ಮದುವೆ ನಂತರ ತೂಕ ಹೆಚ್ಚಾಗಬಾರದು ಎಂದರೆ, ಈ ವಿಷ್ಯ ನೆನಪಿರಲಿ!

First Published May 24, 2021, 4:49 PM IST

ವಿವಾಹದ ಬಳಿಕ ಹೆಚ್ಚಿನ ದಂಪತಿ ತಮ್ಮ ಹಿಂದಿನ ದಿನಚರಿಯನ್ನು ಮರೆತು ಹೊಸ ದಿನಚರಿಯನ್ನು ಆರಂಭಿಸುತ್ತಾರೆ. ಇದು ಒಂದು ರೀತಿ ಸಹಜವಾದರೂ, ಇದರಲ್ಲಿ ಆರೋಗ್ಯ ಹಾಗೂ ವ್ಯಾಯಾಮಕ್ಕೆ ಸಂಬಂಧಿಸಿದ ವಿಚಾರಗಳೂ ಇವೆ. ಮದುವೆ ಬಳಿಕ ಕೆಲವರು ತಮ್ಮ ದೇಹ ಹಾಗೂ ಆರೋಗ್ಯವನ್ನು ಸಂಪೂರ್ಣವಾಗಿ ಕಡೆಗಣಿಸುವರು.

ಕೆಲವರು ವಿವಾಹವಾದ ಕೂಡಲೇ ತಮ್ಮ ವ್ಯಾಯಾಮದ ಕ್ರಮವನ್ನೇ ಮರೆತು, ಸಿಕ್ಕಿದ ಆಹಾರವನ್ನೆಲ್ಲಾ ತಿನ್ನುತ್ತಾರೆ. ಇದರಿಂದಮಹಿಳೆಯರು ಹಾಗೂ ಪುರುಷರಲ್ಲಿ ಮದುವೆ ಬಳಿಕ ತೂಕ ಹೆಚ್ಚಳ ಸಾಮಾನ್ಯ.
undefined
ತುಂಬಾ ಪರಿಣಾಮಕಾರಿ ಆಗಿ ದೇಹದ ತೂಕವನ್ನು ತಗ್ಗಿಸಲು ಅಥವಾ ಸಮತೋಲನದಲ್ಲಿ ಇಡಲು ಐದು ಕ್ರಮಗಳಿವೆ. ಅದನ್ನು ಪಾಲಿಸಿದರೆಖಂಡಿತವಾಗಿಯೂ ವಿವಾಹದ ಬಳಿಕ ದೇಹದ ತೂಕದಲ್ಲಿ ಏರಿಕೆ ಆಗದು.
undefined
ಲೈಂಗಿಕ ಕ್ರಿಯೆಲ್ಲಿ ಭಾಗಿಯಾಗಿ!ವಿವಾಹದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಯಾವುದೇ ಅಡ್ಡಿಯಾಗದು.ಸುಮಾರು 25 ನಿಮಿಷಗಳ ಕಾಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆಗ 100 ಕ್ಯಾಲರಿ ಕಡಿಮೆ ಆಗುವುದು.
undefined
ಅಳಿದುಳಿದ ಆಹಾರಗಳಿಂದ ದೂರವಿರಿ...ಸಂಗಾತಿಮಾಡಿರುವ ಅಡುಗೆಯನ್ನು ಹೊಗಳಲು ನೀವು ಅಳಿದುಳಿದ ಆಹಾರ ಸೇವಿಸಬೇಡಿ. ಕೆಲವೊಮ್ಮೆ ಉಳಿದ ಆಹಾರದಿಂದ ಬೇರೆ ಆಹಾರ ಮಾಡಬಹುದು.
undefined
ನೀವು ಈ ಆಹಾರವನ್ನು ತಯಾರಿಸಿದ್ದೀರಿ ಎನ್ನುವ ಕಾರಣಕ್ಕಾಗಿಯೇ ಇದನ್ನು ಬಿಸಾಡಲು ಮನಸ್ಸಿಲ್ಲದೆ ಇದ್ದರೆ ಆಗ ಇದನ್ನು ಬಿಸಿಯಾಗಿರುವಾಗಲೇ ಸೇವಿಸಿ. ಹಳೆ ಆಹಾರ ಸೇವಿಸುವುದರಿಂದ ತೂಕ ಹೆಚ್ಚುತ್ತದೆ.
undefined
ಊಟದ ಆಹ್ವಾನಮದುವೆ ಬಳಿಕ ವರ ಹಾಗೂ ವಧುವನ್ನು ಸಂಬಂಧಿಕರು ತಮ್ಮ ಮನೆಗೆ ಆಹ್ವಾನಿಸಿ, ಅವರನ್ನು ಊಟೋಪಚಾರದಿಂದ ಉಪಚರಿಸುವರು. ಆದರೆ ಈ ವೇಳೆ ತಿನ್ನುವ ಪ್ರಮಾಣದ ಮೇಲೆ ಎಚ್ಚರವಿರಬೇಕು.
undefined
ವ್ಯಾಯಾಮವಿವಾಹದ ಬಳಿಕ ವ್ಯಾಯಾಮವನ್ನು ಮರೆತುಬಿಡಬಾರದು. ದೈಹಿಕವಾಗಿ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅದರಲ್ಲೂ ವ್ಯಾಯಾಮವನ್ನು ತಪ್ಪದೆ ಮಾಡಿದರೆ ತುಂಬಾ ಒಳ್ಳೆಯದು. ನಿಮಗೆ ಒಬ್ಬರಿಗೆ ವ್ಯಾಯಾಮ ಮಾಡಲು ಇಷ್ಟವಿಲ್ಲದೆ ಇದ್ದರೆ ಆಗ ಸಂಗಾತಿಯನ್ನು ಕೂಡ ಜತೆಯಾಗಿ ಸೇರಿಸಿಕೊಳ್ಳಿ.
undefined
ಲಘುವಾಗಿ ಪರಿಗಣಿಸುವುದುಮದುವೆಗೆ ಮುಂಚೆ ದೇಹವನ್ನು ಫಿಟ್ ಆಗಿ ಬೆಳೆಸಿದ್ದ ನಿಮಗೆ ಈಗ ಅದನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ದೇಹದ ಫಿಟ್ನೆಸ್ ಅನ್ನು ಕಡೆಗಣಿಸಬಾರದು. ಯಾಕೆಂದರೆ ಕೇವಲ ಮದುವೆಗೋಸ್ಕರ ಮಾತ್ರದೇಹವನ್ನು ಕಾಯ್ದುಕೊಂಡಿರುವುದಲ್ಲ. ಮದುವೆಯ ಒತ್ತಡ ಕಡಿಮೆ ಆಗಿದೆಯೆಂದು ದೇಹವನ್ನು ಕಡೆಗಣಿಸಬೇಡಿ.
undefined
ವಾಕಿಂಗ್ ಮಾಡಿಬೇರೆ ರೀತಿಯ ವ್ಯಾಯಾಮ ಮಾಡಲು ಕಷ್ಟವಾಗುವುದಾದರೆ ವಾಕಿಂಗ್ ಮಾಡಿ. ಸಂಗಾತಿಜೊತೆ ಸೇರಿ ವಾಕಿಂಗ್ ಮಾಡುವುದರಿಂದ ಮಾತುಕತೆಯೂ ನಡೆಯುವುದು. ಜೊತೆಗೆ ಆರೋಗ್ಯವೂ ಉತ್ತಮವಾಗಿರುವುದು.
undefined
ಸಿಹಿ ತಿನಿಸುಮದುವೆ ಬಳಿಕ ಒಂದೆರಡು ತಿಂಗಳು ಎಲ್ಲಾ ಕಡೆಯಿಂದ ಸಿಹಿ ತಿನಿಸುಗಳು ತಿನ್ನುವ ಸಂದರ್ಭ ಬರುತ್ತವೆ. ಇಂತಹ ಸಂದರ್ಭದಲ್ಲಿ ನಿಯಮಿತವಾಗಿ ಸಿಹಿ ತಿನ್ನಿ. ಇಲ್ಲವಾದರೆ ತೂಕ ಹೆಚ್ಚುತ್ತದೆ.
undefined
click me!