ಸೆಕ್ಸ್ ಪವರ್ ಹೆಚ್ಚಿಸೋದ್ರಿಂದ, ಕ್ಯಾನ್ಸರ್ ನಿವಾರಿಸೋವರೆಗೂ… ಶತಾವರಿ ಬೆಸ್ಟ್ ಔಷಧಿ

First Published | Mar 15, 2023, 5:32 PM IST

ಶತಾವರಿ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಅನ್ನೋದನ್ನು ಬಹಳ ಹಿಂದಿನಿಂದ ಕೇಳಿಕೊಂಡು ಬಂದಿದ್ದೇವೆ. ಆದರೆ ಶತಾವರಿ ತಿನ್ನುವ ಮೂಲಕ ಪುರುಷರು ಸಹ ಪ್ರಯೋಜನಗಳನ್ನು ಪಡೆಯುತ್ತಾರೆ ಅನ್ನೋದು ನಿಮಗೆ ಗೊತ್ತೆ? ಪುರುಷರಿಗೆ ಶತಾವರಿಯ ಪ್ರಯೋಜನಗಳು ಯಾವುವು ಅನ್ನೋದರ ಬಗ್ಗೆ ತಿಳಿಯೋಣ. 
 

ಶತಾವರಿ (Shatavari) ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಶತಾವರಿ ಪ್ರೋಟೀನ್, ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಇದಲ್ಲದೆ, ಶತಾವರಿಯಲ್ಲಿ ಜೀವಸತ್ವಗಳು ಸಹ ಕಂಡುಬರುತ್ತವೆ. ಶತಾವರಿ ಮಹಿಳೆಯರಿಗೆ ಪ್ರಯೋಜನಕಾರಿ. ಇದರೊಂದಿಗೆ, ಶತಾವರಿಯನ್ನು ಸೇವಿಸುವ ಮೂಲಕ ಪುರುಷರು ಸಹ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರಿಂದ ಪುರುಷರಿಗೆ ಏನಿದೆ ಪ್ರಯೋಜನ ಎಂದು ಯೋಚ್ನೆ ಮಾಡ್ತಿದ್ದೀರಾ?

ಶತಾವರಿ ಸೇವನೆಯು ಪುರುಷರ ಲೈಂಗಿಕ ಆರೋಗ್ಯವನ್ನು  (sexual health) ಸುಧಾರಿಸುತ್ತದೆ. ಅಲ್ಲದೆ, ಶತಾವರಿ ತಿನ್ನುವುದರಿಂದ ಪುರುಷರ ಸ್ಥೂಲಕಾಯವನ್ನು ಕಡಿಮೆ ಮಾಡಬಹುದು. ಶತಾವರಿ ಪುರುಷರ ಫಲವತ್ತತೆ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸುತ್ತದೆ. ಆದ್ದರಿಂದ ಪುರುಷರಿಗೆ ಶತಾವರಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ-

Tap to resize

ಪುರುಷರಿಗೆ ಶತಾವರಿಯ ಪ್ರಯೋಜನಗಳು
ಭೌತಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತೆ
ಶತಾವರಿಯ ಬಳಕೆಯು ಪುರುಷರ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಇದು ಅವರ ಲೈಂಗಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವ ಮೊದಲು ಶತಾವರಿಯನ್ನು ಲಘು ಉಗುರುಬೆಚ್ಚಗಿನ ಹಾಲಿನೊಂದಿಗೆ ಸೇವಿಸುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಇದು ದೈಹಿಕ ದೌರ್ಬಲ್ಯವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಶತಾವರಿ ಮತ್ತು ಹಾಲನ್ನು (shatavari with milk) ನಿಯಮಿತವಾಗಿ ಸೇವಿಸಬಹುದು. 

ಸ್ಪಪ್ನ ಸ್ಖಲನ ನಿವಾರಿಸುತ್ತೆ (Nocturnal emission)
ಶತಾವರಿ ಪುರುಷರಲ್ಲಿ ಸ್ಪಪ್ನ ಸ್ಖಲನ ಸಮಸ್ಯೆಯನ್ನು ತೊಡೆದುಹಾಕಲು ಪ್ರಯೋಜನಕಾರಿ. ಇದಕ್ಕಾಗಿ, ಶತಾವರಿ ಪುಡಿಯನ್ನು ತೆಗೆದುಕೊಳ್ಳಿ. ಇದನ್ನು ಸ್ವಲ್ಪ ಹಾಲಿನೊಂದಿಗೆ ಬೆರೆಸಿ ಸೇವಿಸಿ. ಇದು ಸ್ಪಪ್ನ ಸ್ಖಲನ ಸಮಸ್ಯೆಯಿಂದ ಪ್ರಯೋಜನ ನೀಡುತ್ತೆ. ಇದಲ್ಲದೆ, ಇದು ಇತರ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತೆ.. 

ವಯಸ್ಸಾಗುವಿಕೆಯ ಪರಿಣಾಮವನ್ನು ಕಡಿಮೆ ಮಾಡುತ್ತೆ
ಶತಾವರಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಗ್ಲುಟಾಥಿಯೋನ್ ಎಂಬ ಅಂಶಗಳಿವೆ, ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಪುರುಷರಲ್ಲಿ ಸುಕ್ಕುಗಳು ಮತ್ತು ದೈಹಿಕ ದೌರ್ಬಲ್ಯದ (weakness) ಸಮಸ್ಯೆ ತೆಗೆದು ಹಾಕುವಲ್ಲಿ ಪರಿಣಾಮಕಾರಿ. ಇದಲ್ಲದೆ, ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. 

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತೆ
ಶತಾವರಿ ಕಡಿಮೆ ವೀರ್ಯಾಣುಗಳ ಸಂಖ್ಯೆಯ (sperm count) ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಪುರುಷರಿಗೆ ಸಹ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಇದು ಬಂಜೆತನದ ಸಮಸ್ಯೆಯನ್ನು ತೆಗೆದುಹಾಕಬಹುದು. ರಾತ್ರಿ ಮಲಗುವ ಮೊದಲು ಶತಾವರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ನಿಮ್ಮ ವೀರ್ಯಾಣುಗಳ ಸಂಖ್ಯೆ ತುಂಬಾ ಕಡಿಮೆಯಿದ್ದರೆ, ಒಮ್ಮೆ ತಜ್ಞರಿಂದ ಸರಿಯಾದ ಸಲಹೆ ಪಡೆಯಿರಿ.

ಶತಾವರಿ ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ
ಶತಾವರಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ, ಕ್ಯಾನ್ಸರ್ (cancer) ನಂತಹ ಮಾರಣಾಂತಿಕ ರೋಗವನ್ನು ನಿವಾರಿಸಬಹುದು. ಇದು ಆಂಟಿಕಾನ್ಸರ್ ಗುಣಲಕ್ಷಣಗಳನ್ನು ಹೊಂದಿದೆ, ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ. 

ಹ್ಯಾಂಗೋವರ್ ಕಡಿಮೆ ಮಾಡುತ್ತೆ
ಶತಾವರಿ ಸೇವಿಸುವ ಮೂಲಕ ನೀವು ಹ್ಯಾಂಗೋವರ್ ಸಮಸ್ಯೆಯನ್ನು (hangover problem) ನಿವಾರಿಸಬಹುದು. ವಾಸ್ತವವಾಗಿ, ಶತಾವರಿಯಲ್ಲಿ ಅಮೈನೋ ಆಮ್ಲಗಳು ಕಂಡುಬರುತ್ತವೆ, ಇದು ಆಲ್ಕೋಹಾಲ್ ವ್ಯಸನವನ್ನು ಕಡಿಮೆ ಮಾಡುತ್ತದೆ. ಗಾಂಜಾ ತಿನ್ನುವ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ಹೃದಯರಕ್ತನಾಳದ ಸಮಸ್ಯೆಗಳನ್ನು ಸಹ ನಿವಾರಿಸುತ್ತೆ..

Latest Videos

click me!