ನಿಮ್ಮ ಮುಖದ ಕಾಂತಿ ಹೆಚ್ಚಿಸಲಿದೆ ಹಳದಿ ಐಸ್ ಕ್ಯೂಬ್ಸ್: ವೈರಲ್ ಆಗಿರುವ ಈ ದೇಸಿ ಬ್ಯೂಟಿ ಹ್ಯಾಕ್

Published : May 26, 2026, 08:22 PM IST

ಮುಖದ ಉಬ್ಬುವಿಕೆ ಮತ್ತು ಮಂದತೆಯನ್ನು ಕಡಿಮೆ ಮಾಡಲು ಹಳದಿ ಐಸ್ ಕ್ಯೂಬ್‌ಗಳು ಪರಿಣಾಮಕಾರಿ ಮನೆಮದ್ದಾಗಿದೆ. ಆಯುರ್ವೇದ ಮತ್ತು ಕ್ರಯೋಥೆರಪಿಯ ಈ ಮಿಶ್ರಣವು, ಅರಿಶಿನದ ಗುಣಗಳಿಂದ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. 

PREV
16
ಹಳದಿ ಐಸ್‌ ಕ್ಯೂಬ್‌ನಿಂದ ಕಾಂತಿ

ನಾವೆಲ್ಲರೂ ಎಂದಾದರೂ ಒಂದಲ್ಲ ಒಂದು ಬಾರಿ ಈ ಪರಿಸ್ಥಿತಿಯನ್ನು ಎದುರಿಸಿರುತ್ತೇವೆ. ಬೆಳಗ್ಗೆ ಎದ್ದು ಕನ್ನಡಿ ನೋಡಿದಾಗ ಮುಖವು ಸುಂದರವಾಗಿ ಕಾಣುವ ಬದಲು, ವಿಪರೀತವಾಗಿ ಉಬ್ಬಿದಂತೆ (Puffy face) ಕಾಣಿಸುತ್ತದೆ. ನೀವು ಇತ್ತೀಚೆಗೆ ಸೋಶಿಯಲ್ ಮೀಡಿಯಾ ರೀಲ್ಸ್‌ಗಳನ್ನು ಗಮನಿಸಿದ್ದರೆ, ಪ್ರತಿಯೊಬ್ಬರೂ ತಮ್ಮ ಮುಖಕ್ಕೆ ಹಳದಿ ಬಣ್ಣದ ಐಸ್ ಕ್ಯೂಬ್‌ಗಳನ್ನು ಉಜ್ಜಿಕೊಳ್ಳುವುದನ್ನು ನೋಡಿರಬಹುದು. ಇದನ್ನು ಹಚ್ಚಿಕೊಳ್ಳುವಾಗ ಕೊಂಚ ಗಲೀಜಾಗಿ ಕಂಡರೂ, ಇದರ ಫಲಿತಾಂಶ ಮಾತ್ರ ನಿಜಕ್ಕೂ ಅದ್ಭುತವಾಗಿದೆ.

26
ಪ್ರಕೃತಿ ಮತ್ತು ವಿಜ್ಞಾನದ ಸಮ್ಮಿಶ್ರಣ

ಇದು ಪ್ರಾಚೀನ ಆಯುರ್ವೇದ ಮತ್ತು ಆಧುನಿಕ ‘ಕ್ರಯೋಥೆರಪಿ’ (ಐಸ್ ಚಿಕಿತ್ಸೆ) ಮಿಶ್ರಣವಾಗಿದ್ದು, ಮುಖದ ಮಂದತೆ, ಉರಿ ಹಾಗೂ ಉಬ್ಬುವಿಕೆಯನ್ನು ಏಕಕಾಲದಲ್ಲಿ ಕಡಿಮೆ ಮಾಡುವ ಅತ್ಯಂತ ಕಡಿಮೆ ವೆಚ್ಚದ ಹೋಮ್ ಮೇಡ್ ರೆಮೆಡಿಯಾಗಿದೆ.

36
ಮುಖದ ಉಬ್ಬುವಿಕೆಗೆ ಐಸ್ ಚಿಕಿತ್ಸೆ

ಐಸ್ ಕ್ಯೂಬ್ ಅನ್ನು ಮುಖಕ್ಕೆ ಉಜ್ಜಿದಾಗ ರಕ್ತನಾಳಗಳು ಸಂಕುಚಿತಗೊಂಡು ಮುಖದ ಉಬ್ಬುವಿಕೆ ಮತ್ತು ಕೆಂಪಾಗುವಿಕೆ ತಕ್ಷಣ ಕಡಿಮೆಯಾಗುತ್ತದೆ. ಐಸ್ ತೆಗೆದ ತಕ್ಷಣ ಆ ಭಾಗಕ್ಕೆ ಆಮ್ಲಜನಕಯುಕ್ತ ರಕ್ತ ವೇಗವಾಗಿ ಹರಿಯುವುದರಿಂದ ಮುಖಕ್ಕೆ ನೈಸರ್ಗಿಕ ಕಾಂತಿ ಸಿಗುತ್ತದೆ.

46
ಅರಿಶಿನದ ಚಮತ್ಕಾರಿ ಗುಣ

ಅರಿಶಿನದಲ್ಲಿರುವ ‘ಕರ್ಕ್ಯುಮಿನ್’ ಅಂಶವು ಪ್ರಬಲ ಆಂಟಿಆಕ್ಸಿಡೆಂಟ್ ಆಗಿದ್ದು, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಅಲ್ಲದೆ, ಇದು ಚರ್ಮದ ಮೆಲನಿನ್ ಉತ್ಪಾದನೆಯನ್ನು ನಿಯಂತ್ರಿಸಿ ಕಪ್ಪು ಕಲೆ ಹಾಗೂ ಹೈಪರ್ ಪಿಗ್ಮೆಂಟೇಶನ್ ಅನ್ನು ದೂರ ಮಾಡುತ್ತದೆ.

56
ಐಸ್ ಕ್ಯೂಬ್ ತಯಾರಿಸುವ ವಿಧಾನ

ಮುಖ ಹಳದಿಯಾಗದಂತೆ ತಡೆಯಲು ಸಾಮಾನ್ಯ ಅರಿಶಿನದ ಬದಲು ‘ಕಸ್ತೂರಿ ಹರಿಶಿನ’ ಬಳಸಬೇಕು. 1 ಚಮಚ ಕಸ್ತೂರಿ ಅರಿಶಿನವನ್ನು ಅರ್ಧ ಕಪ್ ರೋಸ್ ವಾಟರ್ ಅಥವಾ ಅಲೋವೆರಾ ಜ್ಯೂಸ್ ಜೊತೆ ಬೆರೆಸಿ (ಒಣ ಚರ್ಮದವರು 1 ಚಮಚ ಹಾಲು/ಜೇನುತುಪ್ಪ ಸೇರಿಸಬಹುದು) ಐಸ್ ಟ್ರೇನಲ್ಲಿ 6-8 ಗಂಟೆ ಫ್ರೀಜ್ ಮಾಡಬೇಕು.

66
ಹಚ್ಚುವಾಗ ಪಾಲಿಸಬೇಕಾದ ನಿಯಮ

ಐಸ್ ಬರ್ನ್ ತಡೆಯಲು ಐಸ್ ಕ್ಯೂಬ್ ಅನ್ನು ನೇರವಾಗಿ ಹಚ್ಚದೆ, ತೆಳುವಾದ ಹತ್ತಿ ಬಟ್ಟೆಯಲ್ಲಿ ಸುತ್ತಿ ಮುಖದ ಮೇಲೆ 1 ರಿಂದ 2 ನಿಮಿಷ ವೃತ್ತಾಕಾರವಾಗಿ ಮಸಾಜ್ ಮಾಡಬೇಕು. ನಂತರ 5 ನಿಮಿಷ ಬಿಟ್ಟು ತಂಪಾದ ನೀರಿನಿಂದ ತೊಳೆದು ಮಾಯಿಶ್ಚರೈಸರ್ ಹಚ್ಚಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories