ಮಕ್ಕಳು ಬಿಕ್ಕಿಳಿಸೋದು, ಅಳೋದು ಕಾಮನ್, ಹಾಗಂಥ ಹಸಿವಾಗಿದೆ ಎಂದರ್ಥವಲ್ಲ!

First Published | Oct 31, 2023, 7:00 AM IST

ನವಜಾತ ಶಿಶುವಿನಲ್ಲಿ ಬಿಕ್ಕಳಿಕೆ, ಸೀನುವಿಕೆ, ಕಣ್ಣು ಮಿಟುಕಿಸುವುದು ಮುಂತಾದ ವಿಷಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಇದು ಈಗಷ್ಟೇ ತಾಯಿಯಾದವರಿಗೆ ಭಯವನ್ನುಂಟು ಮಾಡುತ್ತೆ, ಆದರೆ ಇದು ಚಿಂತಿಸುವ ವಿಷಯವಲ್ಲ ಅನ್ನೋದನ್ನು ತಿಳ್ಕೊಳಿ .
 

ಮಗುವಿನ ಆಗಮನವು ಪೋಷಕರ ಜೀವನದಲ್ಲಿ ಬಹಳ ರೋಮಾಂಚನಕಾರಿ ಕ್ಷಣ. ಆಹಾರದಿಂದ ಹಿಡಿದು ಡೈಪರ್ ಗಳನ್ನು ಬದಲಾಯಿಸುವವರೆಗೆ, ಎಲ್ಲಾ ಅನುಭವವು ತುಂಬಾ ವಿಶೇಷವಾಗಿದೆ. ನಿಮ್ಮ ಪುಟ್ಟ ಮಗುವನ್ನು (new born baby) ನೀವು ಅರ್ಥ ಮಾಡಿಕೊಳ್ಳುತ್ತಿದ್ದಂತೆ, ನೀವು ಅವರ ಬಗ್ಗೆ ಅನೇಕ ವಿಭಿನ್ನ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಪ್ರತಿದಿನ ನಾವು ಅವರ ದಿನಚರಿ ಮತ್ತು ಅಭ್ಯಾಸಗಳೊಂದಿಗೆ ಪರಿಚಿತರಾಗಿದ್ದೇವೆ. ಆದರೆ ಕೆಲವು ವಿಷಯಗಳು ಹೊಸ ಪೋಷಕರಿಗೆ ಆತಂಕವನ್ನುಂಟು ಮಾಡುತ್ತೆ.
 

ಈಗಷ್ಟೇ ಹುಟ್ಟಿದ ಮಕ್ಕಳು ಮಾಡುವ ಕೆಲವು ವಿಷಯಗಳು ನಿಜವಾಗಿಯೂ ಪೋಷಕರಿಗೆ ವಿಚಿತ್ರವಾಗಿ ತೋರಬಹುದು, ಆದರೆ ಅವು ಸಾಮಾನ್ಯವೆಂದು ತಜ್ಞರು ನಂಬುತ್ತಾರೆ. ಆದ್ದರಿಂದ, ಪೋಷಕರು ಈ ಬಗ್ಗೆ ಹೆಚ್ಚು ಚಿಂತಿಸಬಾರದು. ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಕಂಡು ಬರುವಂತಹ 5 ವಿಚಿತ್ರ ವಿಷಯಗಳ ಬಗ್ಗೆ ಮಕ್ಕಳ ತಜ್ಞರು ತಿಳಿಸಿದ್ದಾರೆ. ಅದರ ಬಗ್ಗೆ ನೀವೂ ತಿಳಿಯಿರಿ.
 

Tap to resize

ಕಿರಿದಾದ ಕಣ್ಣುಗಳು 
ಮಕ್ಕಳು ತಮ್ಮ ಕಣ್ಣುಗಳನ್ನು ಕಿರಿದಾಗಿಸುವುದು ಅಥವಾ ಕೆಲವೊಮ್ಮೆ ಬಣ್ಣ ಬದಲಾಗುವುದು ಸಾಮಾನ್ಯ.  ಮಗುವಿನ ಸ್ನಾಯುಗಳ ಬೆಳವಣಿಗೆಯಾದಾಗ (muscle developement), ಅಂದರೆ 6 ತಿಂಗಳ ನಂತರ ಈ ಸ್ಥಿತಿಯು ಸ್ವಯಂಚಾಲಿತವಾಗಿ ಸರಿಯಾಗುತ್ತೆ. ಆದ್ದರಿಂದ, ಪೋಷಕರು ತಮ್ಮ ಮಗು ಸಾಮಾನ್ಯವಲ್ಲ ಎಂದು ಚಿಂತಿಸುವುದನ್ನು ನಿಲ್ಲಿಸಬೇಕು.

 ಮೂತ್ರ ವಿಸರ್ಜಿಸುವ ಮೊದಲು ಅಳುವುದು
ಕೆಲವು ಶಿಶುಗಳು ಮೂತ್ರ ವಿಸರ್ಜಿಸುವ ಮೊದಲು ತುಂಬಾ ಅಳುತ್ತವೆ ಇದು ಪೋಷಕರಿಗೆ ಸಮಸ್ಯೆಯಾಗುತ್ತದೆ. ಆದರೆ ಚಿಂತಿಸುವಂಥದ್ದು ಏನೂ ಇಲ್ಲ. ಆದರೆ ಮೂತ್ರ ವಿಸರ್ಜಿಸುವಾಗ ನಿಮ್ಮ ಮಗು ಅಳುತ್ತಿದ್ದರೆ, ಏನೋ ತಪ್ಪಾಗಿದೆ ಎಂಬುದರ ಸಂಕೇತವಾಗಿರಬಹುದು. ಈ ಸಂದರ್ಭದಲ್ಲಿ, ನೀವು ತಡಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ದೇಹದ ಮೇಲೆ ಅತಿಯಾದ ಕೂದಲು
ಹುಟ್ಟಿದಾಗಿನಿಂದ, ಕೆಲವು ಮಕ್ಕಳು ತಮ್ಮ ದೇಹದ ಮೇಲೆ ಹೆಚ್ಚು ಕೂದಲನ್ನು (body hair) ಹೊಂದಿರುತ್ತಾರೆ. ಅವುಗಳನ್ನು ಲಾನುಗೊ ಎಂದು ಕರೆಯಲಾಗುತ್ತದೆ. ಇದು ಮಗುವಿನ ಮೊದಲ ಕೂದಲು. ಅವು ತಮ್ಮ ಚರ್ಮವನ್ನು ರಕ್ಷಿಸುವುದಲ್ಲದೆ ಗರ್ಭಾಶಯದಲ್ಲಿ ಬೆಚ್ಚಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವೆರ್ನಿಕ್ಸ್ (ಭ್ರೂಣವನ್ನು ಆವರಿಸುವ ಮೇಣದ, ಚೀಸ್ ತರಹದ ವಸ್ತು) ಚರ್ಮಕ್ಕೆ ಅಂಟಿಕೊಳ್ಳಲು ಲಾನುಗೊ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಈ ಕೂದಲುಗಳು ಸ್ವಲ್ಪ ಸಮಯದವರೆಗೆ ಉಳಿಯುತ್ತವೆ ಮತ್ತು ನಂತರ ತಾವಾಗಿಯೇ ಹೋಗುತ್ತವೆ. ಮಕ್ಕಳ ದೇಹದಿಂದ ಕೂದಲನ್ನು ತೆಗೆದುಹಾಕಲು ಹಿಟ್ಟು ಬಳಸುವ ಅಗತ್ಯ ಇಲ್ಲ.

ಊಟದ ನಂತರ ಮಲ ವಿಸರ್ಜನೆ-
ಮಕ್ಕಳು ಏನನ್ನಾದರೂ ತಿಂದ ತಕ್ಷಣ ಪಾಟಿ ಮಾಡಿದ್ರೆ ಹೆಚ್ಚಿನ ಪೋಷಕರು ಅದನ್ನು ಸಾಮಾನ್ಯ ಎಂದು ತಿಳಿಯೋದಿಲ್ಲ, ಏಕೆಂದರೆ ಈ ಸಮಯದಲ್ಲಿ ಮಕ್ಕಳು ಮೂತ್ರ ವಿಸರ್ಜನೆ ಸಹ ಮಾಡುತ್ತಾರೆ. ಮಗುವಿನ ಹೊಟ್ಟೆ ಕೆಟ್ಟಿದೆ ಅಥವಾ ಆಹಾರವನ್ನು ಜೀರ್ಣಿಸಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಅವರು ಭಾವಿಸುತ್ತಾರೆ. ತಜ್ಞರ ಪ್ರಕಾರ, ಪ್ರತಿ ಆಹಾರದ ನಂತರ ಸ್ವಲ್ಪ ಪ್ರಮಾಣದ ಕರುಳಿನ ಚಲನೆ ಇದ್ದರೆ,  ಮಲಮೂತ್ರ ವಿಸರ್ಜನೆಯಾಗುತ್ತೆ, ಇದಕ್ಕೆ ಭಯ ಪಡುವ ಅಗತ್ಯ ಇಲ್ಲ.
 

ಬಿಕ್ಕಳಿಕೆ (hicups)
ನವಜಾತ ಶಿಶುಗಳಲ್ಲಿ ಬಿಕ್ಕಳಿಕೆ ಹೆಚ್ಚು ಸಾಮಾನ್ಯವಾಗಿದೆ. ಅದು ಅವರು ಹುಟ್ಟುವ ಮೊದಲೇ ಪ್ರಾರಂಭವಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಮಗುವಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಸಣ್ಣ ಶಿಶುಗಳಲ್ಲಿ, ಬಿಕ್ಕಳಿಕೆಗಳು ಅವರು ಹಾಲುಣಿಸುವ ಸಮಯದಲ್ಲಿ ಅಥವಾ ನಂತರ ನೇರವಾಗಿ ಕುಳಿತುಕೊಳ್ಳಬೇಕು ಎಂಬುದರ ಸಂಕೇತವಾಗಿದೆ. ತಜ್ಞರ ಪ್ರಕಾರ, ಎದೆ ಅಥವಾ ಫಾರ್ಮುಲಾ ಹಾಲನ್ನು ನೀಡಿದ ನಂತರ, ಮಗುವಿಗೆ ಭುಜದ ಮೇಲೆ ಕತ್ತನ್ನು ಇಟ್ಟು ಮಲಗಿಸಬೇಕು. ಅದು ತೇಗು ಹಾಕಿದ ನಂತರ ಕೆಳಗೆ ಮಲಗಿಸಬೇಕು.
 

Latest Videos

click me!