ಮೊದಲು, ಧಾನ್ಯಗಳಾದ ಬಾರ್ಲಿ, ಬ್ರೌನ್ ರೈಸ್, ಅಮರಂತ್ ಮತ್ತು ರಾಗಿ ನಮ್ಮ ಸಾಂಪ್ರದಾಯಿಕ ಆಹಾರದಲ್ಲಿ ಪ್ರಧಾನವಾಗಿದ್ದವು, ನಂತರ ಅಕ್ಕಿ ಸಂಪೂರ್ಣವಾಗಿ ಆದರ ಸ್ಥಾನವನ್ನು ಆಕ್ರಮಿಸಿಕೊಂಡಿತು.

ಹೆಚ್ಚು ನಾರಿನಂಶದ ಜೊತೆ ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದ್ದು ಇದರ ಬಳಕೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುವ ರಾಗಿ ಇತ್ತೀಚೆಗೆ ಮತ್ತೆ ಜನಪ್ರಿಯಗೊಳ್ಳುತ್ತಿದೆ.

ಒಂದು ರಾಗಿ ಮುದ್ದೆಯನ್ನು ಸಾಂಬಾರಿನೊಂದಿಗೆ ತಿಂದರೆ ದಿನಪೂರ್ತಿ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ.

ಹೆಚ್ಚಿನ ಎತ್ತರ ಪ್ರದೇಶದಲ್ಲೂ ಬೆಳೆಯಬಲ್ಲದು ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಹುದಾದ ರಾಗಿ ಗಟ್ಟಿಯಾದ ಬೆಳೆಯಾಗಿದ್ದು ಭಾರತೀಯ ಹವಾಮಾನ ಪರಿಸ್ಥಿತಿಗೆ ಸೂಕ್ತ.

ರಾಗಿಯ ಕೆಲವು ಅದ್ಭುತ ಪ್ರಯೋಜನಗಳು ಇಲ್ಲಿವೆ
ರಾಗಿಯ ಕೆಲವು ಅದ್ಭುತ ಪ್ರಯೋಜನಗಳು ಇಲ್ಲಿವೆ
ರಾಗಿ ಉತ್ತಮ ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲ.
ರಾಗಿ ಉತ್ತಮ ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲ.
ಇತರ ಧಾನ್ಯಗಳಿಗೆ ಹೋಲಿಸಿದರೆ ರಾಗಿ ಹಿಟ್ಟು ಕ್ಯಾಲ್ಸಿಯಂ ಅಂಶ ಹೆಚ್ಚಿದೆ.

ಭಾರತದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಪ್ರಕಾರ, 100 ಗ್ರಾಂ ರಾಗಿ 344 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಆರೋಗ್ಯಕರ ಮೂಳೆ ಮತ್ತು ಹಲ್ಲುಗಳಿಗೆ ಹಾಗೂ ಬೆಳೆಯುತ್ತಿರುವ ಮಕ್ಕಳಿಗೆ ಇದು ತುಂಬಾ ಪ್ರಯೋಜನಕಾರಿ.

ಮಧುಮೇಹವನ್ನು ನಿಯಂತ್ರಿಸುತ್ತದೆ. ಅಕ್ಕಿ, ಮೆಕ್ಕೆಜೋಳ ಅಥವಾ ಗೋಧಿಗೆ ಹೋಲಿಸಿದರೆ ರಾಗಿಯಲ್ಲಿ ಪಾಲಿಫಿನಾಲ್ ಮತ್ತು ನಾರಿನಂಶ ಹೇರಳವಾಗಿದೆ. ಲೋ ಗ್ಲೈಸೆಮಿಕ್ ಇಂಡೆಕ್ಸ್ ಪೂಡ್ ಕ್ರೇವಿಂಗ್ ಕಡಿಮೆ ಮಾಡುತ್ತದೆ ಹಾಗೂ ಜೀರ್ಣ ಕ್ರಿಯೆಯ ವೇಗವನ್ನು ಕಾಪಾಡುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಆ್ಯಂಟಿ ಏಜಿಂಗ್ : ಯಂಗ್ ಚರ್ಮವನ್ನು ಕಾಪಾಡಿಕೊಳ್ಳಲು ರಾಗಿ ಸಹ ಮಾಡುತ್ತದೆ. ಇದರಲ್ಲಿರುವ ಮೆಥಿಯೋನಿಯನ್ ಮತ್ತು ಲೈಸಿನ್ ನಂತಹ ಪ್ರಮುಖ ಅಮೈನೋ ಆಸಿಡ್‌ಗಳು ಚರ್ಮದ ಅಂಗಾಂಶಗಳು ಸುಕ್ಕಾಗುವುದು ಮತ್ತು ಕುಗ್ಗುವಿಕೆಗೆ ಕಡಿಮೆ ಆಗುವಂತೆ ಮಾಡುತ್ತದೆ. ವಿಟಮಿನ್ ಡಿ ಯ ಕೆಲವೇ ಕೆಲವು ನೈಸರ್ಗಿಕ ಮೂಲಗಳಲ್ಲಿ ರಾಗಿ ಕೂಡ ಒಂದು

ನಿಮ್ಮ ಜೀವನಶೈಲಿ ಆರೋಗ್ಯಕಾರಿಯಾಗಿರಬೇಕೆಂದರೆ ಆಹಾರದಲ್ಲಿ ರಾಗಿ ಸೇರಿಸುವುದು ಅತ್ಯುತ್ತಮ ಅಭ್ಯಾಸಗಳಲ್ಲೊಂದು.

ರಾಗಿಯಲ್ಲಿ ಕಬ್ಬಿಣದ ಅಂಶ ಅಧಿಕವಾಗಿದ್ದು, ರಕ್ತಹೀನತೆ ಮತ್ತು ಕಡಿಮೆ ಹಿಮೋಗ್ಲೋಬಿನ್ ಮಟ್ಟ ಹೊಂದಿರುವವರಿಗೆ ಬೆಸ್ಟ್ ಫುಡ್. ರಾಗಿಯನ್ನು ಮೊಳಕೆ ಕಟ್ಟಿದಾಗ ವಿಟಮಿನ್ ಸಿ ಮಟ್ಟ ಹೆಚ್ಚಾಗುತ್ತದೆ ಮತ್ತು ರಕ್ತನಾಳಗಳು ಕಬ್ಬಿಣವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ರಾಗಿ ನಿಯಮಿತವಾಗಿ ಸೇವಿಸುವುದರಿಂದ ಹೆಚ್ಚು ಪ್ರಯೋಜನಕಾರಿ. ರಾಗಿಯಲ್ಲಿರುವ ಆಂಟಿಆಕ್ಸಿಡೆಂಟ್ಸ್ ಟ್ರಿಪ್ಟೊಫಾನ್ ಮತ್ತು ಅಮೈನೋ ಆಸಿಡ್
natural relaxants ಆಗಿ ಕಾರ್ಯನಿರ್ವಹಿಸುತ್ತದೆ.

ರಾಗಿ ಸೇವನೆಯು ಮೈಗ್ರೇನ್ ನಿವಾರಿಸಲು ಸಹ ಉಪಯುಕ್ತ.

ತೂಕ ಇಳಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುವುದರಿಂದ ಅನಗತ್ಯ ಫುಡ್ ಕ್ರೇವಿಂಗ್ ತಡೆಯುತ್ತದೆ. ತೂಕ ಇಳಿಯಲು ಕಾರಣವಾಗುತ್ತದೆ. ರಾಗಿ ಹಿಟ್ಟು ಇನ್ಸುಲಿನ್ ಅನ್ನು ಸಕ್ರಿಯಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.