ಇಲಿಗಳ ಕಾಟ ಹೆಚ್ಚಾಗ್ತಿದ್ಯಾ? ಓಡಿಸಲು ಇಲ್ಲಿದೆ ಅದ್ಭುತ ಹ್ಯಾಕ್ಸ್

First Published | Mar 15, 2023, 5:21 PM IST

ಇಲಿಗಳು ಮನೆಗೆ ಆಹ್ವಾನಿಸದೇ ಬರೋ ಅತಿಥಿಗಳಂತೆ, ಅವು ರೋಗ ಮತ್ತು ಸೋಂಕನ್ನು ತಮ್ಮೊಂದಿಗೆ ತರುತ್ತವೆ. ಈ ಇಲಿಗಳನ್ನು ಮನೆಯಿಂದ ಓಡಿಸಲು ನೀವು ಸಹ ಹಲವಾರು ಟ್ರಿಕ್ಸ್ ಗಳನ್ನು ಟ್ರೈ ಮಾಡಿ ಸೋತಿರಬಹುದು ಅಲ್ವಾ? ಈ ಬಾರಿ ಇಲಿಗಳನ್ನು ಓಡಿಸಲು ಅದ್ಭುತ ಹಾಕ್ಸ್ ಬಗ್ಗೆ ಇಲ್ಲಿ ತಿಳಿಸಿದ್ದೇವೆ, ತಿಳಿದುಕೊಳ್ಳಿ.

ಇಲಿಗಳನ್ನು ಗಣೇಶನ(Lord Ganesh) ವಾಹನ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಜನರು ಕೆಲವೊಂದು ದೇವಾಲಯಗಳಲ್ಲಿ ಇದನ್ನು ಪೂರ್ಣ ಗೌರವ ಮತ್ತು ಪೂಜ್ಯಭಾವದಿಂದ ಪೂಜಿಸುತ್ತಾರೆ. ಆದರೆ ದೇವರ ಈ ವಾಹನ ಮನೆಗೆ ಪ್ರವೇಶಿಸಿದಾಗ, ಅವು ನಮ್ಮ ಜೀವನದ ಶತ್ರುವಾಗುತ್ತೆ. ಅದನ್ನು ಓಡಿಸಲು, ಅದರ ಗೂಡಿನಲ್ಲಿ ವಿಷ ಮತ್ತು ಮನೆಯ ಮೂಲೆಗಳಲ್ಲಿ ಬ್ರೆಡ್ ಹಾಕಿ ಹಿಡಿಯಲು ಟ್ರೈ ಮಾಡ್ತಾರೆ. 

ಇಲಿಗಳು(Rat) ಮನೆಯ ಎಲ್ಲಾ ವಸ್ತುಗಳನ್ನು ನಾಶಪಡಿಸುತ್ತವೆ ಎಂಬುದು ನಿಜ. ಅವು ಆಹಾರ ಪದಾರ್ಥಗಳನ್ನು ತಿನ್ನುತ್ತೆ. ಸೋಫಾ ಮತ್ತು ಎಲೆಕ್ಟ್ರಿಕ್ ವೈರ್ ಸಹ ಅವುಗಳ ಹಲ್ಲುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಸಾವಿರಾರು ರೂಪಾಯಿ ಮೌಲ್ಯದ ಸರಕುಗಳನ್ನು ಅವು ನಾಶಮಾಡಿದನ್ನು ನೋಡಿ, ಯಾವುದೇ ವ್ಯಕ್ತಿಯ ತನ್ನ ಕಂಟ್ರೋಲ್  ಕಳೆದುಕೊಳ್ಳುತ್ತಾನೆ. ಆದರೆ ಇಲಿಗಳನ್ನು ತೊಡೆದುಹಾಕಲು ಅವುಗಳನ್ನು ಕೊಲ್ಲುವುದು ಸರಿಯಲ್ಲ. ಪಂಜರ ಮತ್ತು ವಿಷವಿಲ್ಲದೆ ನೀವು ಅವುಗಳನ್ನು ಸುಲಭವಾಗಿ ಮನೆಯಿಂದ ತೆಗೆದುಹಾಕಬಹುದು.

Tap to resize

ಇಲಿಗಳನ್ನು ತೆಗೆದುಹಾಕಲು ಕೆಲವೊಂದು ರಾಮಬಾಣ ಪರಿಹಾರಗಳನ್ನು ಇಲ್ಲಿ ಹೇಳಲಾಗಿದೆ, ಅವುಗಳನ್ನು ಪಾಲಿಸಿದ್ರೆ ಇಲಿಗಳು ಈ ಪ್ರಯತ್ನದ ಎರಡನೇ ದಿನದಂದೇ ನಿಮ್ಮ ಮನೆಯಿಂದ ಓಡಿಹೋಗುತ್ತೆ. ಒಮ್ಮೆ ನೀವೇ ಟ್ರೈ ಮಾಡಿ ನೋಡಿ.

ಪುದೀನಾ ಸ್ಪ್ರೇ(Mint spray) ಬಳಸಿ
ಪುದೀನಾ ಸ್ಪ್ರೇ ಇಲಿಗಳನ್ನು ದೂರವಿಡಲು ಪರಿಣಾಮಕಾರಿ ಮಾರ್ಗವಾಗಿದೆ. ಇಲಿಗಳು ಅದರ ವಾಸನೆಯನ್ನು ಇಷ್ಟಪಡೋದಿಲ್ಲ. ಈ ಕಾರಣದಿಂದಾಗಿ, ಅವು ತಕ್ಷಣ ಆ ಜಾಗದಿಂದ ಓಡಿಹೋಗುತ್ತೆ. ನಿಮ್ಮ ಮನೆಗಳಲ್ಲಿ ಹೆಚ್ಚು ಇಲಿಗಳಿದ್ದರೆ, ಅವುಗಳ ಮೇಲೆ ಪುದೀನಾ ಸ್ಪ್ರೇ ಮಾಡಿ . ಕ್ರಮೇಣ ಎಲ್ಲಾ ಇಲಿಗಳು ಮಾಯವಾಗೋದನ್ನು ನೀವು ನೋಡುತ್ತೀರಿ.

ಕಡಲೆ ಹಿಟ್ಟಿನೊಂದಿಗೆ (Besan) ತಂಬಾಕನ್ನು ಮಿಶ್ರಣ ಮಾಡಿ
ಇಂದಿನ ಕಾಲದಲ್ಲಿ, ತಂಬಾಕಿನ ಬಳಕೆಯು ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕ. ಆದರೆ ಮನೆಯಲ್ಲಿ ಇಲಿಯಿಂದ ನೀವು ತೊಂದರೆಗೀಡಾಗಿದ್ದರೆ, ಅದು ನಿಮಗೆ ಸಹಾಯಕ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಆ ಬಗ್ಗೆ ಟ್ರಿಕ್ಸ್… 

ತಂಬಾಕಿನಲ್ಲಿ ಅನೇಕ ಮಾದಕವಸ್ತುಗಳಿವೆ. ಈ ಕಾರಣದಿಂದಾಗಿ ಇಲಿಗಳು ಅದನ್ನು ತಿಂದ ನಂತರ ಅಸಮಾಧಾನಗೊಳ್ಳುತ್ತವೆ ಮತ್ತು ಮನೆಯಿಂದ ಹೊರಗೆ ಓಡಿ ಹೋಗುತ್ತೆ. ಇಲಿಗಳು ಇದನ್ನು ತಿನ್ನಲು, ಅದನ್ನು ಕಡಲೆ ಹಿಟ್ಟು ಮತ್ತು ಸ್ವಲ್ಪ ತುಪ್ಪದೊಂದಿಗೆ(Ghee) ಬೆರೆಸಿ ಅವುಗಳು ತಿನ್ನೋ ಜಾಗದಲ್ಲಿ ಇರಿಸಿ. ನಂತರ ಎಲ್ಲಾ ಇಲಿಗಳು ಏಕಕಾಲದಲ್ಲಿ ಹೇಗೆ ಓಡಿಹೋಗುತ್ತೆ ನೀವೇ ನೋಡಿ.

ಆಲಂ(Alum) ಸ್ಪ್ರೇ ಮಾಡಿ
ಇಲಿಗಳನ್ನು ಓಡಿಸಲು ಆಲಂ ಬೆಸ್ಟ್ ಉಪಾಯವಾಗಿದೆ. ಇಲಿಗಳು ಅಲಮ್ ಇಷ್ಟಪಡೋದಿಲ್ಲ. ಹಾಗಾಗಿ, ನೀವು ಅಲಮ್ ಪುಡಿಯ ನೀರು ತಯಾರಿಸಬಹುದು ಮತ್ತು ಅದನ್ನು ಸ್ಪ್ರೇ ಮಾಡಬಹುದು. ಇದು ಇಲಿಗಳು ಆ ಸ್ಥಳವನ್ನು ತೊರೆಯಲು ಕಾರಣವಾಗುತ್ತೆ.
 

ಕೆಂಪು ಮೆಣಸಿನಿಂದ(Red chilli powder) ಇಲಿಗಳನ್ನು ಓಡಿಸಿ
ಮನೆಯಲ್ಲಿ ಇಲಿಗಳು ಹೆಚ್ಚು ಓಡಾಡೋ ಸ್ಥಳಗಳಲ್ಲಿ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿ. ಈ ಕಾರಣದಿಂದ, ಇಲಿಗಳು ಮತ್ತೆ ಆ ಸ್ಥಳಕ್ಕೆ ಬರಲು ಧೈರ್ಯ ಮಾಡೋದಿಲ್ಲ. ಇದರ ಘಾಟು ವಾಸನೆಗೆ ಹೆದರಿ ಇಲಿಗಳು ಅಲ್ಲಿಂದ ಓಡಿ ಹೋಗುತ್ತವೆ.

ಕರ್ಪೂರವನ್ನು(Camphor) ಪ್ರತಿ ಮೂಲೆಯಲ್ಲಿ ಇರಿಸಿ
ಪುದೀನಾ ಮತ್ತು ಅಲುಮ್ ನಂತೆ, ಇಲಿಗಳು ಕರ್ಪೂರದ ವಾಸನೆಯನ್ನು ಇಷ್ಟಪಡೋದಿಲ್ಲ. ಇದು ಅವುಗಳಿಗೆ ಉಸಿರುಗಟ್ಟುವಂತೆ ಮಾಡುತ್ತೆ. ಹಾಗಾಗಿ ಇಲಿಗಳನ್ನು ತೊಡೆದು ಹಾಕಲು, ಕರ್ಪೂರದ ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇರಿಸಿ. ಹೀಗೆ ಮಾಡೋದರಿಂದ, ಇಲಿಗಳು ಮನೆಯನ್ನು ಬಿಡುತ್ತವೆ.

ಈ ವಿಷಯಗಳ ಬಗ್ಗೆ ಕಾಳಜಿ ವಹಿಸೋದು ಸಹ ಮುಖ್ಯ.
ಇಲಿಗಳು ಸುಲಭವಾಗಿ ಆಹಾರ ಪದಾರ್ಥಗಳನ್ನು(Food items) ಪಡೆಯುವವರೆಗೆ ಮಾತ್ರ ಮನೆಯಲ್ಲಿ ಉಳಿಯುತ್ತವೆ. ಆದ್ದರಿಂದ, ನೀವು ಎಲ್ಲಾ ಆಹಾರ ಪದಾರ್ಥಗಳನ್ನು ಚೆನ್ನಾಗಿ ಸ್ಟೋರ್ ಮಾಡೋದು ಮುಖ್ಯ. ಹಾಗೆ, ಇಲಿಗಳು ಬರುವ ಮನೆಯ ಯಾವುದೇ ಸ್ಥಳವನ್ನು ಬಿಡಬೇಡಿ. ಇದಲ್ಲದೆ, ಕಾಲಕಾಲಕ್ಕೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಯಾಕಂದ್ರೆ ಇಲಿಗಳು ಸೇರಿದಂತೆ ಅನೇಕ ರೀತಿಯ ಕೀಟಗಳು ಕೊಳಕು ಸ್ಥಳಗಳಲ್ಲಿ ನೆಲೆಸಲು ಪ್ರಾರಂಭಿಸುತ್ತವೆ.

Latest Videos

click me!