ಈ Kitchen Hacks ಟ್ರೈ ಮಾಡಿ ನಿಮಿಷದಲ್ಲಿ ಸುಟ್ಟ ಪಾತ್ರೆ ಹೊಳೆಯುವಂತೆ ಮಾಡಿ

Published : Jun 15, 2022, 06:24 PM IST

ನಿಮ್ಮ ಕೈ ಯೂಸ್ ಮಾಡದೆ ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ, ಅಡುಗೆಮನೆ ಸ್ವಚ್ಛವಾಗಿಡುವುದು ಹೇಗೆ ಮತ್ತು ಅಡುಗೆ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳೋದು ಹೇಗೆ?, ಚಿಂತೆ ಬಿಡಿ ಈ  ಕಿಚನ್ ಟ್ರಿಕ್ಸನ್ನು (kitchen tricks) ಟ್ರೈ ಮಾಡಿ ನೋಡಿ. ಈ ಹ್ಯಾಬಿಟ್ಸ್ ನಿಮ್ಮ ಕೆಲಸವನ್ನು ತುಂಬಾ ಈಸಿಯಾಗಿ ಮತ್ತು ಟೆನ್ಶನ್ ಫ್ರೀ ಮಾಡುತ್ತೆ. 

PREV
17
ಈ Kitchen Hacks ಟ್ರೈ ಮಾಡಿ ನಿಮಿಷದಲ್ಲಿ ಸುಟ್ಟ ಪಾತ್ರೆ ಹೊಳೆಯುವಂತೆ ಮಾಡಿ

ಅಡುಗೆ ಮಾಡುವಾಗ ಕುಕ್ಕರ್, ಕಡಾಯಿ ಅಥವಾ ಯಾವುದೇ ಪ್ಯಾನ್ ಸುಟ್ಟರೆ, ಅದನ್ನು ಉಜ್ಜಿ ಉಜ್ಜಿ ತೆಗೆವ ಅಗತ್ಯವಿಲ್ಲ. ಅದಕ್ಕೆ 1 ಟೀಸ್ಪೂನ್ ಸರ್ಫ್ ಎಕ್ಸೆಲ್ (surf excel) ಪುಡಿ ಸೇರಿಸಿ ಮತ್ತು ಸುಟ್ಟ ಗುರುತು ಇರುವವರೆಗೆ ಅದನ್ನು ನೀರಿನಿಂದ ತುಂಬಿಸಿ. 

27

ಆ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಸಿಮ್ ನಲ್ಲಿ ಕುದಿಯಲು ಬಿಡಿ. ಕ್ರಮೇಣ, ಸುಟ್ಟ ಪದರವು ತನ್ನಷ್ಟಕ್ಕೆ ತಾನೇ ಹೊರಬರಲು ಪ್ರಾರಂಭಿಸುತ್ತದೆ ಮತ್ತು ಪಾತ್ರೆಯಲ್ಲಿ ಯಾವುದೇ ಗೀರುಗಳು ಸಹ ಉಳಿಯೋದಿಲ್ಲ. ಇದನ್ನು ಮಾಡೋ ಮೂಲಕ ಪಾತ್ರೆಗಳು ಹೊಳೆಯುವಂತೆ ಮಾಡಬಹುದು.

37

ಬೇಸಿಗೆಯಲ್ಲಿ ನೀವು ನಿಂಬೆ ಜ್ಯೂಸ್ ಕುಡಿಯಲು ಬಯಸುತ್ತೀರಾ? ಹಾಗಾದ್ರೆ ಒಂದೇ ಸಲ ಸಾಕಷ್ಟು ನಿಂಬೆ ರಸ ತೆಗೆದು ಐಸ್ ಟ್ರೇಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ.  ನಿಮಗೆ ಲೆಮನ್ ಜ್ಯೂಸ್ (lemon juice) ಕುಡಿಬೇಕು ಅನಿಸಿದಾಗ,  ಒಂದು ಅಥವಾ ಎರಡು ಐಸ್ ಕ್ಯೂಬ್ ನೀರಿನಲ್ಲಿ ಹಾಕಿ ಮತ್ತು ಸ್ವಲ್ಪ ಬ್ಲಾಕ್ ಸಾಲ್ಟ್ ಮತ್ತು ಸಕ್ಕರೆ ಸೇರಿಸಿ ಮತ್ತು ಸೆಕೆಂಡುಗಳಲ್ಲಿ ನಿಂಬೆ ಜ್ಯೂಸ್ ರೆಡಿ ಮಾಡಿ ಸೇವಿಸಿ.  

47

ಬೆಳ್ಳುಳ್ಳಿ ಸಿಪ್ಪೆ (garlic peel) ಸುಲಿಯೋದು ಕಷ್ಟದ ಕೆಲಸ ಎಂದು ಎಲ್ಲರಿಗೂ ಅನಿಸುತ್ತೆ. ಅಡುಗೆ ಮಾಡುವ ಸಮಯದಲ್ಲಿ ಅದನ್ನು ಸುಲಿಯೋದೇ ಒಂದು ತಲೆಬಿಸಿಯ ಕೆಲಸ. ಹಾಗಾದ್ರೆ ಏನು ಮಾಡೋದು?, ಬೆಳ್ಳುಳ್ಳಿಯನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ ನಂತರ ಮಧ್ಯದಿಂದ ಸಣ್ಣದಾಗಿ ಕತ್ತರಿಸಿ, ಬೆಳ್ಳುಳ್ಳಿ ಬೇಗನೆ ಸಿಪ್ಪೆ ಬಿಡುತ್ತೆ.

57

ಈರುಳ್ಳಿಯ ಸಿಪ್ಪೆ ಸುಲಿಯಲೂ ಕೂಡ ಈ ಟ್ರಿಕ್ಸ್ ಯೂಸ್ ಮಾಡಬಹುದು.  ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತೆ, ಇದರಿಂದ ಕತ್ತರಿಸೋದೆ ಕಷ್ಟವಾಗುತ್ತೆ ಅಲ್ವಾ? ನೀವು ನೀರಿನಲ್ಲಿ  ಈರುಳ್ಳಿಯನ್ನು ಹಾಕಿಟ್ಟು ನೋಡಿ. ನೀರಿನಲ್ಲಿ ನೆನೆಸಿದ ಈರುಳ್ಳಿಯ ಸಿಪ್ಪೆ ಸುಲಿದು, ಕಟ್ ಮಾಡಿದರೆ ಕಣ್ಣೀರು ಸಹ ಬರಲ್ಲ.  

67

ಫ್ರಿಡ್ಜ್ನಲ್ಲಿ ನೀರಿಡಲು (fridge water) ಮರೆತ್ರೆ, ಅಥವಾ ಫ್ರಿಜ್ ನೀರು ಕುಡಿಯೋದು ಆರೋಗ್ಯಕ್ಕೆ ಹಾನಿ ಎಂದು ನಿಮಗೆ ಅನಿಸಿದ್ರೆ ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿ ನೀರು ಇರಿಸಿ ಮತ್ತು ಅದನ್ನು ಬೆಳಿಗ್ಗೆಯೇ ತುಂಬಿಸಿ. ಆರೋಗ್ಯ ದೃಷ್ಟಿಯಿಂದ ಮಡಕೆಯಲ್ಲಿ ಇರಿಸಿದ ನೀರು ಫ್ರಿಜ್ ಗಿಂತ ಉತ್ತಮ ಮತ್ತು ತುಂಬಾ ತಂಪಾಗಿರುವುದಿಲ್ಲ, ಆಗ ಗಂಟಲು ನೋವು ಸಹ ಆಗೋದಿಲ್ಲ.

77

ಹಾಲನ್ನು ಕುದಿಸುವ ಕೆಲಸವು ಯಾವಾಗಲೂ ಇದ್ದೇ ಇರುತ್ತದೆ. ಹಾಲು ಕುದಿ ಬಂದು ಚೆಲ್ಲಿದರೆ ಸಾಕಷ್ಟು ಕೆಲಸ ಹೆಚ್ಚಾಗುತ್ತೆ. ಈ ಸಮಸ್ಯೆ ತಪ್ಪಿಸಲು, ಯಾವಾಗಲೂ ಹಾಲನ್ನು ಸಿಮ್ ಗ್ಯಾಸ್ನಲ್ಲಿ ಕುದಿಸಿ. ಇದು ಎಂದಿಗೂ ಹಾಲನ್ನು ಚೆಲ್ಲಲು ಬಿಡೋದಿಲ್ಲ.  

click me!

Recommended Stories