30ರ ಹರೆಯದಲ್ಲಿ ರಾತ್ರಿ ನಿದ್ರೆಯಿಂದ ಪದೇ ಪದೇ ಎಚ್ಚರವಾಗುತ್ತಾ? ಈವಾಗ್ಲೆ ಅಲರ್ಟ್ ಆಗಿ

First Published | Jan 17, 2024, 7:00 AM IST

ಅನೇಕ ಜನರು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡೋದಿಲ್ಲ ಮತ್ತು ಪದೇ ಪದೇ ನಿದ್ರೆಯಿಂದ ತೊಂದರೆಗೀಡಾಗುತ್ತಾರೆ. ಒಂದು ವೇಳೆ 30ರ ಹರೆಯದಲ್ಲಿ ನಿಮಗೆ ಈ ಸಮಸ್ಯೆ ಕಾಡಿದರೆ, ವೃದ್ಧಾಪ್ಯದಲ್ಲಿ ಇದು ನಿಮಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿದೆ.
 

ಕೆಲವರಿಗೆ ಹಾಸಿಗೆ ಮೇಲೆ ತಲೆ ಇಟ್ಟ ಕೂಡಲೇ ನಿದ್ದೆ ಬರುತ್ತೆ, ಇನ್ನೂ ಕೆಲವರಿಗೆ ಎಷ್ಟು ಪ್ರಯತ್ನಿಸಿದರೂ ನಿದ್ದೆ ಬರೋದಿಲ್ಲ. ಇನ್ನು ಕೆಲವರಿಗೆ ನಿದ್ರೆ ಮಾಡುವಾಗ ಪದೇ ಪದೇ ಎಚ್ಚರವಾಗುತ್ತಲೇ ಇರುತ್ತದೆ. ನಿಮಗೂ ನಿದ್ರೆ ಮಾಡೊವಾಗ ಪದೇ ಪದೇ ಎಚ್ಚರವಾದರೆ ನೀವು ಅಲರ್ಟ್ ಆಗಿರಬೇಕು. ಇದು ಅಪಾಯದ ಮುನ್ಸೂಚನೆ. 
 

ಸಂಶೋಧನೆಯೊಂದು ನಿದ್ರೆಯ ಬಗ್ಗೆ ಅಧ್ಯಯನ ನಡೆಸಿತ್ತು. 30 ಮತ್ತು 40 ನೇ ವಯಸ್ಸಿನಲ್ಲಿ ನಿದ್ರೆ ಮಾಡಲು ತೊಂದರೆ (problem in sleeping) ಇರುವ ಜನರಿಗೆ ನಂತರದ ದಿನಗಳಲ್ಲಿ ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. 
 

Tap to resize

526 ಜನರ ಮೇಲೆ 11 ವರ್ಷಗಳ ಕಾಲ ನಡೆಸಿದ ಸಂಶೋಧನೆ ಆಧಾರದ ಮೇಲೆ ಈ ಅಧ್ಯಯನವನ್ನು ದಿ ಜರ್ನಲ್ ಆಫ್ ದಿ ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯಲ್ಲಿ ಪ್ರಕಟಿಸಲಾಗಿದೆ.

ರಾತ್ರಿಯಲ್ಲಿ ಆಗಾಗ್ಗೆ ಎಚ್ಚರಗೊಳ್ಳದ ಜನರು ಮೂವತ್ತರ ಹರೆಯದ ಜನರು, 50 ರ ನಂತರದ ವೃದ್ಧಾಪ್ಯದಲ್ಲಿಯೂ ಅವರ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರ ನೆನಪಿನ ಶಕ್ತಿ (memory power) ಸಹ ಉತ್ತಮವಾಗಿರುತ್ತದೆ ಎಂದು ಸಂಶೋಧನೆ ತಿಳಿಸಿದೆ. 

ಒಬ್ಬ ವ್ಯಕ್ತಿಯು ಸುಮಾರು 7.25 ಗಂಟೆಗಳ ನಿದ್ರೆಯನ್ನು ಮಾಡಲೇಬೇಕು ಎಂದು ವೈದ್ಯರು ಹೇಳುತ್ತಾರೆ, ಆದರೆ ವಿಭಿನ್ನ ಜನರಿಗೆ ಇದು ಕಡಿಮೆ ಇರಬಹುದು. ಆದರೆ 7.30 ಅಥವಾ 8 ಗಂಟೆಗಳ ಪರಿಪೂರ್ಣ ನಿದ್ರೆಯಿಂದ ಆರೋಗ್ಯ ಮತ್ತು ಮಾನಸಿಕ ಸ್ಥಿತಿ (mental status) ಉತ್ತಮವಾಗಿರುತ್ತದೆ. 

ಬೆಳಗ್ಗೆ ನೀವು ಎದ್ದಾಗ ಉಲ್ಲಾಸದಿಂದ ಕೂಡಿದ್ದರೆ, ಮನಸ್ಸು ಹಾಯಾಗಿದೆ ಅನಿಸಿದರೆ, ನೀವು ಚೆನ್ನಾಗಿ ನಿದ್ರೆ ಮಾಡಿದ್ದಿರಿ ಎಂದು ಅರ್ಥ. ಬೆಳಗ್ಗೆ ಎದ್ದಾಗ ಆಯಾಸ, ತಲೆನೋವು ಕಾಡುತ್ತಿದ್ದರೆ, ನಿಮಗೆ ಚೆನ್ನಾಗಿ ನಿದ್ರೆ ಬಂದಿಲ್ಲ ಎಂದು ಅರ್ಥ. 

ನಿದ್ರೆಯ ಕೊರತೆಯಿಂದಾಗಿ, ಅನೇಕ ಸಮಸ್ಯೆಗಳಿಗೆ ಜನರು ಬಲಿಯಾಗೋ ಸಾಧ್ಯತೆ ಇದೆ. ವರದಿಯೊಂದರ ಪ್ರಕಾರ ಸಾಕಷ್ಟು ನಿದ್ರೆ ಮಾಡದಿರುವುದು ಕ್ಯಾನ್ಸರ್, ಮಧುಮೇಹದಂತಹ (diabetes) ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ನಿಮಗೆ ಸಾಕಷ್ಟು ನಿದ್ರೆ ಸಿಗದಿದ್ದರೆ, ನಿಮ್ಮ ರೋಗನಿರೋಧಕ ಶಕ್ತಿ (immunity power) ದುರ್ಬಲಗೊಳ್ಳಬಹುದು, ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.

ಪದೇ ಪದೇ ನಿದ್ರೆಯಿಂದ ಎಚ್ಚರ ಆಗ್ತಿದ್ರೆ ಏನು ಮಾಡಬೇಕು?
ಲೈಫ್ ಸ್ಟೈಲ್ ಬದಲಾಯಿಸಿ (change your lifestyle)

ಕೆಟ್ಟ ಜೀವನಶೈಲಿ ನಿದ್ರೆಯ ತೊಂದರೆಗಳಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಿ. ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಅತಿಯಾಗಿ ತಿನ್ನಬೇಡಿ ಮತ್ತು ಸಾಕಷ್ಟು ದೈಹಿಕ ಚಟುವಟಿಕೆ ಮಾಡಿ ಇದರಿಂದ ನಿದ್ರೆ ಚೆನ್ನಾಗಿರುತ್ತೆ. 

ವ್ಯಾಯಾಮ (exercise)
ನಿಯಮಿತವಾಗಿ ವ್ಯಾಯಾಮ ಮಾಡೋದನ್ನು ಮರೆಯಬೇಡಿ. ವಾರದಲ್ಲಿ ಐದು ಗಂಟೆಗಳ ಕಾಲ ವ್ಯಾಯಾಮ ಮಾಡಿ. ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡೋದನ್ನು ಮರೆಯಬೇಡಿ. ಡ್ಯಾನ್ಸಿಂಗ್, ಸೈಕಲಿಂಗ್, ಸ್ವಿಮ್ಮಿಂಗ್ ಕೂಡ ಮಾಡಿ. 
 

Latest Videos

click me!