ನಾವು ದೇಹದ ಇತರ ಭಾಗಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸುತ್ತೇವೆ, ಆದರೆ ಹೊಕ್ಕುಳಿನ ನೈರ್ಮಲ್ಯದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ನಾಭಿಯಿಂದ ಬರುವ ವಾಸನೆಯೂ ಕೆಲವೊಮ್ಮೆ ತೊಂದರೆ ನೀಡುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಅಂಬಿಲಿಕಸ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇದನ್ನು ಬೆಲ್ಲಿ ಬಟನ್ (belly button) ಎಂದೂ ಕರೆಯಲಾಗುತ್ತದೆ. ಹೊಕ್ಕುಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ತಿಳಿದಿಲ್ಲದ ಅನೇಕ ಜನರು ನಮ್ಮ ಸುತ್ತಲೂ ಇದ್ದಾರೆ. ಆದರೆ ನಾಭಿಯಿಂದ ಬರುವ ದುರ್ವಾಸನೆಯು ಅದರಲ್ಲಿನ ಸೋಂಕಿನಿಂದ ಉಂಟಾಗುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿ ಪ್ರಕಾರ, ದೇಹದ ವಿವಿಧ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳಿರುವಂತೆಯೇ, ನಾಭಿಯಲ್ಲಿಯೂ ಬ್ಯಾಕ್ಟೀರಿಯಾದ (Bacteria) ಅಪಾಯವಿದೆ. ಈ ಕಾರಣದಿಂದಾಗಿ ಹೊಕ್ಕುಳಿನ ಸುತ್ತಲಿನ ಸ್ಥಳಗಳಲ್ಲಿ ಉರಿ, ತುರಿಕೆ ಅಥವಾ ದದ್ದುಗಳು ಉಂಟಾಗಬಹುದು. ಹೊಕ್ಕುಳಿನ ಸುತ್ತಲಿನ ತೇವಾಂಶವು ಸೋಂಕನ್ನು ವೇಗವಾಗಿ ಹರಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇತರ ಅನೇಕ ರೀತಿಯ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ನಾಭಿಯ ವಾಸನೆ ಮತ್ತು ನಾಭಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಹೇಗೆ ದೂರವಿಡುವುದು, ತಿಳಿಯಿರಿ.
ಹೊಕ್ಕುಳಲ್ಲಿ ಕೆಟ್ಟ ವಾಸನೆ
ನಾಭಿಯಲ್ಲಿ ಸಂಭವಿಸುವ ಈ ರೋಗಲಕ್ಷಣಗಳು ಮತ್ತು ಸೋಂಕನ್ನು (infection) ನಿರ್ಲಕ್ಷಿಸಬಾರದು, ಈ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಅವು ಮತ್ತಷ್ಟು ಗಂಭೀರ ಸ್ವರೂಪವನ್ನು ಪಡೆಯುತ್ತದೆ. ಹೊಕ್ಕುಳಿನಲ್ಲಿನ ಸೋಂಕು ಹೊಕ್ಕುಳಿನಿಂದ ಬಿಳಿ, ಹಳದಿ ಅಥವಾ ಹಸಿರು ವಿಸರ್ಜನೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಊತ, ಸುತ್ತಮುತ್ತಲಿನ ಚರ್ಮದ ಶುಷ್ಕತೆ, ತುರಿಕೆ ಮತ್ತು ನಾಭಿಯ ಕೆಂಪಾಗುವಿಕೆಯಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಹೊಕ್ಕುಳಿನ ಸೋಂಕಿನಿಂದಾಗಿ ಜ್ವರವೂ ಬರಬಹುದು.
ಹೊಕ್ಕುಳಿನ ವಾಸನೆ ತಪ್ಪಿಸಲು ಮನೆಮದ್ದು
ಹೊಕ್ಕುಳಿನ ವಾಸನೆಯನ್ನು ನಿವಾರಿಸಲು ಮನೆಮದ್ದುಗಳು (home remedies) ಸಹ ಬಹಳ ಉಪಯುಕ್ತ. ನಾಭಿಯ ಸುತ್ತಲೂ ನಿಂಬೆ ರಸವನ್ನು ಹಚ್ಚುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಬಹುದು. ಇದಕ್ಕಾಗಿ, ನಾಭಿಯ ಸುತ್ತಲೂ ಹಚ್ಚಿ, ನಂತರ ತಣ್ಣೀರಿನಿಂದ ತೊಳೆಯಿರಿ. ಈ ವಿಧಾನವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೊಕ್ಕುಳಿನ ಸೋಂಕಿನಿಂದ ಚರ್ಮವು ಒಣಗಿದವರಿಗೆ, ತೆಂಗಿನ ಎಣ್ಣೆಯನ್ನು ಹಚ್ಚಿ. ಇದರಿಂದ ಒಣ ಚರ್ಮ ನಿವಾರಣೆಯಾಗುತ್ತದೆ, ಅಲ್ಲದೇ ಇದು ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ಸೋಂಕನ್ನು ಸಹ ಕಡಿಮೆ ಮಾಡುತ್ತದೆ.
ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ
ಹೊಕ್ಕುಳಿನಲ್ಲಿ ದುರ್ವಾಸನೆಯನ್ನು ತಪ್ಪಿಸಲು, ಮೊದಲನೆಯದಾಗಿ, ನೀವು ಅದರ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಇದಕ್ಕಾಗಿ, ಸ್ನಾನ ಮಾಡುವಾಗ ಯಾವಾಗಲೂ ಬ್ಯಾಕ್ಟೀರಿಯಾ ವಿರೋಧಿ ಬಾಡಿ ವಾಶ್ (Body Wash) ಅಥವಾ ಸೋಪ್ ಬಳಸಿ. ಹೊಕ್ಕುಳನ್ನು ಸ್ವಚ್ಛಗೊಳಿಸಲು, ನಿಮ್ಮ ಬೆರಳನ್ನು ಸ್ವಚ್ಛವಾದ ಬಟ್ಟೆಯಿಂದ ಸುತ್ತಿ ಮತ್ತು ಹಗುರವಾದ ಕೈಗಳಿಂದ ಹೊಕ್ಕುಳನ್ನು ಸ್ವಚ್ಛಗೊಳಿಸಿ. ಉಗುರುಗಳನ್ನು ತಾಗಿಸದಂತೆ ಎಚ್ಚರಿಕೆ ವಹಿಸಿ. ಆ ಜಾಗವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ. ಇದಲ್ಲದೆ, ಬಿಸಿ ನೀರಿನಲ್ಲಿ ಉಪ್ಪನ್ನು ಸೇರಿಸಿ, ಅದರಲ್ಲಿ ಹತ್ತಿಯನ್ನು ಅದ್ದಿ ಮೂಲಕ ಹೊಕ್ಕುಳನ್ನು ಸ್ವಚ್ಛಗೊಳಿಸಬಹುದು.
ಹೊಕ್ಕುಳಿನ ವಾಸನೆಗೆ ಚಿಕಿತ್ಸೆ
ನಾಭಿಯಲ್ಲಿನ ಸೋಂಕು (Infection) ಮತ್ತು ಅದರಿಂದ ಬರುವ ವಾಸನೆಗೆ ಚಿಕಿತ್ಸೆ ನೀಡಲು ಆಂಟಿಫಂಗಲ್ ಕ್ರೀಮ್ (antifungal cream) ತುಂಬಾ ಸಹಾಯಕವಾಗಿದೆ. ಆಂಟಿಫಂಗಲ್ ಕ್ರೀಮ್ ಅಥವಾ ಆಂಟಿಫಂಗಲ್ ಪುಡಿಯನ್ನು ಬಳಸಲು ನಿಮ್ಮ ವೈದ್ಯರಿಂದ ಸಲಹೆ ಪಡೆಯೋದು ಮುಖ್ಯ. ಕೆಲವು ಜನರಲ್ಲಿ, ಈ ವಾಸನೆಯು ಸೆಬಾಸಿಯಸ್ ಸಿಸ್ಟ್ ಸೋಂಕಿನಿಂದ ಉಂಟಾಗುತ್ತದೆ, ಈ ಸಂದರ್ಭದಲ್ಲಿ ವೈದ್ಯರು ಔಷಧಿಗಳು, ಚುಚ್ಚುಮದ್ದು ಅಥವಾ ಲೇಸರ್ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಬಹುದು.
ಯಾರು ಹೊಕ್ಕುಳಿನ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ
ನಾಭಿಯಲ್ಲಿ ಸೋಂಕು ಮತ್ತು ದುರ್ವಾಸನೆಯ ಸಮಸ್ಯೆ ಯಾರಿಗಾದರೂ ಸಂಭವಿಸಬಹುದು. ಆದರೆ ಮಧುಮೇಹ ರೋಗಿಗಳು ಮತ್ತು ಬೆಲ್ಲಿ ಬಟನ್ ಪಿಯರ್ಸಿಂಗ್ (belly button pearcing) ಮಾಡಿದವರು ಈ ಸಮಸ್ಯೆಯ ಹೆಚ್ಚು ಅಪಾಯದಲ್ಲಿದ್ದಾರೆ. ಈ ಜನರು ಅದರ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಸಕ್ಕರೆ ಮಟ್ಟ ಹೆಚ್ಚಾದಂತೆ, ನಾಭಿಯ ವಾಸನೆ ಮತ್ತು ಇತರ ಸಮಸ್ಯೆಗಳೂ ಹೆಚ್ಚಾಗುತ್ತವೆ.