ಅಪಾಯಕಾರಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಔಷಧಿ, ಚಿಕಿತ್ಸೆ ಏನೂ ಬೇಡ ಇದನ್ನ ಮಾಡಿ ಸಾಕು!

Published : Sep 30, 2023, 06:24 PM IST

ರಕ್ತದಲ್ಲಿ ಸಂಗ್ರಹವಾದ ಈ ಕೊಳಕು ವಸ್ತುವಾದ ಯೂರಿಕ್ ಆಸಿಡ್ ಸಂಧಿವಾತಕ್ಕಿಂತ ಭಯಾನಕವಾಗಿರುತ್ತೆ. ಈ ಯೂರಿಕ್ ಆಸಿಡ್ ಸಂಧಿವಾತಕ್ಕಿಂತ ಹೆಚ್ಚು ನೋವಿನ ಕಾಯಿಲೆಯಾಗಿದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಬಹುದು. ಅದನ್ನು ಕಡಿಮೆ ಮಾಡಲು ಔಷಧಿ ಅಥವಾ ಚಿಕಿತ್ಸೆಯ ಅಗತ್ಯವಿಲ್ಲ, ಹಾಗಿದ್ರೆ ಏನು ಮಾಡಬಹುದು ನೋಡೋಣ.   

PREV
19
ಅಪಾಯಕಾರಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಔಷಧಿ,  ಚಿಕಿತ್ಸೆ ಏನೂ ಬೇಡ ಇದನ್ನ ಮಾಡಿ ಸಾಕು!

ರಕ್ತದಲ್ಲಿ ಸಕ್ಕರೆ ಅಥವಾ ಕೊಲೆಸ್ಟ್ರಾಲ್ ಮಟ್ಟವನ್ನು (cholestrol level) ಹೆಚ್ಚಿಸುವುದು ನಿಮಗೆ ಅನೇಕ ಗಂಭೀರ ಮತ್ತು ಮಾರಣಾಂತಿಕ ಸಮಸ್ಯೆಗಳ ಅಪಾಯವನ್ನುಂಟು ಮಾಡುತ್ತದೆ, ಅದೇ ರೀತಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದ್ರೂ ಸಹ ಆರೋಗ್ಯಕ್ಕೆ ಅಪಾಯವಾಗಿದೆ. ಯೂರಿಕ್ ಆಮ್ಲವು ಕೊಳಕು ವಸ್ತುವಾಗಿದ್ದು, ಇದು ಹೆಚ್ಚಿನ ಪ್ರಮಾಣದ ಪ್ಯೂರಿನ್ಗಳನ್ನು ಹೊಂದಿರುವ ನೀವು ತಿನ್ನುವ ವಸ್ತುಗಳಿಂದ ದೇಹದಲ್ಲಿ ಸಂಗ್ರಹವಾಗುತ್ತದೆ. ಯೂರಿಕ್ ಆಸಿಡ್ ಅನ್ನು ಯಾವುದೇ ಔಷಧಿ, ಚಿಕಿತ್ಸೆ ಇಲ್ಲದೇ ಕಡಿಮೆ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ. 

29

ಮಾಂಸಾಹಾರ ದೂರ ಮಾಡಿ; ಕೆಲವು ರೀತಿಯ ಮಾಂಸ (meat), ಸಮುದ್ರಾಹಾರ ಮತ್ತು ತರಕಾರಿಗಳಲ್ಲಿ ಪ್ಯೂರಿನ್ ಗಳು ಹೆಚ್ಚಾಗಿರುತ್ತವೆ. ಇದು ಆಲ್ಕೋಹಾಲ್ ನಲ್ಲಿಯೂ ಕಂಡುಬರುತ್ತದೆ. ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು, ನೀವು ತಕ್ಷಣ ಕೆಂಪು ಮಾಂಸ, ಮೀನು, ಶೆಲ್ಫಿಶ್, ಚಿಕನ್ ಮತ್ತು ಆಲ್ಕೋಹಾಲ್ ದೂರ ಮಾಡಬೇಕು. 

 

39

ಸಕ್ಕರೆ ಕಡಿಮೆ ಬಳಸಿ: ಆಹಾರದಲ್ಲಿ ಹೆಚ್ಚಿನ ಸಕ್ಕರೆ, ಕಾರ್ನ್ ಸಿರಪ್ ಮತ್ತು ಇತರ ಸಿಹಿ ವಸ್ತುಗಳನ್ನು ಬಳಸೋದ್ರಿಂದ ದೇಹದಲ್ಲಿ ಯೂರಿಕ್ ಆಸಿಡ್ (uric acid) ಹೆಚ್ಚುತ್ತೆ.  ಸಂಸ್ಕರಿಸಿದ ಆಹಾರಗಳಲ್ಲೂ ಸಕ್ಕರೆ ಇರುತ್ತೆ, ಇದಲ್ಲದೆ, ಶುಗರ್ ಡ್ರಿಂಕ್ಸ್, ಸೋಡಾಗಳು ಮತ್ತು ಹಣ್ಣಿನ ಜ್ಯೂಸ್ ಸಹ ಸಕ್ಕರೆಯನ್ನು ಹೊಂದಿರುತ್ತವೆ. ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ 

49

ಹೆಚ್ಚು ನೀರು ಕುಡಿಯಿರಿ: ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿ ಯೂರಿಕ್ ಆಮ್ಲವನ್ನು ತ್ವರಿತವಾಗಿ ಹೊರಹಾಕಲು ಸಾಧ್ಯವಾಗುತ್ತದೆ.ಹಾಗಾಗಿ ನಿಯಮಿತವಾಗಿ ನೀರು ಕುಡಿಯೋದನ್ನು ಮರೆಯಬೇಡಿ. ಇದು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತೆ. 

59

ಕುಡಿಯಲೇ ಬೇಕಂದ್ರೆ ಸ್ವಲ್ಪ ಕಾಫಿ ಕುಡಿಯಿರಿ: ಕಾಫಿ ಕುಡಿಯುವುದರಿಂದ ಸೀರಮ್ ಯೂರಿಕ್ ಆಮ್ಲದ ಮಟ್ಟವನ್ನು ಎರಡು ರೀತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಒಂದು ಅಧ್ಯಯನವು ಸೂಚಿಸುತ್ತದೆ. ಮೊದಲನೆಯದಾಗಿ, ಇದು ದೇಹದಲ್ಲಿನ ಪ್ಯೂರಿನ್ ಗಳನ್ನು ಒಡೆಯುತ್ತದೆ, ಇದು ಯೂರಿಕ್ ಆಮ್ಲದ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಎರಡನೆಯದಾಗಿ, ಇದು ನಿಮ್ಮ ದೇಹವು ಯೂರಿಕ್ ಆಮ್ಲವನ್ನು ಹೊರಹಾಕುವ ದರವನ್ನು ಹೆಚ್ಚಿಸುತ್ತದೆ.

69

ಆಲ್ಕೋಹಾಲ್ ನಿಂದ ದೂರವಿರಿ: ಆಲ್ಕೋಹಾಲ್ (Alcohol) ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗುತ್ತದೆ. ಇದು ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಬಿಯರ್ ನಂತಹ ಆಲ್ಕೋಹಾಲ್ ಹೆಚ್ಚಿನ ಪ್ರಮಾಣದ ಪ್ಯೂರಿನ್ ಗಳನ್ನು ಹೊಂದಿರುತ್ತದೆ. ಹಾಗಾಗಿ ಇವುಗಳಿಂದ ದೂರ ಉಳಿಯಿರಿ. 

79

ತೂಕ ಕಡಿಮೆ ಮಾಡಿ: ನೀವು ಅಧಿಕ ತೂಕ (overweight) ಹೊಂದಿದ್ದರೆ, ಅದು ಯೂರಿಕ್ ಆಸಿಡ್ ನ್ನು ಹೆಚ್ಚಿಸುತ್ತೆ, ಕೊಬ್ಬಿನ ಕೋಶಗಳು ಸ್ನಾಯು ಕೋಶಗಳಿಗಿಂತ ಹೆಚ್ಚು ಯೂರಿಕ್ ಆಸಿಡ್ ತಯಾರಿಸುತ್ತವೆ. ಇದಲ್ಲದೆ, ಅಧಿಕ ತೂಕ ಹೊಂದಿರೋದ್ರಿಂದ ಕಿಡ್ನಿಗೆ ಯೂರಿಕ್ ಆಮ್ಲ ಫಿಲ್ಟರ್ ಮಾಡಲು ಕಷ್ಟವಾಗುತ್ತದೆ.

89

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಿ: ಹೆಚ್ಚಿದ ಯೂರಿಕ್ ಆಮ್ಲವು ಮಧುಮೇಹ ಮತ್ತು ಸಂಬಂಧಿತ ಸಮಸ್ಯೆಗಳ ಬೆಳವಣಿಗೆಗೆ ಸಂಬಂಧಿಸಿದೆ ಎಂದು ಸಂಶೋಧನೆ ತೋರಿಸುತ್ತದೆ. ಇದರರ್ಥ ಅಧಿಕ ರಕ್ತದ ಸಕ್ಕರೆ ಹೊಂದಿರುವ ಜನರು ಅದನ್ನು ಹೆಚ್ಚಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದನ್ನು ನಿಯಂತ್ರಣದಲ್ಲಿಡಲು, ಮೊದಲು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪ್ರಯತ್ನಿಸಿ.

99

ಒತ್ತಡ ದೂರ ಮಾಡಿ: ಒತ್ತಡ, ಕಳಪೆ ನಿದ್ರೆಯ ಅಭ್ಯಾಸಗಳು ಮತ್ತು ವ್ಯಾಯಾಮದ ಕೊರತೆಯು ದೇಹದಲ್ಲಿ ಯೂರಿಕ್ ಆಸಿಡ್ ನ್ನು ಹೆಚ್ಚಿಸುತ್ತೆ. ಪ್ರತಿದಿನ ಸರಿಯಾಗಿ ಧ್ಯಾನ ಮಾಡಿ, ಉಸಿರಾಟದ ವ್ಯಾಯಾಮಗಳನ್ನು ಮಾಡಿ ಮತ್ತು ಒತ್ತಡದ ಮಟ್ಟ ಕಡಿಮೆ ಮಾಡಲು ಯೋಗ ಮಾಡಿ. ಚೆನ್ನಾಗಿ ನಿದ್ರೆ ಮಾಡಿ. 

Read more Photos on
click me!

Recommended Stories