ಲವ್ ಲೈಫ್ ರಿಫ್ರೆಶ್ ಮಾಡಿಕೊಳ್ಳಲು ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳೊದನ್ನ ಮರಿಬೇಡಿ

First Published Dec 20, 2022, 4:55 PM IST

ಪ್ರೇಮಿಗಳೇ ಆಗಿರಲಿ, ದಂಪತಿಗಳೇ ಆಗಿರಲಿ ಕೆಲವೊಂದು ಸಂದರ್ಭಗಳಲ್ಲಿ ಅಥವಾ ಕೆಲವರ ಜೀವನದಲ್ಲಿ ಸಂಗಾತಿಗಳ ನಡುವೆ ಪರಸ್ಪರ ಜಗಳ, ವೈಮನಸ್ಸು ಉಂಟಾಗುತ್ತೆ. ಇದು ಸಾಮಾನ್ಯವೂ ಹೌದು, ಆದರೆ ಅದು ಅತಿರೇಕಕ್ಕೆ ಹೋದಾಗ ಸಂಬಂಧ ಮುರಿದು ಬೀಳುತ್ತದೆ. ಹೀಗೆ ಆಗಬಾರದು ಎಂದಾದರೆ ನೀವು ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳಬೇಕು. 

ಕೋಪ, ದ್ವೇಷ ಎಲ್ಲಾ ಬಿಟ್ಟು ಸಂಬಂಧವನ್ನು ಮತ್ತೆ ಹೊಸದಾಗಿಸಲು ಒಂದು ಸಣ್ಣ ಬ್ರೇಕ್ (break in relationship) ತುಂಬಾ ಪ್ರಯೋಜನಕಾರಿ. ಹೌದು, ಒಂದು ಸಂಬಂಧವು ದೀರ್ಘಕಾಲದಿಂದ ನಡೆಯುತ್ತಿರುವಾಗ ಅದರಲ್ಲಿ ವಿರಾಮ ತೆಗೆದುಕೊಳ್ಳುವುದು ಅಗತ್ಯ. ಅಂತಹ ಸಂಬಂಧ ನೀರಸವಾಗುತ್ತದೆ. ಸಂಬಂಧದಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳಲು ಅಂತರವೂ ಅತ್ಯಗತ್ಯ. ಸ್ವಲ್ಪ ಸಮಯ ದೂರ ಇರೋದರಿಂದ ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚುತ್ತೆ, ಇಬ್ಬರಿಗೂ ಇನ್ನೊಬ್ಬರ ಅಗತ್ಯ ತಮ್ಮ ಜೀವನದಲ್ಲಿ ಎಷ್ಟಿದೆ ಮತ್ತು ಅವರನ್ನು ತಾವು ಎಷ್ಟು ಪ್ರೀತಿಸುತ್ತಿದ್ದಾರೆ ಅನ್ನೋದು ತಿಳಿಯುತ್ತೆ.

ಸಂಬಂಧದಲ್ಲಿ ಯಾವಾಗ ಸಣ್ಣ ವಿರಾಮ ತೆಗೆದುಕೊಳ್ಳಬೇಕು ಮತ್ತು ಅದು ನಿಮ್ಮ ಪ್ರೀತಿಯ ಜೀವನದಲ್ಲಿ ಹೇಗೆ ಬದಲಾವಣೆಯನ್ನು ತರುತ್ತದೆ ಎಂಬುದನ್ನು ಸರಿಯಾಗಿ ತಿಳಿಯಬೇಕು ಅನ್ನೋದಾದ್ರೆ ನೀವು ಈ ಲೇಖನವನ್ನು ಓದಲೇಬೇಕು. ಜೊತೆಗೊಂದು ಸಣ್ಣ ಬ್ರೇಕ್ ತೆಗೆದುಕೊಳ್ಳಬೇಕು.
 

Don't forget to take a short break to refresh your love life?

ಸಂಬಂಧದಲ್ಲಿ ಬ್ರೇಕ್ ತೆಗೆದುಕೊಳ್ಳುವ ವಿಷಯಕ್ಕೆ ಬಂದಾಗ, ನೀವು ಯಾವಾಗ ಬ್ರೇಕ್ ತೆಗೆದುಕೊಳ್ಳಬೇಕು ಎಂಬುದು ಮನಸ್ಸಿನಲ್ಲಿ ಬರುವ ಮೊದಲ ಆಲೋಚನೆಯಾಗಿದೆ. ಸಂಬಂಧದಲ್ಲಿ, ಪ್ರೀತಿಗಿಂತ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಹೆಚ್ಚು ಜಗಳಗಳು ಇದ್ದಾಗ ನೀವು ಬ್ರೇಕ್ ತೆಗೆದುಕೊಳ್ಳಬೇಕು.ಇಲ್ಲವಾದರೆ ನಿಮ್ಮ ನಡುವಿನ ಬಿರುಕು ಹೆಚ್ಚಾಗಲು ಪ್ರಾರಂಭಿಸುತ್ತದೆ, ಆದ್ದರಿಂದ ಸಣ್ಣ ವಿರಾಮವನ್ನು ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ.

ನಿಮ್ಮ ಬಗ್ಗೆ ಯೋಚಿಸುವುದು ಮುಖ್ಯ.

ಅನೇಕ ಬಾರಿ ನೀವು ಸಂಬಂಧದಲ್ಲಿ ಎಷ್ಟು ಕಳೆದುಹೋಗುತ್ತೀರಿ ಎಂದರೆ ನೀವು ನಿಮ್ಮ ಬಗ್ಗೆ ಯೋಚಿಸಲು ಮರೆಯುತ್ತೀರಿ. ನಿಮ್ಮ, ಇಡೀ ಜಗತ್ತು ಆ ಸಂಬಂಧದ ಸುತ್ತ ಸುತ್ತುವಂತೆ ನಿಮಗೆ ಅನಿಸುತ್ತೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಸಂಬಂಧದಿಂದ ವಿರಾಮ ತೆಗೆದುಕೊಳ್ಳಬೇಕು, ಇದರಿಂದ ನೀವು ನಿಮಗೆ ಸ್ವಲ್ಪ ಸಮಯ ನೀಡಬಹುದು. ನೀವು ಬಯಸಿದ್ದನ್ನು ಮಾಡಬಹುದು.

ಸಂಬಂಧವು ನೀರಸವಾಗಿರಲು ಬಿಡಬೇಡಿ

ನೀವು ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದರೆ, ನಿಮ್ಮ ನಡುವಿನ ಜಗಳ ಹೆಚ್ಚಾಗುತ್ತವೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಸಂಬಂಧದ ಬಗ್ಗೆ ಬೇಸರಗೊಳ್ಳುತ್ತೀರಿ. ಸಂಗಾತಿಯ ಸಣ್ಣ ವಿಷಯಗಳಿಂದಲೂ ನಿಮಗೆ ಕಿರಿಕಿರಿಯಾಗಬಹುದು. ಇದರಿಂದ ಕೋಪವೂ ಬರಬಹುದು. ಈ ಟೈಮ್ ಲ್ಲಿ ನೀವು ಒಂದು ಸಣ್ಣ ವಿರಾಮ ತೆಗೆದುಕೊಂಡರೆ, ಎಲ್ಲಾ ಕಿರಿ ಕಿರಿ ದೂರವಾಗುತ್ತೆ.

ಕಮ್ಯೂನಿಕೇಶನ್ ಗ್ಯಾಪ್

ದೀರ್ಘಕಾಲದವರೆಗೆ ಸಂಬಂಧದಲ್ಲಿ ಉಳಿಯುವುದು ನಿಮ್ಮ ಮತ್ತು ಸಂಗಾತಿಯ ನಡುವೆ ಕಮ್ಯೂನಿಕೇಶನ್ ಗ್ಯಾಪ್ (communication gap) ಸೃಷ್ಟಿಸುತ್ತದೆ. ನೀವು ನಿಮ್ಮ ಸಂಗಾತಿಗೆ ಒಗ್ಗಿಕೊಳ್ಳುವುದರಿಂದ ಇದು ಸಂಭವಿಸುತ್ತದೆ. ನೀವು ಅವರಿಗೆ ಕಡಿಮೆ ಸಮಯ ನೀಡಲು ಪ್ರಾರಂಭಿಸುತ್ತೀರಿ ಮತ್ತು ಅವರೊಂದಿಗೆ ಯಾವುದೇ ಸೀಕ್ರೆಟ್ ಹಂಚಿಕೊಳ್ಳೋದಿಲ್ಲ.ನಿಮ್ಮ ನಡುವೆ ಕಮ್ಯೂನಿಕೇಶನ್ ಗ್ಯಾಪ್ ಹೊಂದಲು ನೀವು ಬಯಸದಿದ್ದರೆ, ನೀವು ಬ್ರೇಕ್ ತೆಗೆದುಕೊಳ್ಳಬೇಕು. ಇದರ ನಂತರ, ನೀವು ಮತ್ತೆ ಭೇಟಿಯಾದಾಗ, ಸಂಗಾತಿಯೊಂದಿಗೆ ಹಂಚಿಕೊಳ್ಳಲು ನೀವು ಸಾಕಷ್ಟು ವಿಷಯಗಳನ್ನು ಹೊಂದಿರುತ್ತೀರಿ.

ಜಗಳ ಹೆಚ್ಚಾದಾಗ ಒಂದು ಬ್ರೇಕ್ (break after fighting)

ನೀವು ಯಾರೊಂದಿಗಾದರೂ ವಾಸಿಸಲು ಪ್ರಾರಂಭಿಸಿದಾಗ, ಅನೇಕ ಬಾರಿ ನಿಮ್ಮ ನಡುವೆ ಜಗಳಗಳು ಸಂಭವಿಸುತ್ತವೆ, ಆದರೆ ಕೆಲವೊಮ್ಮೆ ಈ ಜಗಳಗಳು ಬಹಳಷ್ಟು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿ ಬಂದಾಗ, ನೀವು ನಿಮ್ಮ ಸಂಬಂಧದಲ್ಲಿ ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳಬೇಕು. ಸ್ವಲ್ಪ ದಿನ ದೂರ ಇದ್ದರೆ, ಇನ್ನೊಬ್ಬರ ಅಗತ್ಯ ಎಷ್ಟಿದೆ ಅನ್ನೋದು ತಿಳಿಯುತ್ತೆ. ಅಲ್ಲದೆ, ನೀವು ನಿಮ್ಮ ಸಂಬಂಧದ ಬಗ್ಗೆ ಉತ್ತಮವಾಗಿ ಯೋಚಿಸಲು ಸಾಧ್ಯವಾಗುತ್ತದೆ.

ದೀರ್ಘಕಾಲದವರೆಗೆ ಕೆಲಸ ಮಾಡಿದ ನಂತರ ವಿರಾಮವನ್ನು ತೆಗೆದುಕೊಳ್ಳುವುದು ಹೇಗೆ ಅಗತ್ಯವಾಗುತ್ತದೆಯೋ, ಹಾಗೆಯೇ ದೀರ್ಘಕಾಲದ ಸಂಬಂಧದಲ್ಲಿ ಸ್ವಲ್ಪ ಸಮಯದವರೆಗೆ ಬ್ರೇಕ್ ತೆಗೆದುಕೊಳ್ಳುವುದು ಸಹ ಅಗತ್ಯ. ನೀವು ಸಂಬಂಧದಿಂದ ವಿರಾಮವನ್ನು ತೆಗೆದುಕೊಂಡರೆ, ನಿಮ್ಮ ಸಂಬಂಧವು ಮತ್ತೆ ಹೊಸದಾಗುತ್ತದೆ ಮತ್ತು ನಿಮ್ಮ ಪ್ರೀತಿಯ ಜೀವನವು ತಾಜಾಗೊಳ್ಳುತ್ತದೆ. ಅದೇ ಸಮಯದಲ್ಲಿ, ಜಗಳಗಳು ಕಡಿಮೆಯಾಗುತ್ತವೆ ಮತ್ತು ಪ್ರೀತಿಯೂ ಹೆಚ್ಚಾಗುತ್ತದೆ.

click me!