ಕಾಫಿ ವಿಶ್ವದಾದ್ಯಂತ ಜನಪ್ರಿಯ ಪಾನೀಯವಾಗಿದ್ದು, ಜನರು ಇದನ್ನ ವಿವಿಧ ರೀತಿಯಲ್ಲಿ ಕುಡಿಯಲು ಇಷ್ಟಪಡುತ್ತಾರೆ. ಮುಂಜಾನೆಯನ್ನು ಆರಂಭಿಸೋದಕ್ಕಾಗಲಿ ಅಥವಾ ಕಚೇರಿ ಬ್ರೇಕ್ ಟೈಮಿಗೂ ಇರಲಿ, ಕಾಫಿ ಪ್ರತಿ ಸಂದರ್ಭಕ್ಕೂ ಸೂಕ್ತವಾಗಿದೆ.ಇಲ್ಲಿದೆ ನೀವು ಇಲ್ಲಿವರೆಗೆ ಕೇಳಿರದ ಚಿತ್ರ ವಿಚಿತ್ರ ಕಾಫಿಗಳು.
ಕಾಫಿ (Coffee) ಅನೇಕ ಜನರ ದೈನಂದಿನ ದಿನಚರಿಯ ಪ್ರಮುಖ ಭಾಗ. ಕೆಲವರು ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸಿದರೆ, ಕೆಲವರು ದಿನದ ಆಯಾಸವನ್ನು ನಿವಾರಿಸಲು ಕಾಫಿ ಕುಡಿಯಲು ಬಯಸುತ್ತಾರೆ. ಇದಲ್ಲದೆ, ಕಚೇರಿಯಲ್ಲಿ ಕೆಲಸ ಮಾಡುವಾಗ ಸೋಮಾರಿತನವನ್ನು ತೆಗೆದು ಹಾಕಲು ಜನರು ಹೆಚ್ಚಾಗಿ ಕಾಫಿ ಕುಡಿಯುತ್ತಾರೆ. ಇದು ಡೇಟಿಂಗ್ ಆಗಿರಲಿ ಅಥವಾ ಸ್ನೇಹಿತರೊಂದಿಗೆ ವಿಹಾರವಾಗಿರಲಿ, ಕಾಫಿ ಪ್ರತಿ ಸಂದರ್ಭಕ್ಕೂ ಸೂಕ್ತ.
ಕೆಲವು ಸಮಯದಿಂದ, ಜನರಲ್ಲಿ ವಿವಿಧ ರೀತಿಯಲ್ಲಿ ಕಾಫಿ ಕುಡಿಯೋ ಟ್ರೆಂಡ್ ಹೆಚ್ಚಾಗಿದೆ. ನಿಮಗೂ ಬೇರೆ ಬೇರೆ ರೀತಿಯ ಕಾಫಿ ಕುಡಿಯಲು ಬಯಸಿದ್ರೆ, ಇಲ್ಲಿದೆ ದೇಶ ವಿದೇಶದ ಚಿತ್ರ, ವಿಚಿತ್ರ ಕಾಫಿಗಳು, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಮಂಕಿ ಸ್ಪಿಟ್ ಕಾಫಿ (Monkey spit coffee)
ಹೆಸರೇ ಸೂಚಿಸುವಂತೆ, ಈ ಕಾಫಿಯನ್ನು ಮಂಗನ ಎಂಜಲಿನಿಂದ ತಯಾರಿಸಲಾಗುತ್ತದೆ. ವಾಸ್ತವವಾಗಿ, ತೈವಾನ್‌ನಲ್ಲಿ ಕಾಫಿ ಬೀಜಗಳನ್ನು ಮೊದಲು ಕೋತಿ ನುಂಗುತ್ತದೆ, ಮತ್ತೆ ಉಗುಳುತ್ತದೆ. ಈ ಕಾಫಿ ಬೀಜಗಳನ್ನು ನಂತರ ವಾಣಿಜ್ಯ ಕಾಫಿ ತಯಾರಿಸಲು ಬಳಸಲಾಗುತ್ತದೆ, ಇದು ಮಂಗನ ಕಫದಿಂದ ಅದರ ವಿಶಿಷ್ಟ ವೆನಿಲ್ಲಾ ಪರಿಮಳವನ್ನು ಪಡೆಯುತ್ತದೆ.
ಬುಲೆಟ್ ಪ್ರೂಫ್ ಕಾಫಿ (Bullet proof coffee)
ಬುಲೆಟ್ ಪ್ರೂಫ್ ಕಾಫಿ, ಬಟರ್ ಕಾಫಿ ಎಂದೂ ಕರೆಯಲ್ಪಡುತ್ತದೆ, ಇದು ಹೆಚ್ಚುವರಿ ಕೊಬ್ಬಿನಿಂದ ತಯಾರಿಸಿದ ಹೆಚ್ಚಿನ ಕ್ಯಾಲೊರಿ ಕೆಫೀನ್ ಪಾನೀಯ. ಇದನ್ನು ಅಮೆರಿಕದ ಉದ್ಯಮಿ ಮತ್ತು ಲೇಖಕ ಡೇವ್ ಎಸ್ಪ್ರೆ ಕಂಡು ಹಿಡಿದರು, ಅವರು ಬುಲೆಟ್ ಪ್ರೂಫ್ ಆಹಾರವನ್ನು ರಚಿಸಿದರು. ಈ ಪಾನೀಯವು ಕಡಿಮೆ ಕಾರ್ಬ್ ಮತ್ತು ಕೀಟೋ ಡಯಟ್ ಫಾಲೋವರ್ಸ್‌ಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಪ್ಯೂಕ್ ಕಾಫಿ (Puke coffee)
ಹೆಸರೇ ಸೂಚಿಸುವಂತೆ, ಪ್ಯೂವಿಯೆಟ್ನಾಮ್ ಈ ಕಾಫಿಯನ್ನು ವೀಸಲ್‌ನ ಪ್ಯೂಕ್‌ನಿಂದ ಅಂದರೆ ವಾಂತಿಯಿಂದ ತಯಾರಿಸಲಾಗುತ್ತದೆ. ವಾಸ್ತವವಾಗಿ, ವೀಸ್‌ಗಳು ಕಾಫಿ ಬೀಜದ ಹೊರ ಚೆರ್ರಿಗಳನ್ನು ಜೀರ್ಣಿಸಿಕೊಳ್ಳುತ್ತವೆ ಮತ್ತು ಉಳಿದ ಬೀನ್ಸ್ ಅನ್ನು ಬಾಯಿಯಿಂದ ಹೊರಹಾಕುತ್ತವೆ. ಈ ಬೀನ್ಸ್ ಅನ್ನು ನಂತರ ಸಂಗ್ರಹಿಸಿ, ಸಂಸ್ಕರಿಸಿ ನಂತರ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ.
ಪೂಪ್ ಕಾಫಿ (Poorp Coffee)
ಸಿವೆಟ್ ಕಾಫಿ ಅಥವಾ ಲುವಾರ್ಕ್ ಕಾಫಿ ಎಂದೂ ಕರೆಯಲ್ಪಡುವ ಪೂಪ್ ಕಾಫಿ ವಿಶ್ವದ ಅತ್ಯಂತ ದುಬಾರಿ ಕಾಫಿ. ಇದು ಪಾಪ್ ಸಂಸ್ಕೃತಿಯಲ್ಲಿ ಅತ್ಯಂತ ಜನಪ್ರಿಯ. ಇದನ್ನು ಸಿವೆಟ್ ಬೆಕ್ಕುಗಳು ಜೀರ್ಣಿಸಿಕೊಂಡ ಕಾಫಿ ಬೀಜಗಳಿಂದ ತಯಾರಿಸಲಾಗುತ್ತದೆ. ಇದಕ್ಕಾಗಿ, ಬೆಕ್ಕಿಗೆ ಮೊದಲು ಕಾಫಿ ಬೀಜಗಳನ್ನು ನೀಡಲಾಗುತ್ತದೆ ಮತ್ತು ನಂತರ ಅದನ್ನು ಅವುಗಳ ಮಲದಿಂದ ಸಂಗ್ರಹಿಸಿ ಸಂಸ್ಕರಿಸಿ ನಂತರ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ.
ಮೊಟ್ಟೆ ಕಾಫಿ (egg coffee)
ಸಾಂಪ್ರದಾಯಿಕವಾಗಿ ಕ್ಯಾಫೆ ಟ್ರುಂಗ್ ಎಂದು ಕರೆಯಲ್ಪಡುವ ಮೊಟ್ಟೆ ಕಾಫಿ ವಿಯೆಟ್ನಾಂನಲ್ಲಿ ಬಹಳ ಜನಪ್ರಿಯ. ಇದು ಸಿಹಿತಿಂಡಿಯಾಗಿದ್ದು, ವಿಯೆಟ್ನಾಂನಲ್ಲಿ ಹಾಲಿನ ಕೊರತೆ ಇದ್ದಾಗ ಕಂಡುಹಿಡಿಯಲಾಯಿತು. ಆ ಸಂದರ್ಭದಲ್ಲಿ ಹಾಲಿನ ಬದಲು ಮೊಟ್ಟೆಗಳನ್ನು ಬಳಸಲಾಗುತ್ತಿತ್ತು. ಘನೀಕರಿಸಿದ ಹಾಲನ್ನು ಮೊಟ್ಟೆಗಳೊಂದಿಗೆ ಕಾಫಿಯಲ್ಲಿ ಬೆರೆಸುವುದರಿಂದ ಅದು ಕೆನೆ ಕಟ್ಟಿ ಹಾಲಿನಂತೆ ಕಾಣುತ್ತೆ. ಅದರ ರುಚಿ ಮತ್ತು ಅನನ್ಯತೆಯಿಂದಾಗಿ, ಇದು ಕಾಫಿ ಪ್ರಿಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ.