ನಾಲಿಗೆ ಬಣ್ಣ ರಟ್ಟು ಮಾಡುತ್ತೆ ಅನಾರೋಗ್ಯದ ಗುಟ್ಟು!

First Published | Dec 20, 2022, 4:48 PM IST

ನಾಲಿಗೆಯ ಮೇಲಿನ ಕೊಳಕನ್ನು ನೀವು ಇಗ್ನೋರ್ ಮಾಡ್ಬೇಡಿ, ಯಾಕಂದ್ರೆ ಅದು ಬಹಳ ದೊಡ್ಡ ಅಪಾಯದ ಸಂಕೇತವಾಗಿರಬಹುದು. ಯಾಕಂದ್ರೆ, ದೇಹದಲ್ಲಿ ವಿಷವು ಹೆಚ್ಚಾಗಲು ಪ್ರಾರಂಭಿಸಿದಾಗ, ನಾಲಿಗೆಯ ಬಣ್ಣ ಬದಲಾಗುತ್ತೆ. ಇದನ್ನು ತಪ್ಪಿಸಲು, ನಾಲಿಗೆಯನ್ನು ಪ್ರತಿದಿನ ಕ್ಲೀನ್ ಮಾಡಬೇಕು. ನಾಲಿಗೆಯ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ.  

ನಾಲಿಗೆಯ(Tongue) ಬಣ್ಣವು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ತೆರೆಯುತ್ತೆ. ನಾಲಿಗೆ ಬಣ್ಣದೊಂದಿಗೆ, ದೇಹದಲ್ಲಿ ಯಾವ 'ವಿಷ' ಹರಡುತ್ತಿದೆ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು. ದೇಹದಲ್ಲಿರುವ ವಿಷವು ಆರೋಗ್ಯದ ಶತ್ರು ಮತ್ತು ಯಾವುದೇ ವಿಷದಷ್ಟೇ ಹಾನಿಕಾರಕವಾಗಿದೆ. ಈ ವಿಷವು ಅನೇಕ ರೋಗಗಳಿಗೆ ಕಾರಣವಾಗುತ್ತೆ. ನಾಲಿಗೆಯ ಬಣ್ಣದ ಮೂಲಕ ಅಪಾಯ ಗುರುತಿಸೋದು ಹೇಗೆ? ಯಾವ ಬಣ್ಣ ಯಾವ ಸಮಸ್ಯೆಯನ್ನು ಸೂಚಿಸುತ್ತೆ ಅನ್ನೋದರ ಬಗ್ಗೆ ಮಾಹಿತಿ ತಿಳಿಯೋಣ.

ವಿಷವು(Poison) ಹೇಗೆ ರೂಪುಗೊಳ್ಳುತ್ತೆ?

ದೇಹದಲ್ಲಿ ಆಹಾರ ಜೀರ್ಣವಾದಾಗ, ಅದರೊಂದಿಗೆ ಕೆಲವು ವಿಷಗಳು ಸಹ ಬಿಡುಗಡೆಯಾಗುತ್ತವೆ. ಇವುಗಳು ಹೆಚ್ಚಾಗಿ ನಿಷ್ಪ್ರಯೋಜಕ ಮತ್ತು ಹಾನಿಕಾರಕವಾಗಿರುತ್ತವೆ, ಅವುಗಳನ್ನು ಯಕೃತ್ತು, ಮೂತ್ರಪಿಂಡಗಳಂತಹ ಅಂಗಗಳಿಂದ ಸ್ವಚ್ಛಗೊಳಿಸಲಾಗುತ್ತೆ. ಆದರೆ ಅನೇಕ ಬಾರಿ ಈ ವಿಷವು ದೇಹದಲ್ಲಿ ಸಂಗ್ರಹವಾಗುತ್ತೆ ಮತ್ತು ರೋಗಗಳಿಗೆ ಕಾರಣವಾಗುತ್ತೆ.

Tap to resize

ನಾಲಿಗೆಯ ಬಣ್ಣದಿಂದ ಅಪಾಯವನ್ನು ಗುರುತಿಸುತ್ತೆ!

ಡಯಟಿಷಿಯನ್ ಪ್ರಕಾರ, ನಾಲಿಗೆಯ ಬಣ್ಣ ದೇಹದಲ್ಲಿರುವ ವಿಷವನ್ನು ಕಂಡುಹಿಡಿಯುತ್ತೆ. ಹಾಗಾಗಿ ನಾಲಿಗೆ ಬಣ್ಣ ಬಿಳಿ (White) ಇದ್ದರೆ 
- ಕಫದ ಅಸಮತೋಲನದಿಂದಾಗಿ ಲೋಳೆ ಹೆಚ್ಚಾಗಿದೆ ಎಂದರ್ಥ 

ನಾಲಿಗೆಯ ಹಳದಿ-ಹಸಿರು ಬಣ್ಣ

- ಪಿತ್ತರಸ ಅಸಮತೋಲನದ ಲಕ್ಷಣಗಳು ಸೂಚಿಸುತ್ತೆ 

ನಾಲಿಗೆಯ ಬಣ್ಣ ಕಪ್ಪು(Black) ಅಥವಾ ಕಂದು ಬಣ್ಣವಾಗಿದ್ದರೆ
- ವಾತಕ್ಕೆ ಸಂಬಂಧಿತ ತೊಂದರೆಗಳಿವೆ ಎಂದು ಹೇಳುತ್ತವೆ 

ನಾಲಿಗೆಯ ಬಿಳಿ-ಹಳದಿ ಬಣ್ಣ
ರಕ್ತದ ಕೊರತೆಯ ಲಕ್ಷಣಗಳನ್ನು ಅಥವಾ ರಕ್ತ ಸಂಬಂಧಿತ ಸಮಸ್ಯೆಗಳನ್ನು ಸೂಚಿಸುತ್ತೆ. 

ಈ ತೊಂದರೆಗಳನ್ನು ತಪ್ಪಿಸಲು ಪ್ರತಿದಿನ ಹೀಗೆ ಮಾಡಿ.

ಡಯಟೀಷಿಯನ್ ಪ್ರಕಾರ, ನಾಲಿಗೆಯ ಬದಲಾದ ಬಣ್ಣ ದೇಹದಲ್ಲಿ ವಿಷದ ಶೇಖರಣೆಯ ಲಕ್ಷಣವಾಗಿದೆ. ಈ ಸ್ಥಿತಿಯನ್ನು ತಪ್ಪಿಸಲು ಪ್ರತಿದಿನ ನಾಲಿಗೆ ಸ್ಕ್ರ್ಯಾಪಿಂಗ್ ಮಾಡಬೇಕು. ನಾಲಿಗೆಯನ್ನು ಉಜ್ಜಲು ತಾಮ್ರದ ಸ್ಕ್ರ್ಯಾಪರ್  ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ, ಯಾಕಂದ್ರೆ ಅದು ಬ್ಯಾಕ್ಟೀರಿಯಾ (Bacteria) ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.

ಜೀರ್ಣಾಂಗ ವ್ಯವಸ್ಥೆಗೆ(Digestion) ಪ್ರಯೋಜನಗಳು

ನಾಲಿಗೆಯ ಮೇಲೆ ಶೇಖರಣೆಯಾದ ಲೋಳೆಯು ನಾಲಿಗೆಯನ್ನು ಸ್ಕ್ರ್ಯಾಪ್ ಮಾಡುವ ಮೂಲಕ ತೆಗೆದುಹಾಕಬಹುದು. ಈ ಲೋಳೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಅಗತ್ಯವಾದ ನಾಲಿಗೆಯ ಮೇಲಿರುವ ಗ್ರಾಹಕಗಳನ್ನು ತಡೆಯುತ್ತೆ .

ಕೆಟ್ಟ ಉಸಿರಾಟವನ್ನು(Bad breath) ತೆಗೆದುಹಾಕುತ್ತದೆ

ನಾಲಿಗೆಯನ್ನು ಕೆರೆಯುವ ಮೂಲಕ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಬಹುದು. ಈ ಹಾನಿಕಾರಕ ಬ್ಯಾಕ್ಟೀರಿಯಾಗಳು ಬಾಯಿಯ ನೈರ್ಮಲ್ಯ ಹಾಳಾಗುವಿಕೆ, ಹಲ್ಲಿನ  ಉಳುಕು ಮತ್ತು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತವೆ.

ರೋಗ ನಿರೋಧಕ ಶಕ್ತಿ(Immunity power) ಹೆಚ್ಚಿಸುತ್ತೆ

 ಬಾಯಿಯಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಹಾನಿಗೊಳಿಸಬಹುದು. ನಾಲಿಗೆ ಸ್ಕ್ರ್ಯಾಪಿಂಗ್ ಈ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತೆ  ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತೆ.

ಅಂಗಗಳು ಉತ್ತಮವಾಗಿ ಕೆಲಸ ಮಾಡುತ್ತವೆ

ಪ್ರತಿದಿನ ನಾಲಿಗೆಯನ್ನು ಕ್ಲೀನ್ ಮಾಡೋದರಿಂದ, ಅಂಗಗಳು ಸಕ್ರಿಯವಾಗುತ್ತವೆ ಮತ್ತು ಅವುಗಳ ದಕ್ಷತೆ ಹೆಚ್ಚಾಗುತ್ತೆ. ಈ ಉತ್ತಮ ಅಭ್ಯಾಸವು ನಾಲಗೆಯಿಂದ ಡೆಡ್ ಸೆಲ್ಸ್(Dead cells), ವಿಷ ತೆಗೆದು ಹಾಕುವ ಮೂಲಕ ಅರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತೆ.

Latest Videos

click me!