ಪರೀಕ್ಷೆಗಳಲ್ಲಿ ಸೇರಿಸಲಾಗಿಲ್ಲ. ವ್ಯಕ್ತಿಯ LDL ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಸಾಮಾನ್ಯವಾಗಿದ್ದರೂ ಕೆಲವರು ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಾರೆ. Lp(a) ಇದಕ್ಕೆ ಪ್ರಮುಖ ಕಾರಣವಾಗಬಹುದು. ಪರೀಕ್ಷೆಯಲ್ಲಿ Lp(a) ಮಟ್ಟ ಹೆಚ್ಚಿದ್ದರೆ ಭಯಪಡುವ ಅಗತ್ಯವಿಲ್ಲ. ವೈದ್ಯರ ಸಲಹೆಯನ್ನು ಅನುಸರಿ, ಜೀವನಶೈಲಿಯಲ್ಲಿ ಮಾರ್ಪಾಡು ಮಾಡ್ಕೊಂಡು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.