ತೂಕ ಕಡಿಮೆ ಮಾಡಿ ಕೊಳ್ಳಬೇಕಾ? ಮನಸಾರೆ ನಗುವುದು ಕಲೀರಿ ಸಾಕು!

First Published | Dec 19, 2022, 5:41 PM IST

ನೀವು ದೀರ್ಘಕಾಲದಿಂದ ಒತ್ತಡದಲ್ಲಿದ್ದರೆ ಅಥವಾ ಸ್ನಾಯು ನೋವಿನಿಂದ ಬಳಲುತ್ತಿದ್ದರೆ, ಆಗ ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ಹದಿನೈದು ನಿಮಿಷಗಳ ನಗುವನ್ನು ಸೇರಿಸಬೇಕು. ನಗೋದ್ರಿಂದ ಏನಾಗುತ್ತೆ ಅಂತಾ ಕೇಳ್ಬೇಡಿ. ನಗೋದ್ರಿಂದಾ ತುಂಬಾ ಆಗುತ್ತೆ. ಏನೇನು ಆಗುತ್ತೆ, ಅನ್ನುವ ಬಗ್ಗೆ ತಿಳಿಯೋಣ

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು (physical and mental health) ಕಾಪಾಡಿಕೊಳ್ಳಲು, ನಾವು ವಿವಿಧ ಆಹಾರಗಳನ್ನು ಅನುಸರಿಸುತ್ತೇವೆ ಮತ್ತು ಅನೇಕ ದೈಹಿಕ ಚಟುವಟಿಕೆಗಳನ್ನು ಸಹ ಮಾಡ್ತೇವೆ. ಇದೆಲ್ಲದರ ಜೊತೆಗೆ, ದಿನವಿಡೀ 15 ನಿಮಿಷಗಳ ನಗು ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ ಅನ್ನೋದು ಗೊತ್ತಾ?. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ನೋವು ನಿವಾರಣೆ ಮಾಡೋವರೆಗೂ ನಿಮ್ಮ ನಗು ನಿಮಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿದರೆ ನೀವು ಅಚ್ಚರಿಗೊಳ್ಳೋದು ಖಚಿತ. ಇದು ನಿಮ್ಮನ್ನು ಮಾನಸಿಕವಾಗಿ ಬಲಪಡಿಸುವುದಲ್ಲದೆ, ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡೂ ಒಂದಕ್ಕೊಂದು ಸಂಬಂಧಿಸಿವೆ. ಇವುಗಳಲ್ಲಿ ಯಾವುದಾದರೂ ಒಂದು ಪರಿಣಾಮ ಬೀರಿದರೆ. ಆದ್ದರಿಂದ ಇನ್ನೊಂದರ ಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ. ಅದೇ ನಗು ಈ ಎರಡರ ಸಂಯೋಜನೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ನಿಮ್ಮನ್ನು ದೈಹಿಕವಾಗಿ ಬಲವಾಗಿರಿಸುತ್ತದೆ. ಆದ್ದರಿಂದ ಪ್ರತಿದಿನ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ನಗಲು ಪ್ರಯತ್ನಿಸಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕುಳಿತುಕೊಳ್ಳಿ ಮತ್ತು ಮೋಜು ಮಾಡಿ ಅಥವಾ ನಿಮಗೆ ಬಹಿರಂಗವಾಗಿ ನಗಲು ಸಹಾಯ ಮಾಡುವ ಕೆಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇಲ್ಲಿ ನಗೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದರ ಮಾಹಿತಿ ಇದೆ ತಿಳಿಯಿರಿ…

Tap to resize

ನಗುವುದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಇಲ್ಲಿದೆ ನೋಡಿ

ವೆಸ್ಟರ್ನ್ ಒಂಟಾರಿಯೊ ವಿಶ್ವವಿದ್ಯಾಲಯದ ಪ್ರೊಫೆಸರ್ ಮಾರ್ಟಿನ್ ನಗೆಯ ದೈಹಿಕ ಆರೋಗ್ಯ ಪ್ರಯೋಜನಗಳ ಬಗ್ಗೆ ನಡೆಸಿದ ಸಂಶೋಧನೆಯು ನಗುವು ದೈಹಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ (Possitive Effect) ಬೀರುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು (Mental Health) ಸಮತೋಲನಗೊಳಿಸುತ್ತದೆ ಎಂದು ಬಹಿರಂಗಪಡಿಸಿದೆ. ಇದು ದೈಹಿಕ ಆರೋಗ್ಯಕ್ಕೆ ಅನೇಕ ರೂಪಗಳಲ್ಲಿ ಪ್ರಯೋಜನಕಾರಿಯಾಗಿದೆ.

ನಗು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ನಗುವುದು ಕಾರ್ಟಿಸೋಲ್ (stress hormones)) ಅನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಕೋಶಗಳನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಇದು ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ರೋಗಗಳ ವಿರುದ್ಧ ಹೋರಾಡಲು ದೇಹವು ಸಂಪೂರ್ಣವಾಗಿ ಸಿದ್ಧವಾಗಿರುತ್ತದೆ.

ನಗುವು ದೇಹದಲ್ಲಿ ಎಂಡಾರ್ಫಿನ್ ಹೆಚ್ಚಿಸುತ್ತದೆ

ಎಂಡಾರ್ಫಿನ್ (endorphins)ದೇಹದಲ್ಲಿ ನೈಸರ್ಗಿಕವಾಗಿ ತಯಾರಿಸಲಾದ ಒಂದು ರೀತಿಯ ರಾಸಾಯನಿಕ. ಇದು ನೋವಿನಿಂದ ಪರಿಹಾರ ಪಡೆಯಲು ಮತ್ತು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಗೋದ್ರಿಂದ ಈ ಹಾರ್ಮೋನ್ ದೇಹದಲ್ಲಿ ವೇಗವಾಗಿ ಬಿಡುಗಡೆಯಾಗುತ್ತದೆ. ಈ ಕಾರಣದಿಂದಾಗಿ ದೀರ್ಘಕಾಲದ ನೋವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

ಇದು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ

ನಗುವು ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತದೆ, ಇದರಿಂದಾಗಿ ರಕ್ತದ ಹರಿವು ಸರಾಗವಾಗಿರುತ್ತದೆ. ನಗೋದ್ರಿಂದ ಸರಿಯಾದ ಪ್ರಮಾಣದ ರಕ್ತವು ದೇಹದ ಎಲ್ಲೆಡೆಗೂ ತಲುಪುತ್ತದೆ ಮತ್ತು ಹೃದಯದ ಮೇಲೆ ಕಡಿಮೆ ಹೊರೆ ಇರುತ್ತದೆ. ಜೊತೆಗೆ ಹೃದಯಾಘಾತ ಮತ್ತು ಇತರ ಹೃದಯ ರಕ್ತನಾಳದ ಕಾಯಿಲೆಗಳನ್ನು ಹೊಂದುವ ಸಾಧ್ಯತೆಗಳು ಸಹ ಬಹಳವಾಗಿ ಕಡಿಮೆಯಾಗುತ್ತವೆ.

ನಗು ಕ್ಯಾಲರಿ ಬರ್ನ್ ಮಾಡುತ್ತೆ

ಪ್ರತಿದಿನ ನಿಯಮಿತವಾಗಿ 10 ರಿಂದ 15 ನಿಮಿಷಗಳ ನಗುವು ಸೀಮಿತ ಪ್ರಮಾಣದ ಕ್ಯಾಲೊರಿಗಳನ್ನು ಬರ್ನ್ (burns calories) ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ನಮ್ಮ ಫಿಟ್ ನೆಸ್ ನ ಒಂದು ಭಾಗವಾಗಬಹುದು. ಹಾಗಾಗಿ ನಿಮ್ಮ ನಿಯಮಿತ ದಿನಚರಿಯಲ್ಲಿ ನಗುವನ್ನು ಸೇರಿಸಲು ಮರೆಯಬೇಡಿ.

ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಜುಲೈ ಮತ್ತು ಆಗಸ್ಟ್ 2016 ರಲ್ಲಿ ಅಮೇರಿಕನ್ ಜರ್ನಲ್ ಆಫ್ ಲೈಫ್ಸ್ಟೈಲ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ನಿಮ್ಮ ನಗುವು ಒತ್ತಡದ ಹಾರ್ಮೋನ್ (stress hormones) ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಇದು ಎಂಡಾರ್ಫಿನ್ ಬಿಡುಗಡೆ ಮಾಡುತ್ತದೆ. ಎಂಡಾರ್ಫಿನ್ ಗಳು ಒಂದು ರೀತಿಯ ರಾಸಾಯನಿಕವಾಗಿದ್ದು, ಇದು ನಿಮ್ಮ ದೇಹವನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ಒತ್ತಡ ಮುಕ್ತವಾಗಿರಲು ಸಹಾಯ ಮಾಡುತ್ತದೆ. 

ನಗುವಿನಿಂದ ಸಾಮಾಜಿಕವಾಗಿಯೂ ಪ್ರಯೋಜನವಿದೆ

ಡಲ್ ಆಗಿರೋರಿಗಿಂತ, ನಗು ಮುಖದಿಂದ ಇರುವ ವ್ಯಕ್ತಿಯ ಕಡೆಗೆ ಜನರು ಸಾಮಾನ್ಯವಾಗಿ ಆಕರ್ಷಿತರಾಗುತ್ತಾರೆ. ಇದರೊಂದಿಗೆ, ಇದು ನಿಮ್ಮ ವ್ಯಕ್ತಿತ್ವವನ್ನು ವಿನೋದಮಯವಾಗಿಸುತ್ತದೆ. ಈ ಕಾರಣದಿಂದಾಗಿ ಜನರೊಂದಿಗಿನ ನಿಮ್ಮ ಸಂಬಂಧವು ಗಾಢವಾಗುತ್ತದೆ. ಅದೇ ಸಮಯದಲ್ಲಿ, ಕಚೇರಿಯಲ್ಲಿ ಗ್ರೂಪ್ ವರ್ಕ್ ಮಾಡಲು ಸಹ ಸಹಾಯ ಮಾಡುತ್ತದೆ.  

ನಿಮ್ಮ ದಿನಚರಿಯಲ್ಲಿ ನಗುವನ್ನು ಅಳವಡಿಸಿಕೊಳ್ಳಲು ಕೆಲವು ಸುಲಭ ತಂತ್ರಗಳು ಇಲ್ಲಿವೆ.

1. ಪ್ರತಿದಿನ ಜೋಕ್ಸ್ ಕಾಮಿಕ್ಸ್ ಮುಂತಾದ ತಮಾಷೆಯ ಪುಸ್ತಕಗಳನ್ನು ಓದಿ. 
2. ಸ್ನೇಹಿತರು, ಕುಟುಂಬ ಮತ್ತು ಮೋಜಿನ ಜನರೊಂದಿಗೆ ಸಮಯ ಕಳೆಯಿರಿ ಮತ್ತು ತಮಾಷೆಯ ವಿಷಯಗಳನ್ನು ಹಂಚಿಕೊಳ್ಳಿ.
3. ಹಾಸ್ಯ ಚಲನಚಿತ್ರ ಅಥವಾ ಕಾಮಿಡಿ ಶೋಗಳನ್ನು ನೋಡಿ.
4. ನಗು ಯೋಗವನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನವಾಗುತ್ತದೆ.
5. ನಿಮ್ಮ ಜೀವನವನ್ನು ಸಕಾರಾತ್ಮಕ ವಿಷಯಗಳ ಕಡೆಗೆ ಸೆಳೆಯಿರಿ. ನಿಮ್ಮೊಂದಿಗೆ ಮಾತನಾಡಿ ಮತ್ತು ನಿಮ್ಮನ್ನು ನಗಿಸಲು ಪ್ರಯತ್ನಿಸಿ.
 

Latest Videos

click me!