ರೋಗ ನಿರೋಧಕ ಶಕ್ತಿ ಹೆಚ್ಚಳಪ್ರಾಣಾಯಾಮವು ದೇಹದ ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಪರಿಚಲನೆಯನ್ನುಸುಧಾರಿಸಿ ದೇಹದಿಂದ ವಿಷಕಾರಕ ಅಂಶಗಳು ಹೊರಗೆ ಹೋಗುವಂತೆ ಮಾಡುತ್ತದೆ. ಸೈನಸ್, ಅಸ್ತಮಾ, ಬೊಜ್ಜು, ಖಿನ್ನತೆ, ಮೈಗ್ರೇನ್ ಮೊದಲಾದ ಸಮಸ್ಯೆಗಳಿದ್ದರೆ ದಿನ ನಿತ್ಯ ಪ್ರಾಣಾಯಾಮ ಮಾಡಿ.
ಇಂದ್ರಿಯಗಳ ಪುನರುಜ್ಜೀವನಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯ ತುಂಬುವುದರ ಜೊತೆಗೆ ದಿನ ನಿತ್ಯದ ಕೆಲಸದಿಂದ ಎದುರಾಗುವ ಒತ್ತಡವನ್ನು ನಿವಾರಿಸುತ್ತದೆ. ಇದು ದೇಹದ ಚೈತನ್ಯ ತ್ವರಿತ ಗತಿಯಲ್ಲಿ ಹೆಚ್ಚಿಸಲು ನೆರವಾಗುತ್ತದೆ.
ಸುಖ ನಿದ್ರೆಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದಾಗಿ ಚೆನ್ನಾಗಿ ನಿದ್ರೆ ಬರುತ್ತದೆ. ಭಾವನಾತ್ಮಕ ಒತ್ತಡಗಳಿಂದಲೂ ದೂರವಿರುವಂತೆ ಮಾಡಿ, ನೆಮ್ಮದಿ ತರುತ್ತದೆ.
ಸ್ಮರಣ ಶಕ್ತಿ ಹೆಚ್ಚಳಆಳವಾಗಿ ಉಸಿರಾಡುವುದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುವಂತೆ ಮಾಡುತ್ತದೆ. ಈ ಮೂಲಕ ಏಕಾಗ್ರತೆ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ರವಣ ಶಕ್ತಿ ಮತ್ತು ದೃಷ್ಟಿ ಇನ್ನಷ್ಟು ಚೆನ್ನಾಗಲು ಕೂಡ ಇದು ನೆರವಾಗುತ್ತದೆ.
ವಯಸ್ಸಾಗುವಿಕೆಗೆ ತಡೆಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತದ ಪರಿಚಲನೆ ಹೆಚ್ಚುತ್ತದೆ ಹಾಗೂ ಚಯಾಪಚಯ ಕ್ರಿಯೆ ಸುಧಾರಿಸುವಂತೆ ಮಾಡುತ್ತದೆ. ಇದರಿಂದ ಆರೋಗ್ಯ ಇನ್ನಷ್ಟು ಸುಧಾರಿಸುವುದಲ್ಲದೆ ವಯಸ್ಸಾಗುವಿಕೆ ಲಕ್ಷಣಗಳು ಅದರಲ್ಲೂ ಮುಖದಲ್ಲಿ ನೆರಿಗೆ ಮೊದಲಾದ ಸಮಸ್ಯೆಗಳಿಂದ ದೂರ ಇರಿಸುತ್ತದೆ.
ಶ್ವಾಸಕೋಶದ ಅರೋಗ್ಯ :ಪ್ರಾಣಾಯಾಮ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕ ದೊರೆಯುತ್ತದೆ. ಇದರಿಂದ ಶ್ವಾಸಕೋಶ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಹೃದಯದ ಅರೋಗ್ಯ :ದೇಹಕ್ಕೆ ಉತ್ತಮ ಗಾಳಿ ದೊರೆತಾಗ ಇದರಿಂದ ದೇಹಕ್ಕೆ ಪೂರ್ತಿಯಾಗಿ ಆಮ್ಲಜನಕ ಸಂಚಾರವಾಗುತ್ತದೆ. ಇದರಿಂದ ರಕ್ತ ಪರಿಚಲನೆ ಕೂಡ ಉತ್ತಮವಾಗುತ್ತದೆ. ದೇಹದಲ್ಲಿ ರಕ್ತ ಸಂಚಾರ ಉತ್ತಮವಾದರೆ ಹೃದಯದ ಆರೋಗ್ಯವೂ ಉತ್ತಮವಾಗುತ್ತದೆ.
ಪ್ರಾಣಾಯಾಮ ಮಾಡುವ ವಿಧಾನಕಾಲುಗಳನ್ನು ಮಡಚಿ ಕುಳಿತುಕೊಳ್ಳಬೇಕು. ಬಲ ಹೆಬ್ಬೆರೆಳಿನಿಂದ ಮೂಗಿನ ಬಲ ಭಾಗದ ಹೊಳ್ಳೆಯನ್ನು ಮುಚ್ಚಿಕೊಳ್ಳಬೇಕು. ಈಗ ಎಡ ಹೊಳ್ಳೆಯಿಂದ ಆಳವಾಗಿ ಉಸಿರು ಎಳೆದುಕೊಂಡು ಉಂಗುರ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ ಬಲ ಹೊಳ್ಳೆಯಿಂದ ಉಸಿರು ಹೊರಗೆ ಬಿಡಬೇಕು. ಅದೇ ರೀತಿ ಬಳಿಕ ಬಲ ಹೊಳ್ಳೆಯಿಂದ ಉಸಿರು ಎಳೆದುಕೊಂಡು ಎಡ ಹೊಳ್ಳೆಯಿಂದ ಹೊರಗೆ ಬಿಡಬೇಕು.